Advertisement

ಬಿಹಾರದಲ್ಲಿ ಹೆತ್ತವರನ್ನು ನೋಡಿಕೊಳ್ಳದವರಿಗೆ ಕಾದಿದೆ ಜೈಲು ಶಿಕ್ಷೆ

09:55 AM Jun 13, 2019 | Team Udayavani |

ಪಟ್ನಾ : ವಯಸ್ಸಾದ ತಮ್ಮ ಹೆತ್ತವರನ್ನು ನೋಡಿಕೊಳ್ಳದವರಿಗೆ ಬಿಹಾರದಲ್ಲಿನ್ನು ಜೈಲು ಶಿಕ್ಷೆಯಾಗಲಿದೆ.

Advertisement

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರಕಾರದ ಈ ಪ್ರಸ್ತಾವಿತ ಕ್ರಮ ಜಾರಿಗೆ ಬಂದಲ್ಲಿ ರಾಜ್ಯದಲ್ಲಿ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಗುರಿಯಾಗಿ ವಸ್ತುತಃ ಬೀದಿಗೆ ಬೀಳುವ ದುರಂತಕ್ಕೆ ಗುರಿಯಾಗುವ ಹಿರಿಯ ನಾಗರಿಕರಿಗೆ ಆಸರೆ ಮತ್ತು ನೆಮ್ಮದಿ ಪ್ರಾಪ್ತವಾಗಲಿದೆ.

ಬಿಹಾರ ಸಚಿವ ಸಂಪುಟ ಒಟ್ಟು 17 ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಅತೀ ಮುಖ್ಯವಾದದ್ದು ಮಕ್ಕಳಿಂದ ಪರಿತ್ಯಕ್ತರಾಗಿ ವಸ್ತುತಃ ಬೀದಿಗೆ ಬೀಳುವ ದುರಂತಕ್ಕೆ ವಯಸ್ಸಾದ ಹೆತ್ತವರು ಗುರಿಯಾಗುವುದನ್ನು ತಪ್ಪಿಸುವ ಪ್ರಸ್ತಾವ. ಈ ಪ್ರಸ್ತಾವದಡಿ ವಯಸ್ಸಾದ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೆ, ನಿರ್ಲಕ್ಷಿಸುವವರಿಗೆ ಜೈಲು ಶಿಕ್ಷೆ ನೀಡಬೇಕೆಂಬ ಶಿಫಾರಸು ಇದೆ.

ಈ ಪ್ರಸ್ತಾವದ ಪ್ರಕಾರ ರಾಜ್ಯದಲ್ಲಿ ಯಾರೂ ಇನ್ನು ತಮ್ಮ ವಯಸ್ಸಾದ ಹೆತ್ತವರನ್ನು ನಿರ್ಲಕ್ಷಿಸುವಂತಿಲ್ಲ; ಮನೆಯಿಂದ ಹೊರ ಹಾಕುವಂತಿಲ್ಲ; ಅವರಿಗೆ ಸೂಕ್ತವಾದ ರಕ್ಷಣೆ, ಆರೋಗ್ಯ ಚಿಕಿತ್ಸೆ, ನೆಮ್ಮದಿ ನೀಡುವ ಕಾನೂನುಬದ್ಧ ಹೊಣೆಗಾರಿಕೆ ಮಕ್ಕಳದ್ದಾಗಿರುತ್ತದೆ.

ನಿತೀಶ್‌ ಕುಮಾರ್‌ ಅವರ ಸಚಿವ ಸಂಪುಟ ಈಗಾಗಲೇ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಈಗಿನ್ನು ಅದನ್ನು ಅಂತಿಮ ಮುದ್ರೆಗಾಗಿ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next