ಉಳ್ಳಾಲ: ದೇಶದಲ್ಲಿ ಬಡವರ, ರೈತರ, ಕೃಷಿ ಕೂಲಿ ಕಾರ್ಮಿಕರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ದೇಶಾದ್ಯಂತ ನ್ಯಾಯಬೆಲೆ ಅಂಗಡಿಯ ಕನಸನ್ನು ನನಸು ಮಾಡಿದ ಇಂದಿರಾ ಗಾಂಧಿ ಅವರ ಹೆಸರನ್ನು ಕ್ಯಾಂಟೀನ್ ಗೆ ಇಟ್ಟಿದ್ದು, ಈ ಮೂಲಕ ಹಸಿವು ಮುಕ್ತ ಸಮಾಜ ನಿರ್ಮಾಣದ ಗುರಿ ಹೊಂದಲಾಗಿದೆ ಸಚಿವ ಯು.ಟಿ. ಖಾದರ್ ಹೇಳಿದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಹೋಬಳಿ ಮಟ್ಟದಲ್ಲಿ ರಾಜ್ಯದ ಪ್ರಥಮ, ಉಳ್ಳಾಲ ಪುರಸಭೆ ವ್ಯಾಪ್ತಿಯ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಶೇಖರಣೆಯಾದ ಸಂಪತ್ತು ಎಲ್ಲ ವರ್ಗದ ಜನರಿಗೆ ಸಲ್ಲಬೇಕು. ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಕಟ್ಟಡ ಹಾಗೂ ಆಹಾರದಲ್ಲಿ ಗುಣಮಟ್ಟ ಕಾಪಾಡಲಾಗಿದೆ. ಈ ಭಾಗದಲ್ಲಿ ಕುಚ್ಚಲಕ್ಕಿ, ಪಲ್ಯ, ಉಪ್ಪಿನ ಕಾಯಿ ಜತೆಗೆ ಅನ್ನಸಾಂಬಾರು ನೀಡಲಾಗುವುದು ಎಂದರು.
ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಸಂಚಾಲಕ ಈಶ್ವರ ಉಳ್ಳಾಲ್, ವಕ್ಫ್ ಜಿಲ್ಲಾಧ್ಯಕ್ಷ ಯು.ಕಣಚೂರು ಮೋನು, ಅಲ್ಪಸಂಖ್ಯಾಕ ನಿಗಮದ ಜಿಲ್ಲಾಧ್ಯಕ್ಷ ಎನ್.ಎಸ್.ಕರೀಂ, ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ತಾ.ಪಂ.ಅಧ್ಯಕ್ಷ ಮೊಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ನಗರಸಭೆ ಅಧ್ಯಕ್ಷ ಹುಸೇನ್ ಕುಂಞಿ ಮೋನು, ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷೆ ಜೇನ್ ಶಾಂತಿ ಡಿ’ಸೋಜಾ, ಸದಸ್ಯರಾದ ಫಾರೂಕ್ ಉಳ್ಳಾಲ್, ಸರಿತಾ ಜೀವನ್ ತೊಕ್ಕೊಟ್ಟು, ಶಶಿಕಲಾ ಶೆಟ್ಟಿ, ಮೊಹಮ್ಮದ್ ಮುಕ್ಕಚ್ಚೇರಿ, ಬಾಝಿಲ್ ಡಿ’ಸೋಜಾ, ಪೊಡಿಮೋನು, ಉಸ್ಮಾನ್ ಕಲ್ಲಾಪು, ಸುಂದರ ಉಳಿಯ, ಸುಕುಮಾರ್, ರಝಿಯಾ ಇಬ್ರಾಹಿಂ, ಭಾರತಿ, ರಾಜ್ಯ ಆಹಾರ ನಿಗಮದ ಸದಸ್ಯ ಟಿ.ಎಸ್. ಅಬ್ದುಲ್ಲಾ, ಕೆಎಸ್‌ಆರ್‌ಟಿಸಿ ನಿಗಮದ ಸದಸ್ಯ ರಮೇಶ್ ಶೆಟ್ಟಿ ಬೋಳಿಯಾರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಮುರಳೀ ಮೋಹನ್ ಸಾಲ್ಯಾನ್, ತಾ.ಪಂ.ಸದಸ್ಯರಾದ ಸಿದ್ದಿಕ್ ತಲಪಾಡಿ, ಜಬ್ಟಾರ್ ಬೋಳಿಯಾರು, ವಿಲ್ಮಾ ಡಿ’ಸೋಜಾ, ಪದ್ಮಾವತಿ, ಮಾಜಿ ಅಧ್ಯಕ್ಷೆ ಗಿರಿಜಾ ಎಂ., ರಿಚಾರ್ಡ್ ವೇಗಸ್ ಧರ್ಮನಗರ, ಕಿಶೋರ್ ಕುಮಾರ್ ತೊಕ್ಕೊಟ್ಟು, ರವಿ ಎಸ್. ಗಾಂಧಿನಗರ, ಹಮ್ಮಬ್ಬ ಉಳ್ಳಾಲಬೈಲ್, ಗುತ್ತಿಗೆದಾರ ಪ್ರಕಾಶ್ ಉಪಸ್ಥಿತರಿದ್ದರು.
ಉಳ್ಳಾಲ ನಗರಸಭೆಯ ಸದಸ್ಯ ದಿನೇಶ್ ರೈ ಉಳ್ಳಾಲಗುತ್ತು ಸ್ವಾಗತಿಸಿದರು. ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ನಿರೂಪಿಸಿದರು. ನಗರಸಭೆಯ ಪೌರಾಯುಕ್ತೆ ವಾಣಿ ವಿ. ಆಳ್ವ ವಂದಿಸಿದರು.