Advertisement

ಸ್ವಚ್ಛತೆಗೆ ತೋಕೂರು ಗ್ರಾಮ ಮಾದರಿ: ನಾಗೇಶ್‌

12:39 PM Jul 29, 2018 | |

ತೋಕೂರು: ಸ್ವಚ್ಛತೆಗೆ ತೋಕೂರು ಗ್ರಾಮ ಮಾದರಿಯಾಗಿರುವುದರಿಂದ ಇದು ಇತರ ಗ್ರಾಮಕ್ಕೂ ಪ್ರೇರಣೆಯಾಗಿದೆ. ಇಲ್ಲಿನ ಸಂಘ ಸಂಸ್ಥೆಗಳು ಮುಕ್ತವಾಗಿ ಗ್ರಾಮ ಪಂಚಾಯತ್‌ನೊಂದಿಗೆ ಕೈ ಜೋಡಿಸಿರುವುದರಿಂದ ಇದು ಸಾಧ್ಯವಾಗಿದೆ ಎಂದು ಕೆಮ್ರಾಲ್‌ ಗ್ರಾಮ ಪಂಚಾಯತ್‌ ಅಧ್ಯಕ್ಷ ನಾಗೇಶ್‌ ಹೇಳಿದರು.

Advertisement

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಮಂಗಳೂರು ನೆಹರೂ ಯುವ ಕೇಂದ್ರದ ಮಾರ್ಗದರ್ಶನದಲ್ಲಿ ಸ್ವಚ್ಛತಾ ಅಭಿಯಾನದ ವಿಶೇಷ ಬೇಸಗೆ ತರಬೇತಿಯ ಸರಣಿ ಕಾರ್ಯಕ್ರಮದಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹದ ವಿಶೇಷ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಡುಪಣಂಬೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಮೋಹನ್‌ದಾಸ್‌ ಅಧ್ಯಕ್ಷತೆಯನ್ನು ವಹಿಸಿದ್ದರು.

ಮನೆಮನೆಯಿಂದ ತ್ಯಾಜ್ಯ ಸಂಗ್ರಹ
ಈ ಸಂದರ್ಭದಲ್ಲಿ ಮನೆ ಮನೆಯಿಂದ ಸಂಗ್ರಹಿಸಿದ ಘನ ತ್ಯಾಜ್ಯವನ್ನು ಕ್ಲಬ್‌ನ ಮುಂಭಾಗದಲ್ಲಿ ಪ್ಲಾಸ್ಟಿಕ್‌, ಹಸಿ ತ್ಯಾಜ್ಯ,
ಒಣ ತ್ಯಾಜ್ಯವನ್ನು ಬೇರ್ಪಡಿಸಿಕೊಂಡು ಅದನ್ನು ಗ್ರಾಮ ಪಂಚಾಯತ್‌ನ ಸಹಕಾರದಲ್ಲಿ ಕೆಮ್ರಾಲ್‌ ಪಂಚಾಯತ್‌ ನ ತ್ಯಾಜ್ಯ ಸಂಗ್ರಹದ ಘಟಕಕ್ಕೆ ರವಾನಿಸಲಾಯಿತು.

ಕ್ಲಬ್‌ನ ಉಪಾಧ್ಯಕ್ಷ ಮುಖೇಶ್‌ ಸುವರ್ಣ, ರಾಜಾ ಸಾಲ್ಯಾನ್‌, ಕಿರಣ್‌ ಬೆಳ್ಚಡ, ಸೋಮಶೇಖರ್‌, ಅರ್ಫಾಝ್, ಕೇಶವ ದೇವಾಡಿಗ, ಪ್ರಮೋದ್‌, ಗೌರೀಶ್‌ ಬೆಳ್ಚಡ, ದೀಪಕ್‌ ದೇವಾಡಿಗ, ಗಣೇಶ್‌ ಆಚಾರ್ಯ, ಜಗದೀಶ್‌ ಕುಲಾಲ್‌, ನೀರಜ್‌, ಜಗದೀಶ್‌ ಬೆಳ್ಚಡ, ಮಹೇಶ್‌ ಬೆಳ್ಚಡ, ಶಶಿಧರ್‌ ಆಚಾರ್ಯ, ಜಯಂತ್‌ ಕುಂದರ್‌, ದುರ್ಗಾದಾಸ್‌, ಜಗದೀಶ್‌ ಕೋಟ್ಯಾನ್‌, ಯೂನಸ್‌, ಗೌತಮ್‌ ಬೆಳ್ಚಡ, ಶಂಕರ ಪೂಜಾರಿ, ಹಿಮಕರ್‌ ಕೋಟ್ಯಾನ್‌, ನಾರಾಯಣ ಜಿ.ಕೆ., ಸಂಪತ್‌ ದೇವಾಡಿಗ, ನಿಖೀಲ್‌ ಬೆಳ್ಚಡ, ಮುದ್ದು ಮನೆ ಜಯ ಶೆಟ್ಟಿ, ಸುರೇಶ್‌ ಶೆಟ್ಟಿ, ಶ್ರೇಯಸ್‌ ದೇವಾಡಿಗ, ಪ್ರೀತಮ್‌ ಅಮೀನ್‌, ನಿಶಾನ್‌ ಅಮೀನ್‌ ಅಭಿಯಾನದಲ್ಲಿ ಪಾಲ್ಗೊಂಡರು. ಕ್ಲಬ್‌ನ ಅಧ್ಯಕ್ಷ ಪ್ರಶಾಂತ್‌ಕುಮಾರ್‌ ಬೇಕಲ್‌ ಸ್ವಾಗತಿಸಿದರು. ಪಡುಪಣಂಬೂರು ಗ್ರಾ.ಪಂ. ಸದಸ್ಯ ಸಂತೋಷ್‌ಕುಮಾರ್‌ ಪ್ರಸ್ತಾವನೆಗೈದರು. ಕೋಶಾಧಿಕಾರಿ ದೀಪಕ್‌ ಸುವರ್ಣ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next