Advertisement

Modi ಮಾಡಿದ ಅಭಿವೃದ್ಧಿಯನ್ನು ಇಟಲಿ ಮೂಲದವರಿಗೆ ಅರ್ಥಮಾಡಿಕೊಳ್ಳಲಾಗುವುದಿಲ್ಲ: ಶಾ

08:18 PM Oct 28, 2023 | Vishnudas Patil |

 ಛಿಂದ್ವಾರಾ : “ಇಟಲಿಯಲ್ಲಿ ಹುಟ್ಟಿರುವ ಸಹೋದರ ಮತ್ತು ಸಹೋದರಿಯ ಜೋಡಿಯು ನರೇಂದ್ರ ಮೋದಿ ಸರಕಾರದ ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ” ಎಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಜುನಾರ್ಡಿಯೊದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ”ಭಾರತದ ಜನರು ಅಭಿವೃದ್ಧಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು ಎಂದು ರಾಮ ಮಂದಿರ ನಿರ್ಮಾಣ ಮತ್ತು ಇತರ ಸಾಧನೆಗಳ ನಡುವೆ 370 ನೇ ವಿಧಿಯ ರದ್ದತಿಯನ್ನು ಉಲ್ಲೇಖಿಸಿದರು.

ಜಗತ್ತು ಭಾರತದ ಬೆಳವಣಿಗೆಯನ್ನು ಶ್ಲಾಘಿಸುತ್ತಿರುವಾಗ, ಕಾಂಗ್ರೆಸ್‌ಗೆ ದೇಶದಲ್ಲಿ ಯಾವುದೇ ಸಕಾರಾತ್ಮಕತೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ.ಸಹೋದರ ಮತ್ತು ಸಹೋದರಿ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ತಿರುಗುತ್ತಿರುವಾಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಏನು ಮಾಡಿದೆ ಎಂದು ಕೇಳುತ್ತಲೇ ಇರುತ್ತಾರೆ, ಆದರೆ ಅವರಿಗೆ ಅಭಿವೃದ್ಧಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರ ಮೂಲ ಇಟಲಿಯಲ್ಲಿದೆ. ಭಾರತದಲ್ಲಿ ತಮ್ಮ ಮೂಲವನ್ನು ಹೊಂದಿರುವವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದರು.

ನವೆಂಬರ್ 17 ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಪಾಕೆಟ್‌ ಬರೋ ಚಿಂದ್ವಾರಾ ಆಗಿದೆ ಎಂದರು.

“ಬಿಜೆಪಿಯು ಅಯೋಧ್ಯೆ ರಾಮ ಮಂದಿರದ ಬಗ್ಗೆ ಮಾತ್ರ ಮಾತನಾಡುತ್ತದೆ ಆದರೆ ಅದರ ಉದ್ಘಾಟನೆಯ ದಿನಾಂಕವನ್ನು ಹೇಳುವುದಿಲ್ಲ ಎಂದು ರಾಹುಲ್ ಬಾಬಾ ಟೀಕಿಸುತ್ತಿದ್ದರು. ಈಗ ನೋಡಿ, ಮೋದಿ ಜೀ ದೇವಸ್ಥಾನವನ್ನು ನಿರ್ಮಿಸಿದ್ದು ಮಾತ್ರವಲ್ಲದೆ ಪ್ರತಿಷ್ಠಾಪನೆಯ ದಿನಾಂಕವನ್ನೂ ಹೇಳಿದ್ದಾರೆ. ಅಲ್ಲಿಗೆ ಹೋಗಿ ಆಶೀರ್ವಾದ ಪಡೆದು ಸಂತೃಪ್ತಿ ಪಡೆಯಲಿ” ಎಂದರು.

Advertisement

ಮಧ್ಯಪ್ರದೇಶದ ಜನರು ಈ ವರ್ಷ ಮೂರು ದೀಪಾವಳಿಗಳನ್ನು ಆಚರಿಸುತ್ತಾರೆ. ವಾರ್ಷಿಕ ದೀಪಗಳ ಹಬ್ಬವಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿಜಯದ ದೀಪಾವಳಿ ಮತ್ತು ಅಯೋಧ್ಯೆಯಲ್ಲಿ ಭಗವಾನ್ ರಾಮಲಲ್ಲಾನ ಪ್ರತಿಷ್ಠಾಪನೆಯ ದೀಪಾವಳಿಯನ್ನು ಜನರು ಆಚರಿಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next