Advertisement
ವಲಸೆಗೆ ಅವಕಾಶವಿಲ್ಲಒಬ್ಬ ವಿದ್ಯಾರ್ಥಿ ಒಂದು ವೈದ್ಯಕೀಯ ಕಾಲೇಜಿನಿಂದ ಮಾತ್ರ ಪದವಿ ಪಡೆಯಲು ಅವಕಾಶವಿದೆ. ಒಂದು ಕಾಲೇಜಿನಿಂದ ಮತ್ತೂಂದು ಕಾಲೇಜಿಗೆ ವಲಸೆ ಹೋಗಿ ಅಲ್ಲಿ ವ್ಯಾಸಂಗ ಮುಂದುವರಿಸಲು ಅವಕಾಶವಿಲ್ಲ. ತುರ್ತು ಸಂದರ್ಭಗಳಲ್ಲಿ ಕಾಲೇಜು ಬದಲಾಯಿಸುವ ಅವಶ್ಯಕತೆ ಎದುರಾದಾಗ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬ ಬಗ್ಗೆ ಬೆಳಕು ಚೆಲ್ಲುವ ಅಗತ್ಯವಿದೆ.
ವಿದೇಶಗಳಲ್ಲಿ ವೈದ್ಯಕೀಯ ಪದವಿ ಪಡೆದು, ಭಾರತದಲ್ಲಿ ವೃತ್ತಿಜೀವನ ಆರಂಭಿಸುವವರಿಗೆ ಫಾರಿನ್ ಮೆಡಿಕಲ್ ಗ್ರಾಜುಯೇಟ್ಸ್ ಎಕ್ಸಾಂ (ಎಫ್.ಎಂ.ಜಿ.ಇ.) ಪರೀಕ್ಷೆ ಕಡ್ಡಾಯ. ಆದರೆ ಈ ಪರೀಕ್ಷೆಯನ್ನು ತೆಗೆದುಕೊಳ್ಳುವವರು ಪರೀಕ್ಷೆಯಲ್ಲಿ ತಾವು ಗಳಿಸಿದ ಅಂಕಗಳ ರೀ-ಟೋಟಲಿಂಗ್, ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅವಕಾಶ ಇರುವುದಿಲ್ಲ. ಜತೆಗೆ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಬಗ್ಗೆ ಹೊರಗಡೆ ಎಲ್ಲೂ ಬಾಯಿಬಿಡುವುದಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್.ಇ.ಬಿ) ರೂಪಿಸಿರುವ ಒಪ್ಪಂದವೊಂದಕ್ಕೆ ಸಹಿ ಹಾಕಬೇಕಾಗುತ್ತದೆ. ನನೆಗುದಿಯಲ್ಲಿ “ನೆಕ್ಸ್ಟ್’
ಎಫ್.ಎಂ.ಜಿ.ಇ. ಪರೀಕ್ಷೆಯ ಬದಲಿಗೆ ನ್ಯಾಶನಲ್ ಎಕ್ಸಿಟ್ ಟೆಸ್ಟ್ (ನೆಕ್ಸ್ಟ್) ಪರೀಕ್ಷೆ ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಆದರೆ ಅದು ಯಾವಾಗ ಜಾರಿಯಾಗುತ್ತದೆ ಎಂಬುದಿನ್ನೂ ತೀರ್ಮಾನವಾಗಿಲ್ಲ. ಈ ಪರೀಕ್ಷೆ ಬಂದರೆ ವಿದೇಶಗಳಲ್ಲಿ ವೈದ್ಯ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ, ಎಫ್ಎಂಜಿಇ ಪರೀಕ್ಷೆಯಲ್ಲಾಗುವ ಕೆಲವು ಅನಗತ್ಯ ನಿಯಮಗಳಿಂದ ಮುಕ್ತಿ ಸಿಗುತ್ತದೆ ಎಂಬ ಅನಿಸಿಕೆ ವಿದ್ಯಾರ್ಥಿಗಳದ್ದು.
Related Articles
ವಿದೇಶಗಳಲ್ಲಿ ವೈದ್ಯ ವ್ಯಾಸಂಗ ಮಾಡುವಾಗಲೇ ವಿದ್ಯಾರ್ಥಿಗಳು ಒಂದು ವರ್ಷದ ಇಂಟರ್ನ್ಶಿಪ್ ಮಾಡಿ, ಪದವಿ ಪಡೆದಿರುತ್ತಾರೆ. ಆದರೆ ಇಲ್ಲಿಗೆ ಬಂದ ಅನಂತರ ಮತ್ತೊಂದು ವರ್ಷದ ಇಂಟರ್ನ್ಶಿಪ್ ಮಾಡುವುದು ಕಡ್ಡಾಯವಾಗಿಸಲಾಗಿದೆ. ಇದರ ಬಗ್ಗೆಯೂ ವಿದ್ಯಾರ್ಥಿಗಳ ಆಕ್ಷೇಪವಿದೆ.
Advertisement