Advertisement

ತೊಕ್ಕೊಟ್ಟು: ಲಾರಿಯಿಂದ ಹೆದ್ದಾರಿಗೆ ಉರುಳಿ ಬಿದ್ದ ಬೃಹತ್ ಗಾತ್ರದ ಪೈಪುಗಳು: ತಪ್ಪಿದ ಅನಾಹುತ

08:37 PM Apr 03, 2023 | Team Udayavani |

ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ಮೇಲೆ ಪೈಪ್ ಹೇರಿಕೊಂಡು ತೆರಳುತ್ತಿದ್ದ ಲಾರಿಯಿಂದ ಪೈಪುಗಳು ಕೆಳಗೆ ರಸ್ತೆಗೆ ಉರುಳಿ ಸಂಭಾವ್ಯ ಅನಾಹುತ ತಪ್ಪಿದೆ.

Advertisement

ನೀರು ಸರಬರಾಜು ಮಾಡುವ ಹಳೇ ಪೈಪ್ ಗಳನ್ನು ನವಯುಗ ಸಂಸ್ಥೆಯವರು ಗೋರಿಗುಡ್ಡೆಯಿಂದ ತಲಪಾಡಿ ಟೋಲ್ ಬಳಿ ದಾಸ್ತಾನು ಇಡಲು ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.

ತೊಕ್ಕೊಟ್ಟು ಫ್ಲೈಓವರ್ ಮೇಲೆ ಲಾರಿ ತೆರಳುವ ಸಂದರ್ಭ, ಪೈಪ್ ಗಳನ್ನು ಕಟ್ಟಲಾಗಿದ್ದ ಹಗ್ಗ ತುಂಡಾಗಿ ಲಾರಿಯಿಂದ ಪೈಪುಗಳು ರಸ್ತೆಗೆ ಉರಳಿದೆ. ಸಂಜೆ ಸಮಯವಾಗಿದ್ದರಿಂದ ಮತ್ತು ರಂಝಾನ್ ಉಪವಾಸದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರಗಳು ಇರದೆ ಸಂಭಾವ್ಯ ಅನಾಹುತ ತಪ್ಪಿದೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರ ನೇತೃತ್ವದಲ್ಲಿ ನವಯುಗ ಸಂಸ್ಥೆ ಸೇರಿಕೊಂಡು ರಾ.ಹೆ.ಯ ಫ್ಲೈಓವರಿನಲ್ಲಿ ಉರುಳಿದ್ದ ಪೈಪ್ ಗಳ ತೆರವು ಕಾರ್ಯಾಚರಣೆ ನಡೆಸಿತು.

ಇದನ್ನೂ ಓದಿ: ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಹಾಲಾಡಿ ಶ್ರೀನಿವಾಸ್ ಶೆಟ್ಟಿ

Advertisement

Advertisement

Udayavani is now on Telegram. Click here to join our channel and stay updated with the latest news.

Next