ಬೆಂಗಳೂರು: ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಸ್ವೀಕಾರ ಮಾಡಿದವರು ಈಗ ಹಿಂದುಳಿದ ಸಮಾಜವನ್ನೇ ಮರೆತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸಿದೆ ಈಡಿಗ ಸಮುದಾಯದ ಸ್ವಾಮೀಜಿ ಪ್ರಣವಾನಂದ ಶ್ರೀಗಳ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಡಿಗ, ಬಿಲ್ಲವ, ನಾಮಧರಿ, ದೀವರು ಮತ್ತು ಅತೀ ಹಿಂದುಳಿದವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಅಹಿಂದ ಸ್ಥಾಪನೆಗಾಗಿ ಈಡಿಗ ಸಮುದಾಯದ ಆರ್.ಎಲ್. ಜಾಲಪ್ಪ, ಜೆ.ಪಿ.ನಾರಾಯಣ ಸ್ವಾಮಿ ಅವರು ಆರ್ಥಿಕ ಸಹಾಯ ನೀಡಿದರು. ಆದರೆ ಆ ಸಮುದಾಯವನ್ನು ಬಳಸಿಕೊಂಡು ಏಣಿ ಮಾಡಿಕೊಂಡರು. ಆದರೆ ಇಂತಹ ಸಮುದಾಯ ದೂರ ಇರಿಸಿದ್ದಾರೆ. ಅಹಿಂದ ಹೆಸರಿನಲ್ಲಿ ಒಗ್ಗೂಡಿಸುವುದಾಗಿ ಹೇಳಿಕೊಂಡವರು ಈಗ ಅಹಿಂದ ಸಮುದಾಯ ಮರೆತಿದ್ದಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಮ್ಮನೆ ಇರುವುದಿಲ್ಲ ಎಂದು ಎಚ್ಚರಿಸಿದರು.
ಕುಮಟಾ, ಗಂಗಾವತಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಸ್ಪರ್ಧೆಗೆ ಅವಕಾಶ ಕೇಳಲಾಗಿತ್ತು. ಆದರೆ ಅದನ್ನೂ ನಿರಾಕರಿಸಲಾಗಿದೆ. ಜತೆಗೆ ಬಿ.ಕೆ.ಹರಿಪ್ರಸಾದ್ ಅವರನ್ನು ಕಾಂಗ್ರೇಸ್ ಹೈಕಮಾಂಡ್ ಸಚಿವರನ್ನಾಗಿ ಮಾಡಲು ಹೊರಟ್ಟಿತ್ತು. ಆದರೆ ಇಲ್ಲಿದ್ದವರು ಅವರು ಸಚಿವರಾಗುವ ಅವಕಾಶ ತಪ್ಪಿಸಿದರು ಎಂದು ಕಿಡಿಕಾರಿದರು.
ಇದನ್ನೂ ಓದಿ:MLA: ಹುಟ್ಟುಹಬ್ಬದ ಪ್ರಯುಕ್ತ ಜೀವಂತ ಹಾವನ್ನೇ ಕುತ್ತಿಗೆಗೆ ಸುತ್ತಿಕೊಂಡು ಬಂದ ಶಾಸಕ.!
ಈ ಹಿಂದೆ ದೇವರಾಜು ಅರಸು ಸಚಿವ ಸಂಪುಟದಲ್ಲಿ ಎಸ್ ಬಂಗಾರಪ್ಪ ಅವರನ್ನು ಸಚಿವ ಸ್ಥಾನದಿಂದ ತಪ್ಪಿಸುವ ಕೆಲಸ ಕೇಂದ್ರದಿಂದ ನಡೆದಿತ್ತು. ಆದರೆ ಅದಕ್ಕೆ ಅರಸು ಅವರು ಅವಕಾಶ ನೀಡಲಿಲ್ಲ. ಸಣ್ಣ ಅತಿ ಸಣ್ಣವರ್ಗಕ್ಕೆ ಅವಕಾಶ ನೀಡುತ್ತೇನೆ ಎಂದು ಹೇಳಿ ಬಂಗಾರಪ್ಪ ಅವರಿಗೆ ಅವಕಾಶ ಕಲ್ಪಿಸಿದರು. ದೇವರಾಜು ಅರಸು ನಿಜವಾದ ಅಹಿಂದ ಮುಖಂಡ ಎಂದರು.
ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಜಿಲ್ಲಾ ಮತ್ತು ತಾಲೂಕು ಮಟ್ಟಕ್ಕೆ ತೆಗೆದುಕೊಂಡು ಹೋಗುವುದಾಗಿ ಪ್ರಣವಾನಂದ ಶ್ರೀ ಎಚ್ಚರಿಕೆ ನೀಡಿದರು.