Advertisement

ಈ ಬಾರಿ ಕದನ ಕಣಕ್ಕೆ ಹೊಸಕುಡಿಗಳ ರಂಗಪ್ರವೇಶ

12:16 AM Mar 03, 2023 | Team Udayavani |

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆ ಅಖಾಡ ದಲ್ಲಿ ರಾಜಕೀಯ ಮುಖಂಡರು ತಮ್ಮ ಜತೆಗೆ ತಮ್ಮ “ಕುಡಿ’ಗಳಿಗೆ ಟಿಕೆಟ್‌ ದಕ್ಕಿಸಿಕೊಳ್ಳುವ ಕಸರತ್ತು ನಡೆಸಿದ್ದು, ಈ ಪ್ರಮಾಣ ಹೆಚ್ಚೇ ಕಾಣಿಸುತ್ತಿದೆ.

Advertisement

ಕೆಲವು ನಾಯಕರು ತಾವು ಸಕ್ರಿಯ ರಾಜಕಾರ ಣದಲ್ಲಿ ಇರುವಾಗಲೇ ತಮ್ಮ ಉತ್ತರಾಧಿಕಾರಿಯನ್ನು ನೇಮಿಸುವ ಸಲುವಾಗಿ “ನನಗೊಂದು ನನ್ನ ಮಗ/ ಮಗಳಿಗೊಂದು’ ಎಂದು ಟಿಕೆಟ್‌ ಕೇಳುತ್ತಿದ್ದರೆ, ಇನ್ನು ಹಲವು ನಾಯಕರು ವಯಸ್ಸಿನ ಮಿತಿ ಹಿನ್ನೆಲೆಯಲ್ಲಿ “ನನಗಿಲ್ಲವೆಂದಾದರೆ ನನ್ನ ಉತ್ತರಾಧಿಕಾರಿಗೆ ಕೊಡಿ’ ಎಂದು ಕೇಳುತ್ತಿದ್ದಾರೆ.

ಹೀಗೆ ಕಣಕ್ಕಿಳಿಯ ಬಯಸುತ್ತಿರುವವರಲ್ಲಿ ಮಾಜಿ ಮುಖ್ಯ ಮಂತ್ರಿ, ಸಚಿವರು, ಮಾಜಿ ಸಚಿವರ ಮಕ್ಕಳಿದ್ದಾರೆ. ಅವರಲ್ಲಿ ಕೆಲವರು ಒಂದೇ ಕುಟುಂಬ; ಆದರೆ ಪ್ರತಿನಿಧಿಸುವ ಪಕ್ಷಗಳು ಬೇರೆ ಬೇರೆ ಆಗಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಹೊಸ ಮುಖಗಳೂ ಇವೆ.

ವಿಶೇಷವೆಂದರೆ, ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಈ ಚುನಾವಣೆಯಲ್ಲಿಯೇ “ಲಾಂಚ್‌’ ಆಗುತ್ತಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಪುತ್ರ ವಿಜಯೇಂದ್ರ ಮೊದಲ ಬಾರಿಗೆ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದರೆ, ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖೀಲ್‌ ಕುಮಾರಸ್ವಾಮಿ ರಾಮನಗರದಿಂದ ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿ ಒಂದೆಡೆ ಅಪ್ಪ, ಇನ್ನೊಂದೆಡೆ ಅಮ್ಮ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡುತ್ತಿದ್ದಾರೆ.

ನಿರೀಕ್ಷೆಯಂತೆ, ಚನ್ನಪಟ್ಟಣದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹೊಳೆನರಸೀಪುರದಿಂದ ರೇವಣ್ಣ ಅಖಾಡ ಕ್ಕಿಳಿ ಯುತ್ತಿದ್ದಾರೆ. ರಾಮನ ಗರದಿಂದ ನಿಖೀಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿ ಸು ತ್ತಿದ್ದಾರೆ. ಅದೇ ರೀತಿ, ಭವಾನಿ ರೇವಣ್ಣ ಅವರು ಹಾಸನ ದಿಂದ ಸ್ಪರ್ಧಿಸಲು ಉತ್ಸುಕ ರಾಗಿದ್ದಾರೆ. ಇನ್ನು ಇವರ ಸಂಬಂಧಿಗಳಾದ ಡಿ.ಸಿ. ತಮ್ಮಣ್ಣ ಹಾಗೂ ಬಾಲಕೃಷ್ಣ ಕ್ರಮವಾಗಿ ಮದ್ದೂರು ಮತ್ತು ಶ್ರವಣ ಬೆಳಗೊಳದಿಂದ ಸ್ಪರ್ಧಿಸಲಿದ್ದಾರೆ.

Advertisement

ಅತ್ತ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲಿ ರುವ ಜಿ.ಟಿ. ದೇವೇಗೌಡ ತಮ್ಮ ಮಗ ಹರೀಶ್‌ಗೌಡ ಅವರಿಗೆ ಹುಣ ಸೂರಿನಿಂದ ಕಣಕ್ಕಿಳಿಸಲು ಮುಂದಾ ಗಿದ್ದಾರೆ. ಇನ್ನು ಭದ್ರಾವತಿ ಯಲ್ಲಿ ಮಾಜಿ ಶಾಸಕ ದಿ. ಅಪ್ಪಾಜಿಗೌಡ ಬದಲಿಗೆ ಪತ್ನಿ ಶಾರದಾ ಅವರಿಗೆ ಜೆಡಿಎಸ್‌ ಟಿಕೆಟ್‌ ಘೋಷಿಸಿದ್ದರೆ, ಯಾದ ಗಿರಿಯ ಗುರುಮಿಟ್ಕಲ್‌ನಲ್ಲಿ ನಾಗನಗೌಡ ಕಂದಕೂರು ಬದಲಿಗೆ ಶರಣಗೌಡ ಕಂದ ಕ ‌ೂರು, ಜೆಡಿಎಸ್‌ನ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಪುತ್ರ ಸಿ.ಎಂ. ಫ‌ಯಾಜ್‌ ಅವರನ್ನು ಹುಮ ನಾಬಾದ್‌ ನಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ.

ಈ ವಿಚಾರದಲ್ಲಿ ಕಾಂಗ್ರೆಸ್‌ ಕೂಡ ಹಿಂದೆ ಬಿ ದ್ದಿಲ್ಲ. ವಿಪಕ್ಷ ನಾಯಕ ಎಚ್‌.ಸಿ.ಮಹದೇವಪ್ಪ ಹಾಗೂ ಪುತ್ರ ಸುನಿಲ್‌ ಬೋಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ವಯಸ್ಸಿನ ಕಾರಣಕ್ಕೆ ಪಾವಗಡ ವೆಂಕಟರಮಣಪ್ಪ, ಶಿಡ್ಲಘಟ್ಟ ವಿ. ಮುನಿಯಪ್ಪ, ಅಫ‌jಲ್‌ಪುರದ ಎಂ.ವೈ.ಪಾಟೀಲ್‌ ತಮ್ಮ ಪುತ್ರರಿಗೆ ಟಿಕೆಟ್‌ ಕೇಳುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಮತ್ತು ಪುತ್ರಿ ರೂಪಕಲಾ ಕೆಜಿಎಫ್ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದಾರೆ. ಅವರು ಹಾಲಿ ಶಾಸ ಕಿಯೂ ಹೌದು. ಬಿಜೆಪಿ ಸಂಸದ ಬಚ್ಚೇ ಗೌಡ ಪುತ್ರ ಹಾಲಿ ಶಾಸಕ ಶರತ್‌ ಬಚ್ಚೇಗೌಡ ಹೊಸಕೋಟೆಯಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿ ದ್ದಾರೆ. ಅದೇ ರೀತಿ, ಶಾಸಕ ಶಿವಾನಂದ ಪಾಟೀಲ ಅವರು ತಮ್ಮ ಪುತ್ರಿ ಸಂಯುಕ್ತ ಪಾಟೀಲ ಅವರಿಗೆ ವಿಜಯ ಪುರದಿಂದ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದರೆ, ಹಿರಿಯ ನಾಯಕಿ ಮೋಟಮ್ಮ ಅವರು ತಮ್ಮ ಪುತ್ರಿ ನಯನ ಅವರಿಗೆ ಮೂಡಿಗೆರೆಯಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಳುತ್ತಿದ್ದಾರೆ.

ಉಳಿದಂತೆ ಬಿಜೆಪಿಯಲ್ಲಿ ಗೋವಿಂದ ಕಾರಜೋಳ ಪುತ್ರ ಗೋಪಾಲ್‌ ಕಾರಜೋಳ, ವಿ. ಸೋಮಣ್ಣ ಪುತ್ರ ಅರುಣ್‌, ಕೆ.ಎಸ್‌. ಈಶ್ವರಪ್ಪ ಪುತ್ರ ಕಾಂತೇಶ್‌, ಎಂಟಿಬಿ ನಾಗರಾಜ ಪುತ್ರ ನಿತೀಶ್‌, ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ, ಜಗದೀಶ ಶೆಟ್ಟರ್‌ ಸಹೋದರ ಪ್ರದೀಪ್‌ ಶೆಟ್ಟರ್‌, ದಿ| ಉಮೇಶ್‌ ಕತ್ತಿ ಬದಲಿಗೆ ಪುತ್ರ ನಿಖೀಲ್‌ ಕತ್ತಿ ಮತ್ತಿತರರು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಇನ್ನೊಂದೆಡೆ, ಕೆ.ಜೆ. ಜಾರ್ಜ್‌ ಪುತ್ರ ರಾಣಾ, ಎನ್‌.ಎ. ಹ್ಯಾರಿಸ್‌ ಪುತ್ರ ನಲಪಾಡ್‌ ಶಿವಾಜಿ ನಗರದಿಂದ, ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಅವರನ್ನು ಯಮಕನ ಮರಡಿಯಿಂದ, ಲಕ್ಷ್ಮೀ ಹೆಬ್ಟಾಳ್ಕರ್‌ ಅಳಿಯ ರಜತ್‌ ಉಳ್ಳಾಗಡ್ಡಿ ಅವರನ್ನು ಹುಬ್ಬಳ್ಳಿ ಯಿಂದ, ಆರ್‌.ವಿ. ದೇಶ ಪಾಂಡೆ ಪುತ್ರ ಪ್ರಶಾಂತ್‌ ದೇಶಪಾಂಡೆ ಅವರಿಗೆ ಯಲ್ಲಾಪು ರದಿಂದ, ಟಿ.ಬಿ. ಜಯಚಂದ್ರ ಪುತ್ರ ಸಂತೋಷ್‌ ಜಯಚಂದ್ರ ಅವರಿಗೆ ಚಿಕ್ಕನಾಯಕನಹಳ್ಳಿಗೆ, ರಾಜಶೇಖರ್‌ ಪಾಟೀಲ ಸಹೋದರ ಚಂದ್ರಶೇಖರ್‌ ಪಾಟೀಲ್‌ ಹುಮನಾಬಾದ್‌ನಿಂದ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಹಾಗೆಯೇ ಬಿಜೆಪಿಯಿಂದ ರೋಷನ್‌ಬೇಗ್‌ ತಮ್ಮ ಪುತ್ರನಿಗೆ ಶಿವಾಜಿನಗರದ ಟಿಕೆಟ್‌ ಬಯಸಿದ್ದಾರೆ. ಅಜಯ್‌ಸಿಂಗ್‌ ಸಹೋದರ ವಿಜಯ್‌ಸಿಂಗ್‌ ರಾಜಕಾರಣ ದಲ್ಲಿದ್ದು ಅವಕಾಶ ಸಿಕ್ಕರೆ ಸ್ಪರ್ಧೆಗೆ ಸಿದ್ಧ ಇರುವವರೇ.

ವಿಶೇಷವೆಂದರೆ ಕಾಂಗ್ರೆಸ್‌ನಿಂದ ಚಾಮರಾ ಜ ಕ್ಷೇತ್ರಕ್ಕೆ ವಾಸು ಟಿಕೆಟ್‌ ಬಯಸಿದರೆ, ಅವರ ಪುತ್ರ ಕವೀಶ್‌ ಗೌಡ ಬಿಜೆಪಿಯಿಂದ ಸಮೀಪದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next