ಹಿನ್ನೆಲೆಯಲ್ಲಿ ಮುಂಬಯಿ, ಮಂಗಳೂರು ಮತ್ತು ಕೇರಳ ನಡುವೆ ಸಂಚರಿಸುವ ರೈಲುಗಳ ಸಂಚಾರ ದಲ್ಲಿ ತಾತ್ಕಾಲಿಕ ಬದಲಾವಣೆ ಮುಂದುವರಿದಿದೆ.
ಕೆಲವು ರೈಲುಗಳನ್ನು ಪೂರ್ಣ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಪಥ ಬದಲಿಸಲಾಗಿದೆ.
Advertisement
ರದ್ದಾದ ರೈಲುಗಳುಎರ್ನಾಕುಳಂ- ಮುಂಬಯಿ ಲೋಕಮಾನ್ಯ ತಿಲಕ್ ಗರೀಬ್ ರಥ ಎಕ್ಸ್‌ಪ್ರೆಸ್ (ನಂ.12224) ಮತ್ತು ಕೊಚ್ಚುವೇಲಿ-ಮುಂಬಯಿ ಲೋಕಮಾನ್ಯ ತಿಲಕ್ ಗರೀಬ್ ರಥ ಎಕ್ಸ್ ಪ್ರಸ್ (ನಂ.12202), ಕೊಂಕಣ ರೈಲ್ವೇಗೆ ಸೇರಿದ ಮಡ್ಗಾಂವ್- ಮಂಗಳೂರು ಪ್ಯಾಸೆಂಜರ್ ರೈಲು (56641) ಹಾಗೂ ಮಡ್ಗಾಂವ್- ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು(22635), ಕುರ್ಲಾ- ತಿರುವನಂತಪುರ ನೇತ್ರಾವತಿ ಎಕ್ಸ್ ಪ್ರಸ್ (ನಂ.16345), ಎರ್ನಾಕುಳಂ- ಪೂನಾ ಎಕ್ಸ್‌ಪ್ರೆಸ್ (ನಂ. 22149) ರೈಲುಗಳ ಸಂಚಾರ ಆ. 25ರವರೆಗೆ ರದ್ದುಗೊಂಡಿದೆ.
ತಿರುವನಂತಪುರ-ಮುಂಬಯಿ ಲೋಕಮಾನ್ಯ ತಿಲಕ್ ನೇತ್ರಾವತಿ
ಎಕ್ಸ್‌ಪ್ರೆಸ್ (ನಂ.16346) ಆ. 25ರಂದು ಶೊರ್ನೂರು- ಪೋದನೂರು (ತಮಿಳುನಾಡು)- ಈರೋಡ್- ಜೋಳಾರಪೇಟೆ- ಮೇಲಪಕ್ಕಂ- ರೆಣಿಗುಂಟ- ವಾದಿ- ಪುಣೆ ಮಾರ್ಗವಾಗಿ ಸಂಚರಿಸಲಿದೆ. ಎರ್ನಾಕುಳಂ- ನಿಜಾಮುದ್ದೀನ್ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ (ನಂ.12617) ಆ. 25ರಂದು ಶೊರ್ನೂರು- ಪೋದನೂರು- ಪೆರಂಬೂರು- ನಾಗಪುರ- ಭೋಪಾಲ್- ಮಥುರಾ ಮಾರ್ಗವಾಗಿ ಪ್ರಯಾಣಿಸಲಿದೆ.
Related Articles
ಭೂಕುಸಿತ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್ ಮತ್ತು ತೋಕೂರು ನಡುವಿನ ರೈಲು ಸಂಚಾರವನ್ನು ಆ. 25ರ ತನಕ ನಿರ್ಬಂಧಿಸಲಾಗಿದೆ.
Advertisement
ಬೆಂಗಳೂರು ರೈಲು ಮಾರ್ಗ ಸಿದ್ಧಸುಬ್ರಹ್ಮಣ್ಯ, ಆ. 24: ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಶಿರಾಡಿ ಘಾಟಿಯ ಹಲವು ಕಡೆಗಳಲ್ಲಿ ಹಳಿ ಮೇಲೆ ಜರಿದು ಬಿದ್ದ ಮಣ್ಣು ತೆರವು, ಹಳಿಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಶನಿವಾರ ಪ್ರಾಯೋಗಿಕ ಗೂಡ್ಸ್ ರೈಲು ಸಂಚರಿಸಿದೆ. ಆ. 25ರಿಂದ ಪ್ರಯಾಣಿಕ ರೈಲು ಓಡಾಟ ಆರಂಭವಾಗುವ ಸಾಧ್ಯತೆಗಳಿವೆ. ಪ್ರಾಯೋಗಿಕ ರೈಲು ಓಡಾಟ ಯಶಸ್ವಿಯಾಗಿದೆ ಎಂದು ತಾಂತ್ರಿಕ ಅಧಿಕಾರಿಗಳು ತಿಳಿಸಿದ್ದರೂ ಉನ್ನತ ಮಟ್ಟದಿಂದ ಪ್ರಯಾಣಿಕ ರೈಲು ಓಡಾಟಕ್ಕೆ ಸಂಬಂಧಿಸಿ ಹಸಿರು ನಿಶಾನೆ ಇನ್ನಷ್ಟೇ ದೊರಕಬೇಕಿದೆ.