Advertisement
ನಾದುರಸ್ತಿಯಲ್ಲಿ ಹಳೆ ಕಟ್ಟಡಅಂಗವಾಡಿಗೆ ನಿತ್ಯ 30 ಮಕ್ಕಳು ಬರುತ್ತಿದ್ದು, ಇವರೆಲ್ಲರೂ ಹಳೆಯ ಹಾಗೂ ನಾದುರಸ್ತಿಯಲ್ಲಿರುವ ಕಟ್ಟಡದಲ್ಲೇ ಆತಂಕದಿಂದ ಕಾಲ ಕಳೆಯುವ ಸ್ಥಿತಿ ಇದೆ. ವಿದ್ಯಾರ್ಥಿಗಳಿಗೆ ಅಪಾಯವಾಗುವ ಸಾಧ್ಯತೆ ಇದ್ದರೂ ಬೇರೆ ಕಟ್ಟಡದ ವ್ಯವಸ್ಥೆಯಿಲ್ಲ. ಅಂಗವಾಡಿ ತೊಡಿಕಾನ ಸರಕಾರಿ ಶಾಲೆಯ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕುಡಿಯುವ ನೀರು ಹಾಗೂ ಇತರ ದಿನ ನಿತ್ಯದ ಕೆಲಸಗಳಿಗೆ ಶಾಲೆಯ ಸೌಲಭ್ಯಗಳನ್ನೇ ಅವಲಂಬಿಸಿದೆ.
ಅಡುಗೆ ಅನಿಲ ಪೂರೈಕೆಗಾಗಿ ಅಂಗನವಾಡಿಗೆ ಇಲಾಖೆ ವತಿಯಿಂದ ವರ್ಷಕ್ಕೆ 200 ರೂ. ನೀಡಲಾಗುತ್ತಿದೆ. ಇದು ಸಾಕಾಗುತ್ತಿಲ್ಲ. ಎರಡು ತಿಂಗಳಿಗೆ ಒಂದು ಸಿಲಿಂಡರ್ ಗ್ಯಾಸ್ ಬೇಕಾಗುತ್ತದೆ. ಇದರಲ್ಲಿ ಗ್ಯಾಸ್‌ಗೆ ಹಣ ನೀಡಬೇಕು, ಸಾಗಾಟ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಹಲವು ಸಲ ಅಂಗನವಾಡಿ ಕಾರ್ಯಕರ್ತೆಯರೇ ಇದಕ್ಕೆ ಖರ್ಚು ಮಾಡುತ್ತಾರೆ. ಕ್ರೀಡಾಂಗಣದ ಸಮಸ್ಯೆ
ಅಂಗವಾಡಿ ಮಕ್ಕಳಿಗೆ ಈಗ ಕ್ರೀಡಾಂಗಣದ ಸಮಸ್ಯೆಯೂ ಎದುರಾಗಿದೆ. ನೂತನ ಕಟ್ಟಡದ ಕೆಲಸ ಮುಗಿಯದಿರುವ ಕಾರಣ ಕ್ರೀಡಾಂಗಣ ಇಲ್ಲದಂತಾಗಿದೆ. ನೂತನ ಕಟ್ಟಡ ಪೂರ್ಣಗೊಂಡು, ಹಳೆಯ ಕಟ್ಟಡ ಕೆಡವಿದರೆ ಕ್ರೀಡಾಂಗಣಕ್ಕೆ ಜಾಗ ದೊರೆಯುತ್ತದೆ. ಸ್ಥಗಿತಗೊಂಡ ಅಂಗವಾಡಿ ಕಟ್ಟಡದ ನೂತನ ಕಟ್ಟದ ಕಾಮಗಾರಿ ಮುಂದುವರಿಸುವುದಕ್ಕಾಗಿ ಇನ್ನಷ್ಟು ಅನುದಾನ ಒದಗಿಸಲು ಇಲಾಖೆ ಹಾಗೂ ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂದು ಸ್ಥಳೀಯ ಮುಖಂಡ ಜನಾರ್ದನ ಬಾಳೆಕಜೆ ಹಾಗೂ ಮಕ್ಕಳ ಹೆತ್ತವರು ಒತ್ತಾಯಿಸಿದ್ದಾರೆ.
Related Articles
ಅನುದಾನದ ಕೊರತೆಯಿಂದ ತೊಡಿಕಾನ ಅಂಗವಾಡಿ ಕಟ್ಟಡದ ಕೆಲಸ ಸ್ಥಗಿತಗೊಂಡಿದೆ. ಇದಕ್ಕೆ ಅನುದಾನ ಒದಗಿಸಿ ಕೊಡುವಂತೆ ಶಾಸಕರನ್ನು ಕೇಳಿಕೊಳ್ಳಲಾಗಿದೆ.
– ಸರಸ್ವತಿ, ಸಿ.ಡಿ.ಪಿ.ಒ. ಸುಳ್ಯ
Advertisement
ಸಹಕಾರ ನೀಡಿತೊಡಿಕಾನ ಶಾಲಾ ಬಳಿ ಇರುವ ಅಂಗವಾಡಿ ಕಟ್ಟಡದ ಕೆಲಸ ಸ್ಥಗಿತಗೊಂಡು ಮೂರು ವರ್ಷಗಳಾಗುತ್ತಾ ಬಂತು. ಈ ಕಾಮಗಾರಿಯನ್ನು ಮುಂದುವರಿಸಬೇಕು ಇದಕ್ಕೆ ಜನಪ್ರತಿನಿಧಿಗಳು ಇಲಾಖೆಯವರು ಸಹಕಾರ ನೀಡಬೇಕು.
– ಜನಾರ್ದನ ಬಾಳೆಕಜೆ,ಸ್ಥಳೀಯ ನಿವಾಸಿ ತೇಜೇಶ್ವರ್ ಕುಂದಲ್ಪಾಡಿ