Advertisement
ಪತ್ರಿಕಾಗೋಷ್ಟೀಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಣಿಗೆ ವಿಚಾರವಾಗಿ ಎಲ್ಲಿ ಬೇಕಾದರೂ ಮುಕ್ತವಾಗಿ ಚರ್ಚಿಸಲು ತಯಾರಾಗಿದ್ದೇನೆ. ನಮ್ಮ ಪಕ್ಷಕ್ಕೆ ಅನುಕೂಲ ಆಗಲು ಹೇಳಿಕೆ ನೀಡಿಲ್ಲ. ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟುಕೊಂಡು ಹೋರಾಟ ಮಾಡಿಲ್ಲ. ನಮ್ಮದು ವಿಷಯಾಧಾರಿತ ಹೋರಾಟ ಎಂದರು.
Related Articles
Advertisement
ಇದನ್ನೂ ಓದಿ: ಲಾಲ್ ಸಿಂಗ್ ಗೆ ಟಾಟಾ ಹೇಳಿದ ಸೇತುಪತಿ : ಅಮೀರ್ ಚಿತ್ರದಿಂದ ಹೊರ ಬಂದಿದ್ಯಾಕೆ ವಿಜಯ್ ?
ಮೊನ್ನೆ ಶಿವಮೊಗ್ಗದಲ್ಲಿ ನಾನು ಕೊಟ್ಟ ಹೇಳಿಕೆ ವಿಚಾರವಾಗಿ ವಿವಿಧ ಸಂಘಟನೆಗಳು ಪ್ರತಿಕ್ರಿಯಿಸಿವೆ. ಇದನ್ನು ನಾನು ಗಮನಿಸಿದ್ದೇನೆ. ಸ್ವಯಂಪ್ರೇರಿತ ವಿಶ್ವ ಹಿಂದೂ ಪರಿಷತ್ ನವರು, ಕೆಲ ಸಚಿವರು ಹೇಳಿಕೆಗಳನ್ನ ಕೊಟ್ಟಿದ್ದಾರೆ. ಇನ್ನೂ ಕೆಲವರು ಜೆಡಿಎಸ್ ಅನ್ನು ಚಲಾವಣೆಗೆ ತರಲು ಬಾಲಿಶ ಹೇಳಿಕೆ ಕೊಟ್ಟಿದ್ದಾರೆ ಎಂತಾ ಹೇಳಿದ್ದಾರೆ. ದೇವೇಗೌಡರಿಗೆ ನಾಚಿಕೆ ಆಗಬೇಕೆನ್ನುತ್ತಾರೆ. ಯಾಕೆ ನಾಚಿಕೆ ಆಗಬೇಕು ? ಧರ್ಮವನ್ನು ಭ್ರಷ್ಟಾಚಾರಕ್ಕೆ ದೂಡುವ ಹೀನ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವು ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ. ಈ ಸಂಸ್ಕೃತಿ ಇವರದ್ದು. ನಮ್ಮದು ಏನಿದ್ದರೂ ಬೆಂಕಿ ಆರಿಸುವ ಸಂಸ್ಕೃತಿ. ನಾಜಿ ಸಂಸ್ಕೃತಿ ನನ್ನ ಹೇಳಿಕೆಯಲ್ಲ. ಈ ಹಿಂದೆಯೇ ಇತಿಹಾಸ ತಜ್ಞರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಿದ್ದರಾ ? ದೇಶಕ್ಕೆ ನಿಮ್ಮ ಕೊಡುಗೆ ಏನಿದೆ ಏಳು ವರ್ಷಗಳಲ್ಲಿ ನಿಮ್ಮ ಸಾಧನೆಯೇನು ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಪೆಟ್ರೋಲ್ ದರ ಕೆಲ ದಿನಗಳಲ್ಲೇ ಮೂರು ಅಂಕಿಗೆ ತಲುಪಲಿದೆ. ಗ್ಯಾಸ್ ಗೆ ಉಜ್ವಲ ಯೋಜನೆ ಎನ್ನುತ್ತಿದ್ದಾರೆ. ಈಗ ಏನಾಗುತ್ತಿದೆ ಅನ್ನೋದು ಜನರಿಗೆ ಗೊತ್ತಿದೆ. ನಾನು ಲಘುವಾಗಿ ಯಾವುದನ್ನೂ ಹೇಳಿಲ್ಲ. ಸರಿಪಡಿಸಿಕೊಳ್ಳಿ ಅಂತಾ ಹೇಳಿದ್ದೇನೆ. ಮುಗ್ದ ಜನರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಹೆಚ್. ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ‘ಟ್ರೋಲ್ ಮಾಡ್ಬೇಡಿ ಪ್ಲೀಸ್’… ಟ್ರೋಲಿಗರಿಗೆ ಪರಿಪರಿಯಾಗಿ ಕೇಳಿಕೊಂಡ ನಟಿ