ಬೆಂಗಳೂರು : ರಾಜ್ಯಸಭೆಯ ನಮ್ಮ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆದ್ದೇ ಗೆಲ್ಲುತ್ತಾರೆ. ಈ ಬಾರಿ ಚುನಾವಣೆ ಬೇರೆಯದೇ ರೀತಿ ನಡೆಯಬಹುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿಯೊಂದು ರಾಜ್ಯಸಭೆ ಚುನಾವಣೆ ಒಂದೊಂದು ರೀತಿ ನಡೆದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಏಳೆಂಟು ಜನ ಬಹಿರಂಗವಾಗಿಯೇ ರೆಬಲ್ ಆಗಿದ್ದರು ಎಂದು ಹೇಳಿದರು.
ಇದಕ್ಕಿಂತಲೂ ಮೊದಲು ಗುಪ್ತ ಮತದಾನ ನಡೆದಾಗಲೂ ಹಲವಾರು ಬದಲಾವಣೆಗಳು ಆಗಿವೆ. ಇನ್ನು ಕೆಲವರು ಉದ್ಯಮಿಗಳ ಪರವಾಗಿ ಇದ್ದರು. ಈ ಬಾರಿ ಇನ್ನೊಂದು ರೀತಿ ಚುನಾವಣೆ ನಡೆಯಬಹುದು. ನಮ್ಮ ಪಕ್ಷದ ಅಭ್ಯರ್ಥಿ ಲೆಹರ್ ಸಿಂಗ್ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪಾಕ್ ನ ಪಂಜಾಬ್ ಪ್ರಾಂತ್ಯದಲ್ಲಿ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ, ಆರೋಪಿಗಳಿಗೆ ಶೋಧ
ಪಠ್ಯ ಪರಿಷ್ಕರಣೆಗೆ ಕಾಂಗ್ರೆಸ್ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರು ರಾಜಕಾರಣಕ್ಕಾಗಿ ಮಾತನ್ನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.