ದಿನ ಬೆಳಗಾದರೆ ಸಾಕು, ಕೋತಿ ಗುಡ್ ಮಾರ್ನಿಂಗ್. ಬೆಳಗಾಯ್ತು ಎದ್ದೆಳ್ಳೋ ಸೋಮಾರಿ ಸಿದ್ಧ, ತಿಂದು ಬೇಗ ಆಫೀಸ್ ಗೆ ಹೋಗು, ಆರೋಗ್ಯ ಚೆನ್ನಾಗಿ ಕಾಪಾಡಿಕೋ, ಮಳೇಲಿ ನೆನೆಯಬೇಡ. ಬಿಸಿಲಲ್ಲಿ ತಿರುಗಬೇಡ ಕಮಂಗಿ. ನಿಧಾನವಾಗಿ ಡ್ರೆçವ್ ಮಾಡು. ಯಾರ ತಂಟೆಗೂ ಹೋಗಬೇಡ. ನೀನಾಯ್ತು, ನಿನ್ನ ಕೆಲಸವಾಯ್ತು… ಗಡ್ಡ ನೀಟ್ ಆಗಿ ಸೆಟ್ಟಿಂಗ್ ಮಾಡೊÕà ಚಂದ ಕಾಣಿ¤àಯಾ. ಹುಡುಗಿಯರನ್ನು ಕಣ್ಣೆತ್ತಿ ನೋಡಿದ್ರೆ ಕಣ್¡ ಕಿತ್ತ್ ಬಿಡ್ತಿನಿ, ಇವತ್ತು ಇದೆ ಡ್ರೆಸ್ ಹಾಕೊಂಡು ಹೋಗು. ಸ್ವಲ್ಪ ಆದ್ರೂ ಮನಿ ಸೇವ್ ಮಾಡೋ, ಏ ಪೆದ್ದು, ಪ್ರತಿ ವಿಷಯಕ್ಕೂ ಬೇಜಾರ್ ಮಾಡ್ಕೊàಬೇಡ,
ಕೋಪ ಮಾಡಿಕೊಂಡ್ರೆ ನಾನು ಮಾತಾಡಲ್ಲ ನೋಡು….
ಹೀಗೆ ಪ್ರೀತಿ, ಕಾಳಜಿ ತುಂಬಿದ ಸಾವಿರಾರು ಮೇಸೇಜ್‌ಗಳು, ಗಂಟೆಗಟ್ಟಲೇ ಕಾಲ್ ಮಾಡಿ ನಿನ್ನ
ಬೋಧನೆ ಕೇಳುವಾಗ ಮೊಬೈಲ್ ಸ್ವಿಚ್ ಆಫ್ ಆಗಬಾರದೇ ಅಂದುಕೊಳ್ಳುತ್ತಿದ್ದೆ. ನಿನ್ನ ಚಟಪಟ ಮಾತಿಗೆ ಯಾವಾಗ ಬ್ರೇಕ್ ಬೀಳುತ್ತೆ ಎಂದು ಕಾದದ್ದೇ ಹೆಚ್ಚು. ಬಿಲ್ ಕುಲ್ ನೀನು ಮಾತು ನಿಲ್ಲಿಸುತ್ತಾ ಇರಲೇ ಇಲ್ಲ. ಇನ್ನು ಪ್ರತಿ ಶನಿವಾರ ದೇವಾಲಯದಲ್ಲಿ ದೇವರಜೊತೆ ನಿನ್ನ ದರ್ಶನ,ಅದಾದಮೇಲೆ ಕೇಳಬೇಕೆ? ನಾ ಮಾಡುವ ಕೆಲವು ಎಡವಟ್ಟುಗಳಿಗೆ ದೇವರೆದುರಲ್ಲೇ ಮಂಗಳಾರತಿ ಮಾಡುತ್ತಿದ್ದ ಆ ದಿನಗಳ ಮರೆಯಲು ಸಾಧ್ಯವೇ ಹೇಳು ಗೆಳತಿ?
ಇದೆಲ್ಲವೂ ಹಳೆಯ ಮಾತು. ಆದರೂ, ಇವತ್ತಿಗೆ ನಿನ್ನ ಪ್ರಪಂಚದಲ್ಲಿ ನನ್ನ ನೆನಪಿನ ಅಕ್ಷರವನ್ನು ಸಂಪೂರ್ಣವಾಗಿ ಅಳಿಸಿದ್ದೀಯಾ.
ಮುಸ್ಸಂಜೇಲಿ, ಆ ಕೆರೆಯದಡದಲ್ಲಿ ನನ್ನ ಹೆಗಲ ಮೇಲೆ ಒರಗಿ, ಬಾನೆತ್ತರಕ್ಕೆ ಹಾರಿ ಹೋಗುವ ಪಕ್ಷಿಸಂಕುಲಗಳ ನೋಡುತ್ತ ನಿನ್ನ ಬದುಕಿನ ಕನಸುಗಳನ್ನು ಹಂಚಿಕೊಳ್ಳುವಾಗ ಅದೇನೋ ಆನಂದ ಆಗ್ತಾ ಇತ್ತು. ಕಹಿ ನೆನಪುಗಳ ಮರೆಸಿ, ಸಿಹಿನೆನಪುಗಳನ್ನು ಕೊಟ್ಟು ಇಂದು ನನ್ನಿಂದ ದೂರಾಗಿಹೆಯಲ್ಲ ನೀನು? ನೀ ಇಲ್ಲದ ಆ ದಿನಗಳು ಬದುಕಿಗೆ ಅರ್ಥವನ್ನು ನೀಡಲು ಸಾಧ್ಯವೇ ಹೇಳು? ನಿನ್ನ ಆ
ಪ್ರೀತಿ, ಕಾಳಜಿ, ಇಂದೆಲ್ಲಿಹುದೋ ಯಾರ ಬಳಿಯಲ್ಲಿಹುದೋ ಅಥವಾ ನಿನ್ನಲ್ಲೇ ಅಡಗಿಹುದೋ ನಾನರಿಯೆ. ಆದರೆ, ಈ ಮನ ಮಾತ್ರ ಆ ನೆನಪುಗಳಲ್ಲಿಯೇ ದಿನ ಕಳೆಯುತ್ತದೆ.
ಕಲ್ಲು ಮುಳ್ಳುಗಳಿಂದ ಕೂಡಿದ ಹಾದಿಯಲ್ಲಿ ಒಂಟಿ ಪಯಣ ನನ್ನದು. ನನಸಾಗದ ಕನಸುಗಳ ಹೊತ್ತು ಬಹುದೂರ ಸಾಗಿ ಬಂದರೂ ನೆಮ್ಮದಿ ಎಂಬುದು ಈ ಜೀವಕೆ ಇಂದಿಗೂ ದೊರೆತಿಲ್ಲ. ಪ್ರೀತಿ, ವಿಶ್ವಾಸ, ಕರುಣೆ, ನಗು, ಸಂತೋಷ, ಮನದ ಭಾವನೆಗಳೆಲ್ಲವೂ ಬದಲಾಗಿ ಕಠೊರತನವು ನನ್ನ ಆವರಿಸಿಬಿಟ್ಟಿದೆ. ಈ ಪರಿಸ್ಥಿತಿಗೆ ನನ್ನ ಮನಃಸ್ಥಿತಿ ಕಾರಣವಿರಬಹುದೇ? ಇಂದಿಗೂ ಕಾರಣ ತಿಳಿದಿಲ್ಲ. ನೀ ಇದ್ದರೂ, ಇಲ್ಲದಿದ್ದರೂ ಜೀವನ ಸಾಗಲೇ ಬೇಕಲ್ಲವೇ? ಆದರೆ, ನಾನಂದುಕೊಂಡಂತೆ ಸಾಗದು. ಏಕೆಂದರೆ, ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತ್ತಿದೆ. ಇಂದಿಗೂ ನಿನ್ನೊಡನೆ ಕಳೆದ ಸಿಹಿ ನೆನಪುಗಳ ನೆನದು ಮನದಲ್ಲೇ ಸಂತಸ ಪಡುತಿರುವೆ. ನೀ ಇಲ್ಲದ ಈ ದಿನಗಳ ಹೇಗೆ ಕಳೆಯಲಿ ಹೇಳು.
ನೀ ಇದ್ದ ಆ ದಿನಗಳ ಮರೆಯಲು ಸಾಧ್ಯವೇ ಹೇಳು?
ನಂದನ್ ಕುಮಾರ್