Advertisement

“ಗುರಿ,ಧ್ಯೇಯ ಸಾಧನೆಗೆ ಬದುಕು ಸವೆಸಿದವರು’

08:56 PM Jul 24, 2019 | Sriram |

ಪೆರಡಾಲ: ಎಸ್‌.ಎನ್‌.ಉಪಾಧ್ಯಾಯರು ಒಂದು ಉದಾತ್ತ ಧ್ಯೇಯ ಸಾಧನೆಗಾಗಿ ಶ್ರೀಗಂಧದಂತೆ ತನ್ನ ಬದುಕನ್ನು ತೇದುಕೊಂಡವರು.

Advertisement

ಮಾತು, ಸಂಗೀತ, ಮೌನ ಮತ್ತು ಧ್ಯಾನದ ಮಹತ್ವವನ್ನು ಅರಿತಿದ್ದ ಅವರು ಸಂಗೀತದ ಝೇಂಕಾರದ ಮೂಲಕವೇ ವೈಯಕ್ತಿಕ ಬೆಳವಣಿಗೆ ಮತ್ತು ನಾಡಿನ ಬೆಳವಣಿಗೆಯನ್ನು ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು. ನಾರಾಯಣೀಯಮ್‌ ಇಷ್ಟೊಂದು ಬೆಳವಣಿಗೆ ಸಾಧಿಸಿದ್ದರೆ ಅದರ ಹಿಂದಿನ ಚಾಲಕಶಕ್ತಿ ಶಂಕರನಾರಾಯಣ ಉಪಾಧ್ಯಾಯರು ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ| ವಸಂತಕುಮಾರ ಪೆರ್ಲ ಅವರು ಹೇಳಿದರು.

ಮಾವಿನಕಟ್ಟೆಯ ಬಳ್ಳಪದವಿನಲ್ಲಿರುವ ಸಂಗೀತ ಪಾಠಶಾಲೆ ನಾರಾಯಣೀಯಮ್‌ಗೆ ಭೂದಾನ ಮಾಡಿ ಅದರ ಹುಟ್ಟಿಗೆ ಕಾರಣಕರ್ತರಾದ ಬಳ್ಳಪದವು ಶಂಕರನಾರಾಯಣ ಉಪಾಧ್ಯಾಯರ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೂರಾರು ಮಂದಿ ಅಭಿಮಾನಿಗಳ ಮತ್ತು ಸಂಗೀತ ಪ್ರೇಮಿಗಳ ಸಮ್ಮುಖದಲ್ಲಿ ನಾರಾಯಣೀಯಮ್‌ ಸಮುತ್ಛಯದಲ್ಲಿ ಎಸ್‌.ಎನ್‌.ಉಪಾಧ್ಯಾಯರ ನುಡಿನಮನ }ಲ್ಲಿಸಲಾಯಿತು.ಶಂಕರನಾರಾಯಣ ಉಪಾಧ್ಯಾಯರು ವೇದಶಾಸ್ತÅದಲ್ಲಿ ಪಾರಂಗತರಾಗಿದ್ದು, ಸಂಗೀತದಲ್ಲಿಯೂ ಆಸಕ್ತರಾಗಿದ್ದುದರಿಂದ ತನ್ನ ಸ್ವಂತ ಭೂಮಿಯನ್ನು ಸಂಗೀತದ ಉದ್ದೇಶಕ್ಕಾಗಿ ದಾನ ಮಾಡಿದರು. ಅದರಿಂದಾಗಿ ಇವತ್ತು ಸಾವಿರಾರು ವಿದ್ಯಾರ್ಥಿಗಳು ಸಂಗೀತ ಕಲಿಯುವಂತಾಗಿದೆ ಎಂದು ರಾಜಾರಾಮ ಪೆರ್ಲ ಹೇಳಿದರು.

ಭೂದಾನ ಮತ್ತು ಗೋದಾನ ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು. ಮರಣದ ಮೊದಲೇ ಭೂದಾನ ಮಾಡಿದ ಎಸ್‌.ಎನ್‌.ಉಪಾಧ್ಯಾಯರು ನೇರವಾಗಿ ಮೋಕ್ಷ ಸಂಪಾದನೆಯ ಅರ್ಹತೆ ಗಳಿಸಿಕೊಂಡಿದ್ದಾರೆ ಎಂದು ಪಳ್ಳತ್ತಡ್ಕದ ಘನಪಾಠಿ ಪುರೋಹಿತ ಶಂಕರನಾರಾಯಣ ಭಟ್‌ ಹೇಳಿದರು.

Advertisement

ಅಗಲ್ಪಾಡಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಭಟ್‌ ಉಪ್ಪಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದಾತ್ತಚರಿತ್ರರು
ಎಸ್‌.ಎನ್‌.ಉಪಾಧ್ಯಾಯರು ಓರ್ವ ಉದಾತ್ತಚರಿತರು. ನಾರಾಯಣೀಯಮ್‌ ಮೂಲಕ ದೈವೀಕ ಕಲೆಯಾದ ಸಂಗೀತವನ್ನು ನಾಡಿಗೆ ಅರ್ಪಿಸಿದ್ದಾರೆ ಎಂದು ಪೆರ್ಲದ ಅಧ್ಯಾಪಕ ಮಾಧವನ್‌ ನಂಬೂದಿರಿ ಕೈದಾಪುರಂ ಹೇಳಿದರು. ನಾರಾಯಣೀಯಮ್‌ ಸಂಗೀತ ಶಾಲೆಯ ಸಂಚಾಲಕರಾದ ಬಳ್ಳಪದವು ಯೋಗೀಶ ಶರ್ಮ ಅವರು ನುಡಿನಮನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next