Advertisement

RSS ಹಿರಿಯ ನಾಯಕ ಆಕ್ರೋಶ: ರಾಮ ಅಹಂಕಾರಿಗಳನ್ನು 241ಕ್ಕೆ ನಿಲ್ಲಿಸಿದ!

10:06 PM Jun 14, 2024 | Team Udayavani |

ಹೊಸದಿಲ್ಲಿ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಉನ್ನತ ನಾಯಕತ್ವದ ನಡುವಿನ ಭಿನ್ನಾಭಿಪ್ರಾಯಗಳಿಗೆ ಸಾಕ್ಷಿಯೋ ಎಂಬಂತೆ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗುರಿಯಾಗುತ್ತಿದೆ.

Advertisement

”ಅಹಂಕಾರಿಗಳನ್ನು(ಬಿಜೆಪಿ) 241ರಲ್ಲಿ, ರಾಮನಲ್ಲಿ ನಂಬಿಕೆ ಇಲ್ಲದವರು, ಅಪನಂಬಿಕೆ ಇದ್ದವರನ್ನು 234 ರಲ್ಲಿ ನಿಲ್ಲಿಸಲಾಯಿತು ಇದು ಭಗವಂತನ ನ್ಯಾಯ” ಎಂದು ಇಂದ್ರೇಶ್ ಕುಮಾರ್ ಹೇಳಿಕೆ ನೀಡಿ ಬಿಜೆಪಿ ವಿರುದ್ಧ ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ.

ಜೈಪುರ ಸಮೀಪದ ಕನೋಟಾದಲ್ಲಿ ಗುರುವಾರ ರಾಮರಥ ಅಯೋಧ್ಯೆ ಯಾತ್ರೆ ದರ್ಶನ ಪೂಜೆ ಸಮಾರಂಭದಲ್ಲಿ ಇಂದ್ರೇಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.’ 2024ರ ಲೋಕಸಭಾ ಚುನಾವಣೆಯನ್ನೇ ನೋಡಿ, ರಾಮ ಎಲ್ಲರಿಗೂ ನ್ಯಾಯ ಕೊಡಿಸುತ್ತಾನೆ. ರಾಮನನ್ನು ಪೂಜಿಸಿದವರು, ಆದರೆ ಕ್ರಮೇಣ ಅಹಂಕಾರಿಯಾದರು. ಆ ಪಕ್ಷವನ್ನು ಅತಿ ದೊಡ್ಡ ಪಕ್ಷವೆಂದು ಘೋಷಿಸಲಾಯಿತು. ಅವರಿಗೆ ಸಿಗಬೇಕಾದ ಸಂಪೂರ್ಣ ಹಕ್ಕುಗಳು ಮತ್ತು ಅಧಿಕಾರವು ಅಹಂಕಾರದಿಂದ ದೇವರಿಂದ ನಿಲ್ಲಿಸಲ್ಪಟ್ಟಿತು’ ಎಂದು ಹೇಳಿದ್ದಾರೆ.

ರಾಮನನ್ನು ವಿರೋಧಿಸುವವರಿಗೆ ಅಧಿಕಾರ ನೀಡಿಲ್ಲ. ಅವರ್ಯಾರಿಗೂ ಅಧಿಕಾರ ಕೊಟ್ಟಿಲ್ಲ. ಎಲ್ಲರೂ ಒಟ್ಟಾಗಿ (ಇಂಡಿಯಾ ಮೈತ್ರಿಕೂಟ ) ಸಹ ನಂಬರ್-1 ಆಗದೆ ನಂಬರ್-2 ರಲ್ಲಿ ನಿಂತಿತು. ಹಾಗಾಗಿ ದೇವರ ನ್ಯಾಯವು ವಿಚಿತ್ರವಲ್ಲ, ಇದು ನಿಜ ಮತ್ತು ಅತ್ಯಂತ ಆನಂದದಾಯಕವಾಗಿದೆ’ ಎಂದಿದ್ದಾರೆ.

ದ್ರೋಹಕ್ಕೆ ಇದು ಶಿಕ್ಷೆ

Advertisement

ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ರೂರಿ ಎಂದ ಇಂದ್ರೇಶ್, ‘ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಲಲ್ಲು ಸಿಂಗ್ , ರಾಮನನ್ನು ಪೂಜಿಸಿ ನಂತರ ಅಹಂಕಾರ ತೋರಿದರು.ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಿದಾಗ, ರಾಮ ಐದು ವರ್ಷ ವಿಶ್ರಾಂತಿ ತೆಗೆದುಕೊಳ್ಳಿ, ಮುಂದಿನ ಬಾರಿ ನೋಡೋಣ ಎಂದು ಹೇಳಿದ್ದಾನೆ. ರಾಮನನ್ನು ವಿರೋಧಿಸುವವನ ಕಲ್ಯಾಣವು ಸ್ವಯಂ ಹಾಳಾಗುತ್ತದೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರತಿಕ್ರಿಯೆ

ಇಂದ್ರೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ಪ್ರತಿಕ್ರಿಯೆ ನೀಡಿದ್ದು, ‘ಪ್ರಧಾನಿ ನರೇಂದ್ರ ಮೋದಿ ಕೂಡ ಆರ್‌ಎಸ್‌ಎಸ್‌ ಅನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದಿದೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾತನಾಡಬೇಕಾದ ಸಮಯದಲ್ಲಿ ಇಂದ್ರೇಶ್ ಕುಮಾರ್ ಮಾತನಾಡಿದ್ದರೆ ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿ ಅವರು ಮೌನವಾಗಿದ್ದರು. ಅವರೂ ಅಧಿಕಾರ ಅನುಭವಿಸಿದ್ದಾರೆ’ ಎಂದರು.

ವೈಯಕ್ತಿಕ ಹೇಳಿಕೆ
ಇಂದ್ರೇಶ್ ಕುಮಾರ್ ನೀಡಿರುವ ಹೇಳಿಕೆ ಸಂಘದ ಹೇಳಿಕೆಯಲ್ಲ ಇದು ಅವರ ವೈಯಕ್ತಿಕ ಹೇಳಿಕೆ ಎಂದು ಆರ್ ಎಸ್ ಎಸ್ ಪ್ರತಿಕ್ರಿಯೆ ನೀಡಿದೆ.

ಯೂ ಟರ್ನ್

ಶುಕ್ರವಾರ ಇಂದ್ರೇಶ್ ಕುಮಾರ್ ಬಿಜೆಪಿಯನ್ನು ಹೊಗಳಿ ಮತ್ತೊಂದು ಹೇಳಿಕೆ ನೀಡಿದ್ದಾರೆ. ರಾಮನನ್ನು ವಿರೋಧಿಸಿದವರೆಲ್ಲರೂ ಅಧಿಕಾರದಿಂದ ಹೊರಗುಳಿದಿದ್ದಾರೆ, ಆದರೆ ರಾಮನ ಸಂಕಲ್ಪವನ್ನು ತೆಗೆದುಕೊಂಡವರು ಈಗ ಅಧಿಕಾರದಲ್ಲಿದ್ದಾರೆ ಎಂದು ವಿವಾದಕ್ಕೆ ಸಿಲಿಕಿದ ಹೇಳಿಕೆಗೆ ತೇಪೆ ಹಚ್ಚಲು ಯತ್ನಿಸಿದ್ದಾರೆ.

” ನರೇಂದ್ರ ಮೋದಿಜಿಯವರ ನೇತೃತ್ವದ ಸರ್ಕಾರವು ಮೂರನೇ ಬಾರಿಗೆ ರಚನೆಯಾಗಿದೆ. ಅವರ ನೇತೃತ್ವದಲ್ಲಿ ದೇಶವು ಹಗಲಿರುಳು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ ಎಂಬ ವ್ಯಾಪಕ ನಂಬಿಕೆ ಜನರಲ್ಲಿದೆ. ಈ ನಂಬಿಕೆಯು ಪ್ರವರ್ಧಮಾನಕ್ಕೆ ಬರಲಿ ಎಂದು ನಾವು ಹಾರೈಸುತ್ತೇವೆ ಮತ್ತು ಹಾರೈಸುತ್ತೇವೆ. ಫಲ ನೀಡುತ್ತದೆ,” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next