Advertisement

ನೆಲಗಡಲೆ ಕೃಷಿಯಲ್ಲಿ ಈ ಬಾರಿ ಉತ್ತಮ ಬೆಳೆ

11:27 PM Mar 04, 2020 | Sriram |

ತೆಕ್ಕಟ್ಟೆ: ನೆಲೆಗಡಲೆ ಬೆಳೆದ ರೈತರು ಈ ಬಾರಿ ಉತ್ತಮ ಇಳುವರಿ ಪಡೆದಿದ್ದು, ಶ್ರಮಕ್ಕೆ ಪ್ರತಿಫ‌ಲ ಸಿಕ್ಕಿದೆ. ಕಾಲಕ್ಕೆ ಸರಿಯಾಗಿ ಸುರಿದ ಹಿಂಗಾರು ಮಳೆಯಿಂದಾಗಿ ಬೀಜ ಬಿತ್ತನೆ ಮಾಡುವ ಸಂದರ್ಭ ಇಳೆ ತಂಪಾಗಿದ್ದು, ನಿರೀಕ್ಷೆಗೂ ಮೀರಿ ಫಸಲಿಗೆ ಸಹಕಾರಿ ಯಾಗಿದೆ. ಕರಾ ವಳಿಯ ಹೊಗೆ ಮಿಶ್ರಿತ ಮಣ್ಣು ದ್ವಿದಳ ಧಾನ್ಯಗಳ ಬೆಳೆಗೆ ಯೋಗ್ಯ ವಾಗಿರುವುದರಿಂದ ಉದ್ದು, ಅವಡೆ, ಹೆಸರು ಹಾಗೂ ನೆಲಗಡಲೆಯೂ ಉತ್ತಮ ಫ‌ಸಲು ಬಂದಿದೆ.

Advertisement

ನಿಯಂತ್ರಣದಲ್ಲಿ ಕೀಟಬಾಧೆ
ಹಿಂದೆ ಈ ನೆಲಗಡಲೆ ಗಿಡಗಳನ್ನು ಆವರಿಸುತ್ತಿದ್ದ ಕೀಟಬಾಧೆ, ಒಣಹವೆ ಹಾಗೂ ಮಣ್ಣು ತೇವಾಂಶವನ್ನು ಕಳೆದುಕೊಂಡು ಹಸಿರು ಗಿಡಗಳು ಅವಧಿಗೂ ಮೊದಲೇ ಕಂದು ಬಣ್ಣಕ್ಕೆ ತಿರುಗುತ್ತಿದ್ದರಿಂದ ರೈತರು ಕಂಗಲಾಗಿದ್ದರು. ಆದರೆ ಈ ಬಾರಿ ಕೀಟಬಾಧೆ ಸಂಪೂರ್ಣ ಹತೋಟಿಯಲ್ಲಿತ್ತು.

ಮಧ್ಯವರ್ತಿಗಳ ಹಾವಳಿ
ಆದರೆ ನೆಲಗಡಲೆಗೆ ಮಧ್ಯವರ್ತಿಗಳ ಹಾವಳಿ ಇರುವುದು ರೈತರಿಗೆ ಸೂಕ್ತ ಬೆಲೆ ದೊರಕದ ಭೀತಿ ಕಾಡಿದೆ. ನೇರ ಮಾರುಕಟ್ಟೆಗೆ ಅವಕಾಶ ದೊರಕದೆ ಇರುವ ಹಿನ್ನೆಲೆಯಲ್ಲಿ ಕೆಲವು ಗ್ರಾಮೀಣ ಭಾಗದ ರೈತರು ನೆಲಗಡಲೆಯನ್ನು ಒಣಗಿಸಿ ಶೇಖರಿಸುವ ಬದಲು ಹಸಿ ನೆಲಗಡಲೆಯನ್ನು ಬೇಡಿಕೆಗೆ ಅನುಗುಣ ವಾಗಿ ತಾವಾಗಿಯೇ ಮಾರಾಟ ಮಾಡಬೇ ಕಾದ ಅನಿವಾರ್ಯ ಉಂಟಾಗಿದೆ.

ಸೂಕ್ತ ಕ್ರಮ ಅವಶ್ಯಕ
ಈ ಬಾರಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೇವೆ. ಕೀಟಬಾಧೆಯೂ ಹತೋಟಿಯಲ್ಲಿತ್ತು. ರೈತರ ಹಿತದೃಷ್ಟಿಯಿಂದ ಬೆಳೆಗೆ ಸಮರ್ಪಕವಾದ ಬೆಲೆ ಹಾಗೂ ನೇರ ಮಾರುಕಟ್ಟೆ ಅವಕಾಶ ನೀಡುವ ಬಗ್ಗೆ ಕೃಷಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
– ಪಾಂಡುರಂಗ ದೇವಾಡಿಗ
ತೆಕ್ಕಟ್ಟೆ, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next