Advertisement

ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು

11:37 PM Sep 03, 2019 | mahesh |

ಪ್ರತಿಯೊಂದು ದೇಶ, ರಾಜ್ಯಕ್ಕೂ ಅದರದ್ದೇ ಆದ ಇತಿಹಾಸವಿರುತ್ತದೆ. ಅದೇ ರೀತಿ ಪ್ರತಿಯೊಂದು ನೀತಿ ನಿಯಮಾವಳಿಗಳ ಹಿಂದೆಯೂ ಒಂದು ಸ್ಪಷ್ಟವಾದ ಉದ್ದೇಶವಿರುತ್ತದೆ. ಅದು ಅದರ ರಚನೆಕಾರನಿಗೆ ಮಾತ್ರ ತಿಳಿದಿರುವಂತದ್ದು ಆಗಿದೆ. ಸಂವಿಧಾನ ಶಿಲ್ಪಿ ಎಂದೇ ಗುರುತಿಸಲ್ಪಡುವ ಡಾ| ಬಿ. ಆರ್‌. ಅಂಬೇಡ್ಕರ್‌ ಅವರಲ್ಲಿಯೂ ಅಂತಹುದೇ ಗುಣಗಳಿದ್ದವು.

Advertisement

ಅಂಬೇಡ್ಕರ್‌ ಅವರ ಆಲೋಚನೆ, ಚಿಂತನೆಗಳು ಯಾವ ರೀತಿ ಇದ್ದವು, ಅವರು ಇತಿಹಾಸವನ್ನು ಗುರುತಿಸಿದ ಬಗೆ ಹೇಗೆ ಎಂಬುದನ್ನು ಕೆಲವರು ಮಾತ್ರ ಗುರುತಿಸಿದ್ದಾರೆ. ಎಚ್. ಎಸ್‌ ಬೇನಾಳ ಅವರು ‘ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು’ ಎಂಬ ಕೃತಿಯಲ್ಲಿ ಅಂಬೇಡ್ಕರ್‌ ಅವರ ವೈಚಾರಿಕ ಚಿಂತನೆಗಳ ಮೂಲಕ , ಮೂಲ ಭಾರತೀಯರ ಇತಿಹಾಸದ ನೈಜ ಚರಿತ್ರೆಯನ್ನು ವ್ಯಕ್ತಪಡಿಸಿದ್ದಾರೆ.

•ಘಟನೆ: 1
ಕ್ರಿಸ್ತಪೂರ್ವ 642ರಲ್ಲಿ ಬಿಹಾರದಲ್ಲಿ ಉದಯಿಸಿದ ಮಗಧ ಸಾಮ್ರಾಜ್ಯವೇ ಭಾರತ ರಾಜಕೀಯ ಇತಿಹಾಸದ ಮೊದಲ ಮೈಲುಗಲ್ಲು, ಈ ಮಗಧ ಸಾಮ್ರಾಜ್ಯವನ್ನು ಸ್ಥಾಪಿಸಿದವನು- ಅನಾರ್ಯ ನಾಗ ಜನಾಂಗಕ್ಕೆ ಸೇರಿದ ಶಿಶುನಾಗ. ಶಿಶುನಾಗನ ನಮ್ರತೆಯಿಂದ ಆರಂಭವಾದ ರಾಜ್ಯ ಸಮರ್ಥ ಆಡಳಿತಗಾರರಾದ ಆತನ ವಂಶಸ್ಥರು ಮಗಧ ಸಾಮ್ರಾಜ್ಯವಾಗಿ ವಿಸ್ತರಿಸಿದರು. ಮುಂದೆ ಹಲವು ರಾಜ ವಂಶಗಳು ಸಾವಿರಾರು ನೀತಿನಿಯಮಗಳನ್ನಿಟ್ಟುಕೊಂಡು ಆಳ್ವಿಕೆ ಮಾಡಿದರು.

•ಘಟನೆ: 2
ಮನುಸ್ಮತಿಯ ಬಗ್ಗೆ ಹೇಳುತ್ತಾ ಅದು ದೈವ ಮೂಲದ್ದೆಂದು ಹೇಳಿಕೊಳ್ಳಲಾಗಿದೆ ಎನ್ನುತ್ತಾರೆ. ಸ್ವಯಂಭೂನಿಂದ ಅದನ್ನು ಕೇಳಿದ ಮನುವೇ ಮನುಷ್ಯನಿಗೆ ಬೋಧಿಸಿದನೆಂದು ಹೇಳಲಾಗುತ್ತದೆ. ಮನುಸ್ಮತಿಯೇ ಹೀಗೆ ಘೋಷಿಸುತ್ತದೆ. ಆದರೆ ಈ ಹೇಳಿಕೆಯ ಆಧಾರಗಳನ್ನು ಯಾರೂ ಪರೀಕ್ಷಿಸಲು ಮುಂದಾಗದಿರುವುದೇ ಆಶ್ಚರ್ಯ. ಭಾರತದ ಪ್ರಾಚೀನ ಇತಿಹಾಸದಲ್ಲಿ ಮನು ಎಂಬ ಹೆಸರಿಗೆ ತುಂಬಾ ಗೌರವ ಇರುವುದರಿಂದ, ಆ ಸಂಹಿತೆಗೂ ಪ್ರಾಚೀನ ಗೌರವ ದಕ್ಕಲೆಂಬ ಉದ್ದೇಶದಿಂದ ಮನುವಿನ ಹೆಸರನ್ನು ಅದಕ್ಕೆ ಜೊಡಿಸಲಾಯಿತು.

•ಘಟನೆ: 3
ಡಾ. ಬಿ. ಆರ್‌ ಅಂಬೇಡ್ಕರ್‌ ಅವರು ಮೊದಲ ದುಂಡುಮೇಜಿನ ಪರಿಷತ್‌ನಲ್ಲಿ ಭಾಗವಹಿಸಿ, ತನ್ನ ಜನರನ್ನು ಪ್ರತಿನಿಧಿಸಿ ಶೋಷಣೆಯ ಪ್ರಪಾತದಡಿಯಲ್ಲಿ ಬಿದ್ದಿರುವ ತನ್ನ ಜನರಿಗಾಗಿ, ಅವರ ಸ್ಥಾನಮಾನಗಳಿಗಾಗಿ, ಅವಕಾಶಗಳಿಂದ ವಂಚಿತರಾದವರಿಗೆ ಅವಕಾಶಗಳನ್ನು ನೀಡುವಂತೆ ಘರ್ಜಿಸಿ ಭಾಷಣ ಮಾಡಿ ಪರಿಷತ್‌ನ ಸದಸ್ಯರ ಗಮನ ಸೆಳೆಯುತ್ತಾರೆ. ಅವರ ಹೋರಾಟದ ಕಿಡಿ ಅಲ್ಲಿ ಗೋಚರಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next