Advertisement

ತೂತುಕುಡಿ ಗೋಲಿಬಾರ್‌ ಖಂಡಿಸಿ ಪ್ರತಿಭಟನೆ

12:57 PM May 25, 2018 | |

ವಿಜಯಪುರ: ತಮಿಳುನಾಡು ಗೋಲಿಬಾರ್‌ ಕೃತ್ಯವನ್ನು ಖಂಡಿಸಿ ನಗರದಲ್ಲಿ ಎಸ್‌ಯುಸಿಐ ಸಂಘಟನೆ ನೇತೃತ್ವದಲ್ಲಿ
ಪ್ರತಿಭಟನೆ ನಡೆಯಿತು. ಗುರುವಾರ ನಗರದ ಮಹಾತ್ಮ ಗಾಂಧಿಧೀಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತಮಿಳುನಾಡಿನ ತುತುಕುಡಿ ಜಿಲ್ಲೆಯ ಜನಗಳ ಮೇಲೆ ಅಲ್ಲಿನ ಪಳನಿಸ್ವಾಮಿ ನೇತೃತ್ವದ ರಾಜ್ಯ ಸರಕಾರ ನಡೆಸಿರುವ ಗೋಲಿಬಾರ್‌ ಖಂಡಿಸಿ ಪಳಿನಿಸ್ವಾಮಿ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ, ತಮಿಳುನಾಡಿನ ಜನತೆ
ಅಲ್ಲಿನ ವೇದಾಂತ ಸಂಸ್ಥೆಯ ಸಮೂಹ ಸಂಸ್ಥೆಯಾದ ಸ್ಟೆರಾಯಿಟ ತಾಮ್ರ ಸಂಸ್ಕರಣಾ ಘಟಕದಿಂದ ಪರಿಸರ
ಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ ಸದರಿ ಘಟಕವನ್ನು ಮುಚ್ಚುವಂತೆ ನೂರಾರು ದಿನಗಳಿಂದ ಶಾಂತಿಯುತ
ಪ್ರತಿಭಟನೆ ನಡೆಸಿದ್ದರು. ಆದರೆ ಇದ್ದಕ್ಕಿದ್ದಂತೆ ಅಲ್ಲಿನ ಸರ್ಕಾರ ಹೋರಾಟಗಾರರ ಮೇಲೆ ಒಮ್ಮಿಂದೊಮ್ಮೆ
ಗೋಲಿಬಾರ್‌ ಮಾಡಿ ಅಮಾಯಕ ಹೋರಾಟಗಾರರನ್ನು ಹತ್ಯೆ ಮಾಡಿದೆ ಎಂದು ಕಿಡಿ ಕಾರಿದರು.

ದೇಶದಲ್ಲಿ ರೈತರ ಹೆಣಗಳು ಉರುಳುತ್ತಿದ್ದರೆ ಅತ್ತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು, ತುಟಿ ಬಿಚ್ಚದೇ ವಿದೇಶ ಸುತ್ತುತ್ತಿದ್ದಾರೆ. ಸಣ್ಣ ವಿಷಯಗಳಿಗೂ ಟ್ವಿಟ್‌ ಮಾಡುವ ಪ್ರಧಾನಿ ದೇಶದಲ್ಲಿ ನಡೆದ ಇಂತ ಕೃತ್ಯಗಳ ಕುರಿತು ದಿವ್ಯಮೌನ ತಾಳಿದ್ದಾರೆ. ತಮ್ಮ ಆಯ್ಕೆಗೆ ಕಾರಣವಾದ ಬಂಡವಾಳಗಾರರ ವಿರುದ್ಧ ಮಾತನಾಡುವ
ನೈತಿಕತೆ ಇಲ್ಲದೇ ಪರೋಕ್ಷವಾಗಿ ಮೋದಿ ಮೌನವಾಗಿದ್ದು, ಗೋಲಿಬಾರ್‌ ಕೃತ್ಯವೂ ಅದರ ಭಾಗವೇ ಎಂದು
ಹರಿಹಾಯ್ದರು.

ಜಿಲ್ಲಾ ಸಮಿತಿಯ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ಜನ ವಿರೋಧಿ  ನೀತಿಗಳನ್ನು ಸರ್ಕಾರಗಳು ಕೂಡಲೇ
ಕೈಬಿಡಬೇಕು. ಅನ್ಯಾಯ ಪ್ರಶ್ನಿಸುವರ ಮೇಲೆ ದೌರ್ಜನ್ಯ ಎಸಗುವ ಹಾಗೂ ಗೋಲಿಬಾರ್‌ ಮಾಡುವಂಥ ಕೃತ್ಯಕ್ಕೆ ಕೈ
ಹಾಕುವುದನ್ನು ನಿಲ್ಲಸಬೇಕು. ತುತುಕುಡಿ ಘಟನೆಯಲ್ಲಿ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು.
ತುತುಕುಡಿ ಜನರ ನ್ಯಾಯ ಸಮ್ಮತ ಬೇಡಿಕೆಗೆ ಅಲ್ಲಿನ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಪ್ರಮುಖರಾದ ಬಾಳು ಜೇವೂರ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ, ಶಿವಬಾಳಮ್ಮ
ಕೋಂಡಗೂಳಿ, ಜ್ಯೋತಿ ರೋಣಿಹಾಳ ಸುನೀಲ, ಶೋಭಾ ಯರಗುದ್ರಿ ಆಕಾಶ ರಾಮತಿರ್ಥ ಮತ್ತು ಪೀರ ಜಮಾದಾರ
ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next