Advertisement

ಈ ಭಾನುವಾರ ನಂದಿ ಹಬ್ಬ

12:00 PM Mar 02, 2018 | Team Udayavani |

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಇಲಾಖೆಯು ಯುನೈಟೆಡ್‌ ವೇ ಆಫ್ ಬೆಂಗಳೂರು, ನಮ್ಮ ನಿಮ್ಮ ಸೈಕಲ್‌ ಸಂಸ್ಥೆಯ ಸಹಯೋಗದಲ್ಲಿ ನಂದಿ ಬೆಟ್ಟದಲ್ಲಿ ಮಾ.4ರಂದು “ನಂದಿ ಹಬ್ಬ’ ಆಯೋಜಿಸಿದೆ.

Advertisement

ಅಂದು ನಂದಿ ಬೆಟ್ಟದಲ್ಲಿ ಯೋಗ ಶಿಬಿರ, ಸೈಕ್ಲಥಾನ್‌, ಸ್ಥಳೀಯ ಅಡುಗೆ- ಆಹಾರ ಮಳಿಗೆ, ಮಕ್ಕಳಿಗಾಗಿ ಆಟೋಟ, ನಿಸರ್ಗ ನಡಿಗೆ ಸೇರಿ ಹಲವು ಕಾರ್ಯಕ್ರಮಗಳು ನಡೆಯಲಿದೆ. ನಂದಿ ಬೆಟ್ಟವು ಪಾರಂಪರಿಕ ಸಂರಕ್ಷಣಾ ಯೋಜನೆಯ ಭಾಗವಾಗಿದ್ದು, ಬೆಟ್ಟದ ಜಲಮೂಲ, ಪರಂಪರೆ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ.

ಘನ ತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಪರಿಸರ ಸಂರಕ್ಷಣೆಗೂ ಒತ್ತು ನೀಡಲಾಗಿದೆ. ನಂದಿ ಬೆಟ್ಟದ ಪರಿಸರ ಸಂರಕ್ಷಣೆ ಬಗ್ಗೆ ಸಮುದಾಯಗಳಲ್ಲಿ ಅರಿವು ಮೂಡಿಸುವ ಕಾರ್ಯವನ್ನೂ ಕೈಗೊಳ್ಳಲಾಗಿದ್ದು, ಅದರ ಭಾಗವಾಗಿ ನಂದಿ ಹಬ್ಬ ಆಚರಿಸಲಾಗುತ್ತಿದೆ. ಸ್ಥಳೀಯರ ಪಾಲುದಾರಿಕೆ, ಸಹಕಾರವೂ ಸಂರಕ್ಷಣೆ ಕಾರ್ಯಕ್ಕೆ ಅಗತ್ಯವಾಗಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next