Advertisement

ಈ ಬಾರಿ ತುಳು ಪರೀಕ್ಷೆ ಬರೆಯಲಿದ್ದಾರೆ 918 ವಿದ್ಯಾರ್ಥಿಗಳು

09:12 PM Jul 01, 2021 | Team Udayavani |

ಮಹಾನಗರ: ತುಳು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ರಾಜ್ಯ ಸರಕಾರವು 2014-15ನೇ ಸಾಲಿನಿಂದ ಎಸೆಸೆಲ್ಸಿಯಲ್ಲಿ ತುಳು ಪಠ್ಯ ವನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಿದ್ದು, ದ.ಕ,ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಬಾರಿ 918 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

Advertisement

ಜು. 22ರಂದು ಎಸೆಸೆಲ್ಸಿ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಕಳೆದ ವರ್ಷ ಒಟ್ಟು 956 ವಿದ್ಯಾರ್ಥಿಗಳು ತುಳು ಪಠ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು. ಎರಡೂ ಜಿಲ್ಲೆಗಳ ತಾಲೂಕುಗಳ ಪೈಕಿ ಪುತ್ತೂರಿ ನಲ್ಲಿ ಈ ಬಾರಿ ಅತೀ ಹೆಚ್ಚು ವಿದ್ಯಾರ್ಥಿ ಗಳಿದ್ದು, ಬೆಳ್ತಂಗಡಿ 2ನೇ ಸ್ಥಾನದಲ್ಲಿದೆ. ವೇಣೂರು ಸರಕಾರಿ ಪ್ರೌಢಶಾಲೆಯಲ್ಲಿ ಈ ಬಾರಿ ಗರಿಷ್ಠ ಅಂದರೆ 70 (ಕಳೆದ ವರ್ಷ 197)ವಿದ್ಯಾರ್ಥಿಗಳು ಎಸೆಸೆಲ್ಸಿಯಲ್ಲಿ ತುಳು ಪರೀಕ್ಷೆ ಬರೆಯಲಿದ್ದಾರೆ.

ತುಳು ಕಲಿಯುತ್ತಿರುವ 2,270 ವಿದ್ಯಾರ್ಥಿಗಳುಈ ಬಾರಿ ದ.ಕ., ಉಡುಪಿ ಜಿಲ್ಲೆಯ 43 ಶಾಲೆಯಲ್ಲಿ ಒಟ್ಟು 2,270 ವಿದ್ಯಾರ್ಥಿಗಳು 2020-21ರ ಸಾಲಿನಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.

6ನೇ ತರಗತಿಯಲ್ಲಿ 94, 7ನೇ ತರಗತಿಯಲ್ಲಿ 105, 8ನೇ ತರಗತಿಯಲ್ಲಿ 406, 9ನೇ ತರಗತಿಯಲ್ಲಿ 747 ಹಾಗೂ 10ನೇ ತರಗತಿಯಲ್ಲಿ 918 ವಿದ್ಯಾರ್ಥಿಗಳು ತುಳುವನ್ನು ತೃತೀಯ ಭಾಷೆಯಾಗಿ ಅಭ್ಯಸಿಸುತ್ತಿದ್ದಾರೆ. ಈ ಪೈಕಿ ಪುತ್ತೂರು ತಾಲೂಕಿನಲ್ಲಿ 1,114, ಸುಳ್ಯ ತಾಲೂಕಿನಲ್ಲಿ 144, ಬೆಳ್ತಂಗಡಿಯಲ್ಲಿ 573, ಬಂಟ್ವಾಳದಲ್ಲಿ 108, ಮಂಗಳೂರು ತಾಲೂಕಿನಲ್ಲಿ 136, ಉಡುಪಿ ತಾಲೂಕಿನಲ್ಲಿ 195 ವಿದ್ಯಾರ್ಥಿಗಳಿದ್ದಾರೆ.

2019-20ನೇ ಸಾಲಿನಲ್ಲಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಒಟ್ಟು 42 ಶಾಲೆಗಳಲ್ಲಿ ಒಟ್ಟು 2,600 ವಿದ್ಯಾರ್ಥಿಗಳು 6ನೇ ತರಗತಿಯಿಂದ ಎಸೆಸೆಲ್ಸಿವರೆಗೆ ತುಳು ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.

Advertisement

ಹಿಂದಿನ ವರ್ಷಗಳಲ್ಲಿ ತುಳು ಭಾಷಾ ವಿಷಯದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದು, ಅದೇ ಮಾದರಿಯಲ್ಲಿ ಈ ವರ್ಷವೂ ವಿದ್ಯಾ ರ್ಥಿಗಳಿಗೆ ಬೋಧನೆ ಮಾಡಲಾಗಿದೆ. ಈ ಬಾರಿ ಎಸೆಸೆಲ್ಸಿಯಲ್ಲಿ ಒಟ್ಟು 918 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.  -ದಯಾನಂದ ಕತ್ತಲಸಾರ್‌, ಅಧ್ಯಕ್ಷರು, ತುಳು ಸಾಹಿತ್ಯ ಅಕಾಡೆಮಿ

ಪ್ರಥಮ ಬ್ಯಾಚ್‌ನಲ್ಲಿ 18 ವಿದ್ಯಾರ್ಥಿಗಳು :2014-15ರಲ್ಲಿ ಮಂಗಳೂರಿನ ಪೊಂಪೈ ಶಾಲೆಯಲ್ಲಿ ಎಸೆಸೆಲ್ಸಿ ಯಲ್ಲಿ ತುಳು ಪ್ರಥಮ ಬ್ಯಾಚ್‌ ಆರಂಭಗೊಂಡಿದ್ದು, ಒಟ್ಟು 18 ವಿದ್ಯಾರ್ಥಿಗಳು ಮೊದಲಿಗೆ ತುಳು ಪಠ್ಯದಲ್ಲಿ ಪರೀಕ್ಷೆ ಬರೆದಿ ದಿದ್ದರು. 2015-16ನೇ ಸಾಲಿನಲ್ಲಿ 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮೂರನೇ ಬ್ಯಾಚ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಯಾಗಿ 12 ಶಾಲೆಗಳ 283 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ವಿವರ :

ತಾಲೂಕು         ಶಾಲೆಗಳು                        ವಿದ್ಯಾರ್ಥಿಗಳು

ಪುತ್ತೂರು                       17                                        375

ಸುಳ್ಯ                              2                                          57

ಬೆಳ್ತಂಗಡಿ                      12                                        288

ಬಂಟ್ವಾಳ                        3                                          64

ಮಂಗಳೂರು                    4                                          72

ಉಡುಪಿ                           5                                          62

ಒಟ್ಟು                          43                                        918

 

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next