ಮೈಸೂರು: ನನ್ನ ರಾಜಕೀಯ ಜೀವನದ 55 ವರ್ಷಗಳಲ್ಲಿ ರಾಜ್ಯಕಂಡ ಅತ್ಯಂತ ಕೆಟ್ಟ ಸರ್ಕಾರ ಇದು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಟೀಕಿಸಿದರು.
ನಂಜನಗೂಡು ಉಪ ಚುನಾವಣೆ ಹಿನ್ನೆಲೆ ಪಟ್ಟಣದ ಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿದರು.
ಆರ್ಕಾಟ್ ರಾಮಸ್ವಾಮಿ, ಮಿಜಾì ಇಸ್ಮಾಯಿಲ್ ಅವರಿಂದ ಹಿಡಿದು ಕೆ.ಸಿ.ರೆಡ್ಡಿ, ಹನುಮಂತಯ್ಯ, ನಿಜಲಿಂಗಪ್ಪ ಸೇರಿದಂತೆ ಎಲ್ಲ ಮುಖ್ಯ ಮಂತ್ರಿಗಳ ಆಡಳಿತವನ್ನೂ ಕಂಡಿದ್ದೇನೆ. ಆದರೆ, ಸ್ಪಷ್ಟ ದೂರದೃಷ್ಟಿ ಇಲ್ಲದ ಯಾವುದಾದರೂ ಸರ್ಕಾರ ವಿದ್ದರೆ, ಅದು ಈ ಸರ್ಕಾರ ಮಾತ್ರ ಎಂದು ಸಿದ್ದರಾಮಯ್ಯ ಹೆಸರೇಳದೆ ಪರೋಕ್ಷವಾಗಿ ಟೀಕಿಸಿದರು.
ಯಾವುದೇ ಸರ್ಕಾರ ದಿನದ 24 ಗಂಟೆ ಕೂಡ ಕಾರ್ಯ ನಿರ್ವಹಣೆ ಮಾಡಬೇಕು. ಆದರೆ, ಈ ಸರ್ಕಾರದ ಪ್ಯಾರಾ ಮೀಟರ್ ನೋಡಿದರೆ ಸಂಜೆ 7ಕ್ಕೆ ಬಾಗಿಲು ಮುಚ್ಚಿ, ಬೆಳಗ್ಗೆ 11ಕ್ಕೆ ತೆರೆದುಕೊಳ್ಳುತ್ತದೆ. ಸರ್ಕಾರ ನಡೆಸುವುದೆಂದರೆ ಹೊತ್ತು ಮುಳು ಗಿದ ಮೇಲೆ ಮನೆಗೆ ಹೋಗೋಣ ನಡೆಯಿರಿ ಎನ್ನುವುದಲ್ಲ ಎಂದು ಲೇವಡಿ ಮಾಡಿದರು.
ಈ ಸರ್ಕಾರ ನಡೆಸುತ್ತಿರುವವರಿಗೆ ರಾಜಕೀಯ ಇಚ್ಚಾಸಕ್ತಿ ಇದ್ದಿದ್ದರೆ, ಇವತ್ತು ಕರ್ನಾಟಕ ರಾಜ್ಯ ಎಲ್ಲೋ ಇರುತ್ತಿತ್ತು. ಆದರೆ, ಈ ಸರ್ಕಾರ ಗೊತ್ತು ಗುರಿಯಿಲ್ಲದೆ ಒಂದು ಅಂದಾಜಿನ ಮೇಲೆ ನಡೆಯುತ್ತಿದೆ. ಇದೆಲ್ಲವನ್ನೂ ಕಂಡೇ ನಾನು ಒಂದೂವರೆ ವರ್ಷಗಳ ಹಿಂದೆಯೇ ಬೆಂಗಳೂರಿನ ಕಾಂಗ್ರೆಸ್ ಸಭೆಯೊಂದ ರಲ್ಲಿ ಅಹಂ ಬ್ರಹ್ಮಾಸ್ಮಿ ಎಂದಿದ್ದೆ ಎಂದು ಮಾರ್ಮಿಕವಾಗಿ ನುಡಿದರು.
ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರು, ಜಿಲ್ಲಾ ಮಂತ್ರಿ ಅವರ ಮನೆಗಳಿಗೆ ಹೋಗಿ ಮಾತನಾ ಡಿಸಲಿಲ್ಲ. ಸಿಎಂಗೆ ಈ ಬಗ್ಗೆ ಅರಿವಿತ್ತೋ ಇಲ್ಲವೋ ಗೊತ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಬೇಕು ಜತೆಗೆ ಕೈಲಾದ ಸಹಾಯ ಮಾಡಬೇಕು ಎಂದು ನಾನು ಹೊರಟ ಮೂರ್‍ನಾಲ್ಕು ದಿನಗಳ ನಂತರ ಈ ಸರ್ಕಾರ ಎಚ್ಚೆತ್ತುಕೊಂಡಿತು.
ಜಿಲ್ಲಾ ಮಂತ್ರಿಯಾದವರಿಗೆ ಇದಕ್ಕಿಂತ ಇನ್ನೇನು ಕೆಲಸವಿರುತ್ತದೆ ಎಂದು ಅಂ ಬರೀಶ್ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದ ಅವರು, ಅಂಬರೀಶ್ ಬಿಜೆಪಿ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಯಾವುದೇ ಆಸೆ, ಆಕಾಂಕ್ಷೆ, ಆಶೋತ್ತರ, ಬೇರೆ ರಾಜ್ಯದಿಂದ ರಾಜ್ಯಸಭೆಗೆ ಹೋಗಬೇಕು ಎಂಬ ಆಸೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಪ್ರಧಾನಿ ನರೇಂದ್ರಮೋದಿ ಅವರ ಕನಸಿನ ಬಲಿಷ್ಠ ಭಾರತವನ್ನು ಕಾಣಬೇಕು. ಇದಕ್ಕಾಗಿ ಮೋದಿ ನಾ ಯಕತ್ವ ಬಲಪಡಿಸಬೇಕು ಎಂಬ ಕಾರಣಕ್ಕೆ ಬಿಜೆಪಿ ಸೇರಿದ್ದೇ ಎಂದು ತಿಳಿಸಿದರು.