Advertisement

ಎದೆ ಹಾಲಿನಿಂದಲೇ ಆಭರಣ; 15 ಕೋಟಿ ರೂ. ನಿರೀಕ್ಷೆ!

09:08 PM Mar 25, 2022 | Team Udayavani |

ಲಂಡನ್‌: ವಿಶೇಷ ಸಂದರ್ಭದಲ್ಲಿ ಬಳಕೆಯಾದ ಹೂವನ್ನು ಆಭರಣ ಮಾಡಿಕೊಂಡು ಹಲವು ವರ್ಷಗಳ ಕಾಲ ಸಂಗ್ರಹಿಸುವುದನ್ನು ನೋಡಿರುತ್ತೀರಿ. ಇದೀಗ ತಾಯಿಯ ಎದೆ ಹಾಲನ್ನೇ ಸಂಗ್ರಹಿಸಿ, ಅದರಿಂದಲೇ ಆಭರಣ ಮಾಡುವ ಹೊಸ ಟ್ರೆಂಡ್‌ ಆರಂಭವಾಗಿದೆ.

Advertisement

2023ರ ಹೊತ್ತಿಗೆ ಈ ಆಭರಣಗಳಿಂದ ಕನಿಷ್ಠ 15 ಕೋಟಿ ರೂ. ಗಳಿಸಬಹುದೆಂಬ ನಿರೀಕ್ಷೆಯನ್ನು ಇದರ ತಯಾರಕರು ವ್ಯಕ್ತಪಡಿಸಿದ್ದಾರೆ.

ಈ ಆಭರಣಗಳ ರೂವಾರಿಗಳು ಲಂಡನ್‌ನ ಮೂರು ಮಕ್ಕಳ ತಾಯಿಯಾಗಿರುವ ಸಾಫಿಯಾ ರಿಯಾದ್‌ ಮತ್ತು ಆಕೆಯ ಪತಿ ಆದಂ ರಿಯಾದ್‌. ತಾಯಿಯ ಎದೆ ಹಾಲನ್ನು ಗಟ್ಟಿಯಾಗಿಸಿ ಅದರಿಂದ ಉಂಗುರದ ಹರಳು, ಸರದ ಡಾಲರ್‌, ಕಿವಿಯ ಓಲೆ ಸೇರಿ ಅನೇಕ ರೀತಿಯ ಆಭರಣ ಮಾಡಲಾಗುತ್ತಿದೆ.

ಇದನ್ನೂ ಓದಿ :ಯೋಗಿ ಸಂಪುಟ 2.0 ರಲ್ಲಿ ಐವರು ಮಹಿಳೆಯರಿಗೆ ಸಚಿವ ಪದವಿ

ಹಾಲನ್ನು ಘನೀಕರಿಸಲೆಂದು ಹೊಸ ರೀತಿಯ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದರಿಂದಾಗಿ ಹಾಲಿನ ಬಣ್ಣದಲ್ಲೂ ಒಂದಿಷ್ಟೂ ಬದಲಾವಣೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

Advertisement

ಒಂದು ಆಭರಣಕ್ಕೆ ಕನಿಷ್ಠ 30ಎಂಎಲ್‌ ಎದೆ ಹಾಲು ಬೇಕು. ನಾನು ನನ್ನ ಮಗುವಿಗೆ ಹಾಲಿಣುಸಿದ ನೆನಪು ಸದಾ ಕಣ್ಣೆದುರು ಕಾಣುವಂತೆ ಮಾಡುವುದು ಹೇಗೆ ಎಂದು ಆಲೋಚಿಸಿದಾಗ ಈ ಐಡಿಯಾ ಹೊಳೆದಿತ್ತು.
– ಸಾಫಿಯಾ ರಿಯಾದ್‌

 

Advertisement

Udayavani is now on Telegram. Click here to join our channel and stay updated with the latest news.

Next