Advertisement

ಈ ಬಾರಿ ಮೋದಿ ಮೋಡಿ ನಡೆಯಲ್ಲ

04:44 PM Apr 13, 2019 | Team Udayavani |
ಚಿಕ್ಕಬಳ್ಳಾಪುರ: ದೇಶದಲ್ಲಿ ಅಧಿಕಾರದಲ್ಲಿದ್ದಾಗಲೇ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದ ಸಿಎಂ ಯಾವ ಪಕ್ಷದಲ್ಲಾದರೂ ಇದ್ದರೆ ಅದು ಬಿಜೆಪಿ ಯಲ್ಲಿ ಮಾತ್ರ. ರಾಜ್ಯದ ಸಂಪತ್ತನ್ನು ಲೂಟಿ ಹೊಡೆಯುವ ಬಿಜೆಪಿಯನ್ನು ಅಧಿಕಾರಕ್ಕೆ ಬಾರ ದಂತೆ ತಡೆಯಬೇಕಾ ದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸ ಬೇಕಿದೆ ಎಂದು ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಹೇಳಿದರು.
ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಶುಕ್ರ ವಾರ ತಮ್ಮ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತ ನಾಡಿದ ಅವರು, ಅಧಿಕಾರಕ್ಕೆ ಬಂದ 14 ದಿನದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಪ್ರಧಾನಿ ಮೋದಿ ರವರ ಮೋಡಿ ಈ ಬಾರಿ ಮರೆಯಾಗು ವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ಎಲ್ಲಾ ಅಧಿಕಾರ ನಿರ್ವಹಣೆ: 50 ವರ್ಷಗಳ ರಾಜ ಕೀಯ ಜೀವನದಲ್ಲಿ ಕಪ್ಪುಚುಕ್ಕೆ ಪಡೆದು ಕೊಂಡಿಲ್ಲ. ಕಾರ್ಕಳದಲ್ಲಿ ಆರು ಬಾರಿ ಶಾಸಕನಾಗಿ, ಸಣ್ಣ ಕೈಗಾರಿಕೆ ಸಚಿವರಾಗಿ, ಸಿಎಂ ಆಗಿ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಎಲ್ಲಾ ಅಧಿಕಾರ ಪಡೆದಿದ್ದೇನೆ. ಈ ಭಾಗದಲ್ಲಿ ಎರಡು ಬಾರಿ ಸಂಸದನಾಗಿ ಕೇಂದ್ರದಲ್ಲಿ ಎರಡು ಬಾರಿ ಮಂತ್ರಿ ಯಾಗಿ ಐದು ಖಾತೆಗಳನ್ನು ನಿರ್ವಹಿಸಿದ್ದೇನೆ ಎಂದು ಹೇಳಿದರು.
ರಾಜ್ಯಕ್ಕೆ ಅನ್ಯಾಯ: ಕೇಂದ್ರ ಸರ್ಕಾರ ಕಳೆದ ಐದು ವರ್ಷದಲ್ಲಿ ರಾಜ್ಯಕ್ಕೆ ದ್ರೋಹ ಬಗೆದಿದೆ. ಮಹದಾಯಿ ವಿಚಾರದಲ್ಲಿ ನೀರಿನ ಹಕ್ಕು ಕೊಡಲಿಲ್ಲ. ಕಾವೇರಿ ನದಿ ನೀರು ಹಂಚಿಕೆಯಲ್ಲಿ ಅನ್ಯಾಯ ಮಾಡಿದರು. ಬರಗಾಲ ಪರಿಹಾರಕ್ಕೆ 1200 ಕೋಟಿ ರೂ. ಅನುದಾನ ಕೊಡಲಿಲ್ಲ. ನರೇಗಾ ಯೋಜನೆಯ 800 ಕೋಟಿ ಬಾಕಿ ಇಟ್ಟುಕೊಂಡಿದ್ದಾರೆ. ಸಂಗ್ರಹವಾದ ತೆರಿಗೆ
ಹಣದಲ್ಲಿ ಉತ್ತರ ಭಾರತಕ್ಕೆ ಸಿಂಹಪಾಲು ಕೊಟ್ಟು ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಸಂಪತ್ತು ಲೂಟಿ: ರಾಜ್ಯದ ಸಂಪತ್ತು ಲೂಟಿ ಹೊಡೆ ಯುವುದರಲ್ಲಿ ಬಿಜೆಪಿ ನಾಯಕರು ನಿಸ್ಸೀ ಮರು. ಅದಕ್ಕಾಗಿಯೇ ಯಡಿಯೂರಪ್ಪ ಸಿಎಂ ಆಗಿ ಜೈಲಿಗೆ ಹೋಗಿ ಬಂದರು. ಅವರ ಸಂಪುಟದಲ್ಲಿ ಸಚಿವರಾಗಿದ್ದ ಕೃಷ್ಣಯ್ಯಶೆಟ್ಟಿ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತಿತರ 15 ಕ್ಕೂ ಹೆಚ್ಚು ಸಚಿವರು ಜೈಲು, ಬೇಲ್‌ನಲ್ಲಿದ್ದರು ಎಂದು ದೂರಿದರು.
ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಮಾತ ನಾಡಿ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಿರಲಿಲ್ಲ. ಬಿಜೆಪಿಯನ್ನು ಅಧಿಕಾರ ದಿಂದ ದೂರ ಇಡಲು ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡು ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನ ತ್ಯಾಗ ಮಾಡಿದೆವು.
ಇಂದಿರಾಗಾಂಧಿ ಅವರು ಬ್ಯಾಂಕ್‌ಗಳನ್ನು ರಾಷ್ಟ್ರೀ ಕರಣ ಮಾಡಿ ಬಡವರಿಗೆ ಅನುಕೂಲ ಕಲ್ಪಿಸಿದರು. ದೇಶದಲ್ಲಿ ನದಿ ಜೋಡಣೆ ಮಾಡಿಲ್ಲ, ಗಂಗಾ ನದಿಯೂ ಶುದ್ಧೀಕರಣವಾಗಿಲ್ಲ. ಎತ್ತಿನ ಹೊಳೆ ಯೋಜನೆಗೆ ವರ್ಷಕ್ಕೆ 500 ಕೋಟಿ ನೀಡಿದರೆ ಸಾಲದು ಎಂದರು.
ಈ ಭಾಗದ ಜನರ ನೀರಾವರಿ ಯೋಜನೆಗೆ ಆದ್ಯತೆ ನೀಡಿ ಎಂದು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಹಾಲಿ ಅಧ್ಯಕ್ಷ ಎಚ್‌.ವಿ.ಮಂಜುನಾಥ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೇಶವರೆಡ್ಡಿ, ಕಾಂಗ್ರೆಸ್‌ ಮುಖಂಡ ರಾದ ಯಲುವಹಳ್ಳಿ ರಮೇಶ್‌, ಮರಳಕುಂಟೆ ಕೃಷ್ಣಮೂರ್ತಿ, ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಕೋಚಿಮುಲ್‌ ನಿರ್ದೇಶಕ ನಾಗರಾಜ್‌, ಅವುಲುರೆಡ್ಡಿ, ಮೋಹನ್‌, ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಅನುಷ್ಠಾನಕ್ಕೆ ಬದ್ಧ ಬರಪೀಡಿತ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಹರಿಸಿಯೇ ಪ್ರಾಣ ಬಿಡುವೆ. ಈ ಕ್ಷೇತ್ರಕ್ಕೆ 2009 ರಲ್ಲಿ ಬಂದಾಗ ನಾನು ಜಿಲ್ಲೆಯಲ್ಲಿ ಬರಗಾಲ ಕಂಡೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಬರದೇ ಹೋದರೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಜನ ವಲಸೆ ಹೋಗುತ್ತಾರೆಂದು ನಾನು ಆಗಲೇ ಊಹಿಸಿದ್ದೆ ಎಂದು ವೀರಪ್ಪ ಮೊಯ್ಲಿ ಅವರು ಹೇಳಿದರು. ಈ ಭಾಗಕ್ಕೆ ನೀರು ಕಲ್ಪಿಸದಿದ್ದರೆ ಈ ಭಾಗದ ಸಂಸದ ನಾಗಿರಲು ಯೋಗ್ಯನಲ್ಲ ಎಂದು ಭಾವಿಸಿ
ಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧದ ನಡುವೆಯು ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next