ಶ್ರುತಿ ನಾಯ್ಡು ನಿರ್ಮಾಣದ ಈ ಚಿತ್ರದಲ್ಲಿ ಜಗ್ಗೇಶ್ ನಾಯಕರಾಗಿ ನಟಿಸಿದ್ದಾರೆ. ಇನ್ನು, ರಮೇಶ್ ಇಂದಿರಾ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಜಗ್ಗೇಶ್ ಅವರೊಂದಿಗೆ ಮಧುಬಾಲಾ, ಸುಧಾರಾಣಿ, ಪ್ರಮೋದ್, ಹಿತಾ ಚಂದ್ರಶೇಖರ್, ವಿವೇಕ್ ಸಿಂಹ, ರಮೇಶ್ ಇಂದಿರಾ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Advertisement
ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದ್ದು, ಯೋಗರಾಜ್ ಭಟ್, ಕವಿರಾಜ್, ಜಯಂತ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ. ರಾಜೇಂದ್ರ ಅರಸ್ ಸಂಕಲನವಿದೆ. ಇಮ್ರಾನ್ ಸರ್ದಾರಿಯ ನೃತ್ಯ ನಿರ್ದೇಶನ ಮಾಡಿದರೆ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಕೃಷ್ಣ ಸಾರ್ಥಕ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ‘ಮಹಾಕಾವ್ಯ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಎಸ್.ಆರ್.ಕೆ ಪಿಕ್ಚರ್ ಬ್ಯಾನರ್‌ನಲ್ಲಿ ವಿಜಯ. ಎಸ್ ನಿರ್ಮಿಸಿರುವ ‘ಮಹಾಕಾವ್ಯ’ ಚಿತ್ರಕ್ಕೆ ಶ್ರೀದರ್ಶನ್ ಪರಿಕಲ್ಪನೆ ಜೊತೆಗೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಮನೋರಂಜನ್ ಪ್ರಭಾಕರ್ ಸಂಗೀತ ಸಂಯೋಜಿಸಿದ್ದಾರೆ. ರಾಜ ಹಿನ್ನಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಮುತ್ತುರಾಜ್ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಪೌರಾಣಿಕ ಕಥಾಹಂದರ ಹೊಂದಿರುವ “ಮಹಾಕಾವ್ಯ’ ಚಿತ್ರದಲ್ಲಿ ಶ್ರೀದರ್ಶನ್, ರಶ್ಮಿ ಪ್ರಭಾಕರ್, ರಾಮಕೃಷ್ಣ, ಅನಂತವೇಲು, ಲಕ್ಷ್ಮೀ ಭಟ್, ವಲ್ಲಭ್, ಗಿರೀಶ್, ಗಣೇಶ್ ರಾವ್, ಅರವಿಂದ್, ಸ್ನೇಹ ಸ್ವಾಭಿಮಾನಿ, ನಾಗರಾಜ್ ಭಟ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ವಸಂತ ಕುಲಕರ್ಣಿ ಕಲಾ ನಿರ್ದೇಶನದೆ. ಶ್ರೀದರ್ಶನ್ ಹಾಗೂ ಪುರುಷೋತ್ತಮ್ ಕಣಗಾಲ್ ಸಂಭಾಷಣೆ ಬರೆದಿದ್ದಾರೆ.
Related Articles
ಬಹುತೇಕ ಹೊಸಬರೇ ಸೇರಿ ಮಾಡಿರುವ “ಹೌಲಹೌಲ’ ಚಿತ್ರವನ್ನು ಸುಶೀಲ ಮತ್ತು ಡಾ. ರಮೇಶ್ ಚೌದರಿ ನಿರ್ಮಿಸಿದ್ದಾರೆ. ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ಪಡೆದುಕೊಂಡಿರುವ ಈ ಚಿತ್ರಕ್ಕೆ ಎಸ್.ಪಿ ಪಾಟೀಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸುರೇಶ್ ವರ್ಮ ಛಾಯಾಗ್ರಹಣ ಮತ್ತು ಜ್ಞಾನೇಶ್ವರ್ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಶ್ಯಾಂಡಿ ಸಂಗೀತ ಸಂಯೋಜಿಸಿದ್ದು, ಕವಿರಾಜ್ ಸಾಹಿತ್ಯ ಒದಗಿಸಿದ್ದಾರೆ.
Advertisement
ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯೊಬ್ಬಳ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಎಂಬ ಸಂದೇಶ ಕೂಡ ಇದೆ. ಚಿತ್ರದಲ್ಲಿ ಆರತಿ ಕುಲಕರ್ಣಿ, ಶೋಭರಾಜ್, ಹನುಮಂತರಾಯ ಗೌಡ, ಅಮಿತ್, ವಿಜಯ್ ಚಂಡೂರ್, ಶಾಲಿನಿ, ಪೃಥ್ವಿ, ಮೇಘನಾ, ಮಂಜು, ಲಯೇಂದ್ರ, ದಿವ್ಯ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.