Advertisement

ಹಿಲಿಯಾಣ: ಪುರಾತನ ಈಶ್ವರ ದೇಗುಲ ಪತ್ತೆ

12:50 AM Jan 30, 2020 | Sriram |

ಸಿದ್ದಾಪುರ: ಉಡುಪಿ ತಾಲೂಕಿನ ಹಿಲಿಯಾಣ ಗ್ರಾಮದಲ್ಲಿ ಹಚ್ಚ ಹಸಿರಿನ ಕಾಡಿನ ಮಧ್ಯೆ ಸುಮಾರು 2500 ವರ್ಷಗಳ ಇತಿಹಾಸ ಇರುವ ಈಶ್ವರ ದೇಗುಲ ಪತ್ತೆಯಾಗುವ ಮೂಲಕ, ಗ್ರಾಮಸ್ತರು ಜೀಣೋದ್ಧಾರಕ್ಕೆ ಸಂಕಲ್ಪಕ್ಕೆ ಮುಂದಾಗಿದ್ದಾರೆ.

Advertisement

ಹಿನ್ನೆಲೆ
ಹಿಂದೆ ಈ ಸ್ಥಳದಲ್ಲಿ ಅಗ್ರಹಾರ ವಿದ್ದು ಅದು ಗ್ರಾಮದ ಗಡಿಯಾ ಗಿತ್ತು. ಬ್ರಾಹ್ಮಣರ, ವೈದಿಕರ ನೂರಾರು ಮನೆಗಳು ಇಲ್ಲಿ ನೆಲೆ ನಿಂತಿತ್ತು. ಈ ಹಿಂದೆ ಇಲ್ಲಿ ಶಿವ ಮತ್ತು ಅಮ್ಮನವರ ಆರಾಧನೆ ನಡೆಯುತಿತ್ತು. ಕಾಲಕ್ರಮೇಣ ವೈಷ್ಣವ ಆರಾಧನೆ ನಡೆಯುತ್ತಾ ಬಂದಿದ್ದು ಹಿಂದೆ ಇಲ್ಲಿ ದೀಕ್ಷಿತರು ನೆಲೆ ನಿಂತಿದ್ದ ಕುರುಹುಗಳು ಇವೆ. ಇಲ್ಲಿ ದೊರೆತಿರುವ ಶಿಲಾಶಾಸನದ ಕುರುಹುವಿನಲ್ಲಿ ಕಲ್ಲಿನಾಕೃತಿಯಲ್ಲಿ ಈಶ್ವರನ ಚಿತ್ರವಿದೆ.

ಚೌಕಾಕಾರದ ಕಲ್ಲಿನಕಟ್ಟೆ ಇದ್ದು
ಅದರ ಪಕ್ಕದಲ್ಲಿ ಹುತ್ತವಿದೆ. ಅಡಿಪಾಯದ ಲಕ್ಷಣ, ನೀರಿನ ಸ್ವರೂಪ, ಅಗ್ರಹಾರ, ಶಿವನ ಬಗೆಗಿನ ಎಲ್ಲ ಬರಹಗಳು ಇವೆ. ಇದರ ಪಾಣಿಪೀಠವು ಹಿಲಿಯಾಣದ ಚಿತ್ತೇರಿ ಕೆರೆಯಲ್ಲಿದೆ ಎಂಬುದು ಪ್ರಶ್ನೆಯಲ್ಲಿ ತಿಳಿದು ಬಂದಿದೆ.

ದೇವರ ಭೂ ಸಂಪತ್ತು ಸಂಪೂರ್ಣ ನಾಶವಾಗಿದ್ದು ಹಿಂದೆ ಮಠದಿಂದ ಪಶ್ಚಿಮಕ್ಕೆ ಇರುವ ಗರ್ಭಗುಡಿಗೆ ಬೆಂಕಿ ಬಿದ್ದಿರುವುದರಿಂದ ಬೆಂಕಿಯ ಅಘಾತ ವಾಗಿತ್ತು. ಕೆರೆಯ ಸಮೀಪ ಈಶ್ವರನ ಸಾನ್ನಿಧ್ಯ, ಅಮ್ಮನವರ ಆರಾಧನೆ ನಡೆಯುತ್ತಿತ್ತು. ಅದರ ಸುತ್ತ ಅಗ್ರಹಾರವಿದ್ದು ಅನಂತರದ ದಿನಗಳಲ್ಲಿ ಮಂತ್ರವಾದಿಗಳ ಘರ್ಷಣೆಯಿಂದ ಈಶ್ವರ ಹಾಗೂ ಅಮ್ಮನವರ ಸ್ಥಳಾಂತರವಾಯಿತು ಎಂದು ಪ್ರಶ್ನೆಯಲ್ಲಿ ತಿಳಿದು ಬಂದಿದೆ.

ಹಿಂದೆ ಇಲ್ಲಿ ಈಶ್ವರನಿಗೆ ಪ್ರಿಯವಾದ ಹಣಬು ಆಚರಣೆ ನಡೆಯುತಿತ್ತು. ಉಮಾ ಮಹೇಶ್ವರ ದೇವರ ಸಂಕಲ್ಪ ಮೂಲತಃ ಆ ಜಾಗದಲ್ಲಿ ಲಿಂಗ ಸ್ಥಾನಪಲ್ಲಟವಾಗಿದೆ. ಆ ಕಾರಣಕ್ಕಾಗಿ ನೂತನವಾಗಿ ಉಮಾ ಮಹೇಶ್ವರನ ಸಂಕಲ್ಪ ಮಾಡುವುದರಿಂದ ಚಿತ್ತೇರಿ ಕೆರೆಯಲ್ಲಿ ಪಾಣಿಪೀಠ ಸಿಗುವ ಸಾಧ್ಯತೆ ಇದೆ.

Advertisement

ಈಶ್ವರ ಸಾನ್ನಿಧ್ಯದ ಸ್ಪಷ್ಟ ಕುರುಹು
ಹಿಲಿಯಾಣ ಭಟ್ರಾಡಿ ಶ್ರೀ ಮಹಿಷಮರ್ದಿನಿ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಜ್ಯೋತಿಷಿ ಹಾಲಾಡಿ ತಟ್ಟುವಟ್ಟು ಟಿ. ವಾಸುದೇವ ಜೋಯಿಸ್‌ ಅವರ ನೇತೃತ್ವದಲ್ಲಿ ನಡೆದ ತಾಂಬೂಲಾರೂಢ ಪ್ರಶ್ನೆಯ ದಿನ ಈಶ್ವರ ದೇವರ ದೇವಸ್ಥಾನ ನಿರ್ಮಿಸಲು ಗ್ರಾಮಸ್ಥರು ಸಂಕಲ್ಪ ಮಾಡಿದರು. ಹಿಲಿಯಾಣ ಗ್ರಾಮದ ಆಧ್ಯ ಸಾನ್ನಿಧ್ಯವಾದ ದೇವಿಯ ಸಮಕಾಲದಲ್ಲಿ ಆರಾಧನೆಗೊಂಡ ಈಶ್ವರ ಸಾನಿಧ್ಯದ ಸ್ಪಷ್ಟ ಕುರುಹುಗಳು ಕಂಡು ಬಂದಿದೆ. ಶಿಲಾಶಾಸನ, ಕೆರೆ, ಗರ್ಭಗುಡಿಯ ಪಳೆಯುಳಿಕೆ ಸ್ಪಷ್ಟವಾಗಿ ಶಿವಾಲಯದ ಇರುವಿಕೆಯ ಸಾಕ್ಷಿಯಾಗಿ ನಿಂತಿದೆ.
-ತಟ್ಟುವಟ್ಟು ಟಿ. ವಾಸುದೇವ ಜೋಯಿಸ್‌, ಜೋತಿಷ್ಯರು

Advertisement

Udayavani is now on Telegram. Click here to join our channel and stay updated with the latest news.

Next