ಭಾವ್ ನಗರ್: ಕೋವಿಡ್ -19 ಸೋಂಕಿನ ಎರಡನೇ ಅಲೆ ತನ್ನ ಕರಾಳ ರೂಪವನ್ನು ತೋರಿಸುತ್ತಿದೆ. ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪುತ್ತಿರವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಕ್ಸಿಜನ್ ಕೊರತೆ, ಬೆಡ್ ಸಮಸ್ಯೆ ಮುಂತಾದ ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಗಳು ಎದುರಾಗುತ್ತಿದೆ.
ಗುಜರಾತ್ ರಾಜ್ಯದ ಭಾವ್ ನಗರ್ ಜಿಲ್ಲೆಯ ಹಳ್ಳಿಯೊಂದ ಕೋವಿಡ್ ಎರಡನೇ ಅಲೆಗೆ ತತ್ತರಿಸಿದೆ. ಚೋಗಾತ್ ಎಂಬ ಹೆಸರಿನ ಈ ಹಳ್ಳಿಯಲ್ಲಿ ಕೋವಿಡ್ ಕಾರಣದಿಂದ ಕಳೆದ 20 ದಿನದಲ್ಲಿ 90 ಜನರು ಉಸಿರು ಚೆಲ್ಲಿದ್ದಾರೆ!
ಇದನ್ನೂ ಓದಿ:ಕೋವಿಡ್ ಸೋಂಕಿತ ಅಪ್ಪನಿಗೆ ನೀರು ಕೊಡಲು ಹೋದ ಮಗಳನ್ನು ತಡೆದ ತಾಯಿ : ಪ್ರಾಣ ಬಿಟ್ಟ ತಂದೆ
ನಿವೃತ್ತ ಶಿಕ್ಷಕ, ಸದ್ಯ ಇಲ್ಲಿನ ಚಿತಾಗಾರದಲ್ಲಿ ಕೆಲಸ ಮಾಡುವ ಗಿರಿಜಾ ಶಂಕರ್ ಅವರು ಇಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಡುತ್ತಾರೆ. “ ಕೆಲವು ವಾರಗಳಾಯಿತು ಇಲ್ಲಿನ ಚಿತೆಯ ಬೆಂಕಿ ಆರಿ. ಪ್ರತಿದಿನವೂ ಉರಿಯುತ್ತಿದೆ” ಎನ್ನುತ್ತಾರೆ ಅವರು!
ಚೋಗಾತ್ ಎನ್ನುವುದು 13000 ಜನಸಂಖ್ಯೆ ಇರುವ ಗ್ರಾಮ. ಇಲ್ಲಿ ಕೋವಿಡ್ ಸೋಂಕಿನ ಕಾಟ ತೀರಾ ಹೆಚ್ಚಿದೆ. ಸದ್ಯ ಗ್ರಾಮದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ಏತನ್ಮಧ್ಯೆ, ಹಿಂದಿನ 20 ದಿನಗಳಲ್ಲಿ 90 ಜನರು ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಳ್ಳಲು ಭಾವ್ ನಗರ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವರುಣ್ ಬರ್ನವಾಲ್ ನಿರಾಕರಿಸಿದರು. ಎಂಟು ತುರ್ತು ಪರಿಸ್ಥಿತಿ ತಂಡಗಳನ್ನು ಹಳ್ಳಿಗಳಿಗೆ ನಿಯೋಜಿಸಲಾಗಿದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: “ಪ್ರಾಣವಾಯು’ ಒದಗಿಸಿ 10 ರೋಗಿಗಳ ಜೀವ ಉಳಿಸಿದ ಪೊಲೀಸ್ ಇನ್‌ಸ್ಪೆಕ್ಟರ್