Advertisement

Trains ನಿರ್ವಹಣೆ ಮಾಡಲಾಗದವರು ದೇಶವನ್ನು ಹೇಗೆ ನಡೆಸುತ್ತಾರೆ: ಕೇಜ್ರಿವಾಲ್

05:36 PM Jun 18, 2023 | Team Udayavani |

ಹೊಸದಿಲ್ಲಿ: ಭಾರತೀಯ ರೈಲ್ವೇ ಅಧೀನದಲ್ಲಿರುವ ರೈಲುಗಳ ಎಸಿ ಮತ್ತು ಸ್ಲೀಪರ್ ಕೋಚ್‌ಗಳು ಸಾಮಾನ್ಯಕ್ಕಿಂತ ಕೆಟ್ಟದಾಗಿದೆ ಎಂದು ಆರೋಪಿಸಿ ಭಾನುವಾರ ಬಿಜೆಪಿ ವಿರುದ್ಧ ಟ್ವೀಟ್ ಬಾಣ ಎಸೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರೈಲ್ವೇ ವ್ಯವಸ್ಥೆಯನ್ನು ನಡೆಸಲು ಸಾಧ್ಯವಾಗದಿದ್ದರೆ ಬಿಜೆಪಿ ದೇಶವನ್ನು ಹೇಗೆ ನಡೆಸುತ್ತದೆ ಎಂದು ಪ್ರಶ್ನಿಸಿದ್ದಾರೆ.

Advertisement

ಕೇಜ್ರಿವಾಲ್ ಅವರ ಟ್ವೀಟ್‌ಗೆ ಬಿಜೆಪಿಯು ವ್ಯಂಗ್ಯಾತ್ಮಕ ಉತ್ತರವನ್ನು ನೀಡಿರುವ ಬಿಜೆಪಿ, ದೆಹಲಿ ಸಾರಿಗೆ ನಿಗಮದ ಬಸ್‌ಗಳ ಸ್ಥಿತಿಯ ಬಗ್ಗೆ ಪ್ರಶ್ನಿಸಿದೆ.

ಹವಾನಿಯಂತ್ರಿತ ಮತ್ತು ಸ್ಲೀಪರ್ ಕೋಚ್‌ಗಳು ಮೀಸಲಾತಿಯನ್ನು ಹೊಂದಿರದ ಜನರಿಂದ ತುಂಬಿ ತುಳುಕುತ್ತಿವೆ ಎಂದು ಜನರು ದೂರಿರುವ ಹಲವಾರು ಟ್ವೀಟ್‌ಗಳನ್ನು ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್  ರಿಟ್ವೀಟ್ ಮಾಡಿದ್ದಾರೆ.

ಇಂದು ಎಸಿ ಕೋಚ್ ರಿಸರ್ವೇಶನ್ ಮಾಡಿದರೂ ಕುಳಿತುಕೊಳ್ಳಲು, ಮಲಗಲು ಸೀಟು ಸಿಗುತ್ತಿಲ್ಲ. ಎಸಿ ಮತ್ತು ಸ್ಲೀಪರ್ ಕೋಚ್‌ಗಳು ಸಾಮಾನ್ಯಕ್ಕಿಂತ ಕೆಟ್ಟದಾಗಿದೆ. ಅವರಿಗೆ ಸರ್ಕಾರವನ್ನು ಹೇಗೆ ನಡೆಸಬೇಕೆಂದು ತಿಳಿದಿಲ್ಲ. ಅವರಿಗೆ ಅರ್ಥವಾಗುವುದೇ ಇಲ್ಲ. ಅನಕ್ಷರಸ್ಥ ಸರ್ಕಾರ. ಅವರು ಪ್ರತಿಯೊಂದು ಕ್ಷೇತ್ರವನ್ನು ಹಾಳು ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next