ಚೆನ್ನೈ: “ಹಿಂದಿ ಕಲಿತಿಲ್ಲವೆಂದರೆ ಕೆಲಸ ಸಿಗಲ್ಲ ಎಂದು ಕೆಲವರು ಹೇಳುತ್ತಾರೆ? ಆದರೆ ಹಿಂದಿ ಕಲಿತವರು ಏನು ಮಾಡುತ್ತಿದ್ದಾರೆ? ನಮ್ಮ ಕೊಯಮತ್ತೂರಲ್ಲಿ ಪಾನಿ ಪುರಿ ಮಾರಿಕೊಂಡಿದ್ದಾರೆ’ ಹೀಗೆ ಹೇಳಿರುವುದು ತಮಿಳುನಾಡಿನ ಶಿಕ್ಷಣ ಸಚಿವ ಕೆ. ಪೊನ್ಮುಡಿ.
ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ.
“ಹಿಂದಿಗಿಂತ ಇಂಗ್ಲಿಷ್ ಮೌಲ್ಯಯುತವಾಗಿದೆ. ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾದ್ದರಿಂದ ತಮಿಳುನಾಡಿನ ವಿದ್ಯಾರ್ಥಿಗಳು ತಮಿಳು ಜೊತೆ ಇಂಗ್ಲಿಷ್ ಕಲಿಯಲಿ. ನಾವು ರಾಜ್ಯದಲ್ಲಿ ನಮ್ಮದೇ ಆದ ಶಿಕ್ಷಣ ವ್ಯವಸ್ಥೆ ನಿರ್ಮಿಸಿಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಒಳ್ಳೆಯ ಅಂಶಗಳನ್ನು ಪಾಲಿಸೋಣ. ತಮಿಳುನಾಡು ರಾಷ್ಟ್ರದ ಶಿಕ್ಷಣ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ.
ಇದನ್ನೂ ಓದಿ:ವಿವಾಹವಾಗಿ ಪ್ರೇಮಿಗಳು ನಾಪತ್ತೆ ; ದೂರು ದಾಖಲು : ಸ್ನೇಹಿತನ ತಂದೆ ಆತ್ಮಹತ್ಯೆ!
ಇಲ್ಲಿನ ವಿದ್ಯಾರ್ಥಿಗಳು ಯಾವ ಭಾಷೆಯನ್ನಾದರೂ ಕಲಿಯುವುದಕ್ಕೆ ಸಿದ್ಧರಿದ್ದಾರೆ. ಹಾಗಾಗಿ ನಮ್ಮಲ್ಲಿ ಹಿಂದಿಯನ್ನು ಕಡ್ಡಾಯ ಮಾಡದೆ ಆಯ್ಕೆಯ ಭಾಷೆಯಾಗಿ ಮಾತ್ರವೇ ಇಟ್ಟುಕೊಳ್ಳಬೇಕು’ ಎಂದು ಪೊನ್ಮುಡಿ ಹೇಳಿದ್ದಾರೆ.
ಇತ್ತೀಚೆಗೆ ಹಿಂದಿ ಹೇರಿಕೆ ವಿರುದ್ಧ ರಾಷ್ಟ್ರವ್ಯಾಪಿ ಚರ್ಚೆಗಳು ನಡೆದಿರುವ ಹಿನ್ನೆಲೆಯಲ್ಲಿ ಪೊನ್ಮುಡಿ ಹೇಳಿಕೆ ಗಮನ ಸೆಳೆದಿದೆ.