Advertisement

ಡಿಕೆಶಿ ಪರ ಪ್ರತಿಭಟನೆ ವೇಳೆ ಕಲ್ಲು ತೂರಿದವರು ಕೈ ಕಾರ್ಯಕರ್ತರಲ್ಲ: ಸಿದ್ದರಾಮಯ್ಯ

10:10 AM Sep 06, 2019 | keerthan |

ಹುಬ್ಬಳ್ಳಿ: ನೆರೆ ಪರಿಹಾರ ಕಾಮಗಾರಿ ಕೈಗೊಳ್ಳುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಿವಿ, ಕಣ್ಣು ಹಾಗೂ ದಪ್ಪ ಚರ್ಮ ಇರುವ ಸರಕಾರಕ್ಕೆ ಯಾವುದು ಕೇಳಿಸುತ್ತಿಲ್ಲ. ಸಂತ್ರಸ್ತರ ನೋವು ಆಲಿಸಿವಷ್ಟು ಪುರುಸೊತ್ತು ಸರಕಾರಕ್ಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಗುರುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ಸಾವಿರ ರೂಪಾಯಿ ಕೊಟ್ಟಿದ್ದೇವೆ ಎನ್ನುವುದೊಂದು ಬಿಟ್ಟರೆ ಮತ್ತೇನು ಕಾರ್ಯವಾಗಿಲ್ಲ. ಈ ಹತ್ತು ಸಾವಿರ ರೂಪಾಯಿ ಪರಿಹಾರ ಸಮರ್ಪಕವಾಗಿ ವಿತರಣೆಯಾಗಿಲ್ಲ. ಮನೆ ಕಳೆದುಕೊಂಡವರಿಗೆ ಕನಿಷ್ಠ ಶೆಡ್ ವ್ಯವಸ್ಥೆ ಕೂಡ ಮಾಡಿಲ್ಲ. ಬಹುತೇಕ ಕಡೆಗಳಲ್ಲಿ ಕಾಳಜಿ ಕೇಂದ್ರಗಳು ಮುಚ್ಚಿದ್ದಾರೆ. ನೆರೆ ನಿರ್ವಹಣೆ ಹಾಗೂ ಪರಿಹಾರ ವಿತರಣೆಯಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.

ನಮ್ಮ ಕಾರ್ಯಕರ್ತರಲ್ಲ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವಂತೆ ಸೂಚಿಸಲಾಗಿದೆ. ಕಲ್ಲು ತೂರಾಟ ಮಾಡಿದವರು ನಮ್ಮ ಕಾರ್ಯಕರ್ತರಲ್ಲ. ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಸೇರಿಕೊಂಡು ಇಂತಹ ಕೆಲಸ ಮಾಡಿರುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next