ವಾಷಿಂಗ್ಟನ್: ಹಾಲಿ ವರ್ಷ ಪ್ರಜಾಪ್ರಭುತ್ವಕ್ಕೆ ಪರೀಕ್ಷೆಯ ಸಮಯ. ಚುನಾವಣೆ ಹಿನ್ನೆಲೆಯಲ್ಲಿ ಅಮೆರಿಕದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದು ದಾಖಲೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಡೆಲವೆರ್‌ನ ವಿಮ್ಲಿಂಗ್ಟನ್‌ನಲ್ಲಿ ಆಯೋಜಿ ಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೋಂಕಿನ ಜತೆಗೆ ದೇಶ ಯುದ್ಧ ನಡೆ ಸುತ್ತಿದೆ. ಅದನ್ನು ನಿಯಂತ್ರಿಸಲು ಸಕಲ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಸೋಂಕಿನ ಪರಿಸ್ಥಿತಿ ಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಹೀಗಾಗಿ, ಈ ವರ್ಷ ನಿಜಕ್ಕೂ ಪ್ರಜಾ ಪ್ರಭುತ್ವಕ್ಕೆ ಪರೀಕ್ಷೆಯ ಸಮಯ. ಮತ ಪ್ರಮಾಣ ದೇಶದ ಇತಿಹಾಸ ದಲ್ಲಿಯೇ ಅತ್ಯಂತ
ಹೆಚ್ಚಿನದ್ದಾಗಿದೆ ಎಂದರು.
ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ಎಸಗಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಪದೇ ಪದೆ ಆರೋಪಿಸುತ್ತಿರು ವಂತೆಯೇ ಮಾತನಾಡಿರುವ ಜೋ ಬೈಡೆನ್ “ಅಮೆರಿಕದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆದಿದೆ. ಫಲಿತಾಂಶವನ್ನು ಮುಕ್ತ ಹೃದಯದಿಂದ ಸ್ವಾಗತಿಸುತ್ತೇವೆ. ದೇಶದ ಕಾನೂನು ಮತ್ತು ಜನರ ಮುಂದೆ ಏನೂ ಇಲ್ಲ’ ಎಂದರು.
ಗೆದ್ದವ ನಾನೇ: ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ಗೆ ಅಧಿಕಾರರ ಹಸ್ತಾಂತರ ಪ್ರಕ್ರಿಯೆ ಶುರುವಾಗಿದ್ದರೂ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆ ಯಲ್ಲಿ ಗೆದ್ದವನು ನಾನೇ ಎಂದು ಹೇಳಿಕೊಂಡಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ರಿಪಬ್ಲಿಕನ್ ಪಕ್ಷ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಟ್ರಂಪ್ ಈ ಮಾತು ಗಳನ್ನಾಡಿದ್ದಾರೆ. ಬೈಡೆನ್ ಪರವಾಗಿ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಅವರು ಮತ್ತೂಮ್ಮೆ ದೂರಿದ್ದಾರೆ. ಮತ ಎಣಿಕೆ ವೇಳೆ ಈ ಪ್ರಾಂತ್ಯದಲ್ಲಿ ಟ್ರಂಪ್ 1,50,000 ಮತಗಳ ಅಂತರದಿಂದ ಗೆದ್ದಿದ್ದರು.