Advertisement
ಅವಧಿಗೂ ಮೊದಲೇ ತರಗತಿಗಳನ್ನು ಆರಂಭಿಸುವುದರಿಂದ ಉಪನ್ಯಾಸಕರ ರಜೆಯ ಹಕ್ಕನ್ನು ಸರ್ಕಾರ ಕಸಿದುಕೊಳ್ಳುತ್ತಿದೆ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೇ 2ರಿಂದತರಗತಿಗಳನ್ನು ಆರಂಭಿಸಬೇಕೆಂದು ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ವಾಪಾಸ್ ಪಡೆಯಬೇಕು ಅಥವಾ ಪಪೂ ಶಿಕ್ಷಣ ಇಲಾಖೆಯನ್ನು ರಜೆ ಇಲ್ಲದ ಇಲಾಖೆ ಎಂದು ಘೋಷಿಸಬೇಕು. ಸುತ್ತೋಲೆ ವಾಪಸ್ ಪಡೆಯದಿದ್ದರೆ ಮೇ 2ರಂದು ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
– ಸಿ.ಶಿಖಾ, ಪಿಯು ಇಲಾಖೆ ನಿರ್ದೇಶಕಿ