Advertisement

ಆತ್ಮಾವಲೋಕನ ಮಾಡಿಕೊಳ್ಳದ ಮುತ್ಸದಿಗಳು: ದೊರೆಸ್ವಾಮಿ ಬೇಸರ

01:11 AM Jun 17, 2019 | Lakshmi GovindaRaj |

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ದೇಶ ಕಂಡ ಅತ್ಯುತ್ತಮ ರಾಜಕೀಯ ಮುತ್ಸದಿಗಳು ಸೋಲನುಭವಿಸಿದ್ದಾರೆ. ಆದರೆ ಹೀಗೇಕಾಯ್ತು ಎಂಬ ಬಗ್ಗೆ ಅವರು ಆತ್ಮವಲೋಕನ ಮಾಡಿಕೊಳ್ಳದೇ ಗಾಢ ನಿದ್ರೆಗೆ ಜಾರಿರುವುದು ಬೇಸರದ ಸಂಗತಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅಭಿಪ್ರಾಯಪಟ್ಟರು.

Advertisement

ಸಮಕಾಲೀನ ಸಮಾಜಿಕ ಸಾಂಸ್ಕೃತಿಕ ವೇದಿಕೆ, ಭಾನುವಾರ ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಡಾ.ಜಿ.ರಾಮಕೃಷ್ಣ ಅವರ “ವರ್ತಮಾನ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇತ್ತೀಚಿನ ಚುನಾವಣೆ ಫ‌ಲಿತಾಂಶ ನೋಡಿದಾಗ ಜನರು ಕೂಡ ಮತಾಂಧರಾಗಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಜನ ಸ್ವತಂತ್ರವಾಗಿ ಆಲೋಚನೆ ಮಾಡುವ ಶಕ್ತಿ ಕಳೆದು ಕೊಂಡಿದ್ದಾರೆಯೇ ಎಂದನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ನಾನು ಹೇಳಿದ್ದೇ ರಾಷ್ಟ್ರೀಯತೆ, ಅದನ್ನೇ ಒಪ್ಪಿಕೊಳ್ಳಬೇಕು ಎಂದು ಹೇಳುವ ಮತ್ತು ಹೇರುವಿಕೆ ಸರಿಯಲ್ಲ. ಬಲವಂತವಾಗಿ ರಾಷ್ಟ್ರೀಯತೆಯನ್ನು ಇನ್ನೂಬ್ಬರ ಮೇಲೆ ಹೇರುವ ಕೆಲಸ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದು, ಇದು ಯಾವ ಕಾಲಕ್ಕೂ ನಡೆಯಬಾರದು ಎಂದು ಹೇಳಿದರು.

ಚಳುವಯಿಂದ ಸಮಸ್ಯೆ ಪರಿಹಾರವಾಗಬೇಕು: ಬರೀ ಚಳವಳಿ ಮಾಡಿದರೆ ಪ್ರಯೋಜನವಿಲ್ಲ. ಅದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಸಮಸ್ಯೆ ಪರಿಹಾರವಾಗುವ ರೀತಿಯಲ್ಲಿ ಚಳವಳಿ ಸಂಘಟಿಸಬೇಕು. ಈ ಪ್ರವೃತ್ತಿಯನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ನುಡಿದರು.

Advertisement

ಕೃತಿ ಕುರಿತು ಮಾತನಾಡಿದ ಶಶಿಧರ್‌ ಢೋಂಗ್ರೆ, “ವರ್ತಮಾನ’ ಕೃತಿಯಲ್ಲಿ ಲೇಖಕರು ರಾಷ್ಟ್ರೀಯತೆ ವ್ಯಾಖ್ಯಾನ, ಮನುವಾದ ಸೇರಿದಂತೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮನುವಾದದ ಬಗ್ಗೆ ಹೆಚ್ಚು ಹೇಳಲಾಗಿದೆ ಎಂದರು. ಲೇಖಕ ಡಾ.ಜಿ.ರಾಮಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುತ್ತ ಭಯೋತ್ಪಾದಕರಿದ್ದಾರೆ!: “ನಮ್ಮ ಸುತ್ತಮುತ್ತ ಭಯೋತ್ಪಾದಕರಿದ್ದಾರೆ. ಅವರು ಅನಧಿಕೃತ ಪೊಲೀಸರ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾಯ ಪರ ದ್ವನಿ ಎತ್ತಿದವರನ್ನು ಬೇಟೆಯಾಡಲಾಗುತ್ತಿದೆ. ಭಯದ ವಾತಾವರಣ ನಿರ್ಮಾಣವಾಗುತ್ತಿದ್ದು, ಸಾಂಸ್ಕೃತಿಕ ಪರಂಪರೆ ದಿನೇ ದಿನೆ ಗೌಣವಾಗುತ್ತಿದೆ. ಇದನ್ನು ಎತ್ತಿ ಹಿಡಿಯುವ ಕೆಲಸವಾಗಬೇಕಾಗಿದೆ,’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next