Advertisement

ಈ ಬಾರಿ ಬದಲಾವಣೆ ತರುತ್ತಾರೆ

02:15 AM Mar 25, 2019 | Team Udayavani |
  • ನೇರವಾಗಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ; ಹೇಗೆನಿಸುತ್ತಿದೆ?
    ಕಾರ್ಯಕರ್ತರ ಸಹಕಾರ, ಪಕ್ಷದ ಹಿರಿಯ ನಾಯಕರ ಅಶೀರ್ವಾದದಿಂದ ಸ್ಪರ್ಧೆಗೆ ಅವಕಾಶ ಲಭಿಸಿದೆ. ಕಾಂಗ್ರೆಸ್‌ ಯುವಕರಿಗೆ ಅವಕಾಶ ನೀಡುತ್ತಾ ಬಂದಿದ್ದು, ಈ ಬಾರಿ ನನಗೆ ಅವಕಾಶ ಸಿಕ್ಕಿದೆ.
  •  ಸಾಮಾಜಿಕ ಚಟುವಟಿಕೆಗಳ ಕುರಿತು…
    ಜಿಲ್ಲೆಯ ಸಾಂಸ್ಕೃತಿಕ ಪರಂಪರೆ, ಸೌಹಾರ್ದ ವಾತಾವರಣಕ್ಕೆ ಪೂರಕವಾಗಿ ಕಾರ್ಯನಿರ್ವಹಿ ಸುತ್ತಿದ್ದೇನೆ. ವಿವಿಧ ಸಮಿತಿಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೇನೆ. ಸರ್ವಧರ್ಮ ಹಬ್ಬಗಳ ಆಚರಣೆಯನ್ನು ವರ್ಷಂಪ್ರತಿ ಆಯೋಜಿಸುತ್ತಿದ್ದೇನೆ. ಯುವಜನರ ಅಶೋತ್ತರಗಳು ಚೆನ್ನಾಗಿ ಅರಿತಿದ್ದೇನೆ. ಇದಲ್ಲದೆ ಕಾಂಗ್ರೆಸ್‌ ಸರಕಾರದ ಜನಪರ ಯೋಜನೆಗಳು ಜನರ ಮನಸ್ಸಿನಲ್ಲಿದ್ದು, ನನ್ನ ಗೆಲ್ಲಿಸುತ್ತಾರೆ ಎಂಬ ದೃಢವಾದ ವಿಶ್ವಾಸ ನನ್ನದು.
  •  ಕಿರಿಯ ವಯಸ್ಸಿನಲ್ಲಿ ದೊಡ್ಡ ಅವಕಾಶ ಹೇಗೆ ಸಾಧ್ಯವಾಯ್ತು?
    ಪಕ್ಷಾಧ್ಯಕ್ಷ ರಾಹುಲ್‌ ಗಾಂಧಿ ಅವಕಾಶ ಮಾಡಿಕೊಟ್ಟಿದ್ದಾರೆ. ನನ್ನದು
    ರಾಜಕೀಯ ಕುಟುಂಬವಲ್ಲ. ನನ್ನ ಒಲವು ಸಮಾಜಸೇವೆ, ರಾಜಕೀಯದ ಕಡೆಗೆ ಇತ್ತು. ವಿದ್ಯಾರ್ಥಿ ಸಂಘಟನೆ ಯಲ್ಲಿ ತೊಡಗಿಸಿಕೊಂಡು ಬಳಿಕ ಕಾಂಗ್ರೆಸ್‌ನ ತಣ್ತೀ ಸಿದ್ಧಾಂತಗಳ ಕಡೆಗೆ ಆಕರ್ಷಿತನಾಗಿ ಯುವ ಕಾಂಗ್ರೆಸ್‌ ಸೇರಿ ಜಿಲ್ಲಾ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.
  • ನಿಮ್ಮ ರಣತಂತ್ರಗಳೇನು?
    ಪ್ರತಿಸ್ಪರ್ಧಿ ಯಾರು ಎಂಬುದು ಮುಖ್ಯವಲ್ಲ. ನಮ್ಮ ಗುರಿ ಚುನಾವಣೆಯಲ್ಲಿ ಗೆಲ್ಲುವುದು. ಅವಶ್ಯವಿರುವ ಕಾರ್ಯತಂತ್ರ ರೂಪಿಸುತ್ತೇವೆ. “ಕಳೆದ 25 ವರ್ಷಗಳಿಂದ ಬಿಜೆಪಿಗೆ ಅವಕಾಶ ನೀಡಿದ್ದೀರಿ ಈ ಬಾರಿ ಬದಲಾವಣೆ ಮಾಡಿ; ಕಾಂಗ್ರೆಸ್‌ಗೆ, ಮಿಥುನ್‌ಗೆ ಅವಕಾಶ ಮಾಡಿಕೊಡಿ’ ಎಂದು ಮತದಾರರಲ್ಲಿ ಮನವಿ ಮಾಡುತ್ತೇವೆ.
Advertisement

Udayavani is now on Telegram. Click here to join our channel and stay updated with the latest news.

Next