Advertisement

Free tomatoes: ಇವರ ಆಟೋದಲ್ಲಿ ಪ್ರಯಾಣಿಸಿದರೆ ಟೊಮ್ಯಾಟೋ ಫ್ರೀ.. ಕಂಡಿಷನ್‌ ಅಪ್ಲೈ

12:44 PM Jul 19, 2023 | Team Udayavani |

ಚಂಡೀಗಢ: ಟೊಮ್ಯಾಟೋ ಬೆಲೆ ಗಗನಕ್ಕೀರಿದೆ. ಟೊಮ್ಯಾಟೋ ಬೆಳೆ ಬೆಳೆಯುವವರು ಕೋಟ್ಯಧಿಪತಿಗಳಾಗುತ್ತಿದ್ದಾರೆ. ಟೊಮ್ಯಾಟೋ ರಕ್ಷಣೆಗೆ ಬೌನರ್ಸ್‌ ಗಳನ್ನು ನೇಮಕ ಮಾಡಲಾಗುತ್ತಿದೆ. ಟೊಮ್ಯಾಟೋಗಾಗಿ ಕೊಲೆಯೂ ನಡೆದಿದೆ.

Advertisement

ಸದ್ಯ ದೇಶದಲ್ಲಿ ಟೊಮ್ಯಾಟೋ ಬೆಲೆ ಏರಿಕೆಯೇ ಟ್ರೆಂಡ್  ವಿಚಾರ. ಟೊಮ್ಯಾಟೋ ಬೆಲೆ ಏರಿಕೆ ಅನೇಕರಿಗೆ ಬಿಸಿ ಮುಟ್ಟಿಸಿದೆ. ಟೊಮ್ಯಾಟೋ ಕೊಳ್ಳಲು ಜನ ಹಿಂದೆ – ಮುಂದೆ ನೋಡುತ್ತಿದ್ದಾರೆ. ಆದರೆ ಇದೇ ಟೊಮ್ಯಾಟೋ ಉಚಿತವಾಗಿ ಸಿಕ್ಕರೆ ಹೇಗೆ?

ಹೌದು, ಚಂಡೀಗಢ ಮೂಲದ ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಪ್ರಯಾಣಿಸಿದರೆ ಉಚಿತವಾಗಿ ಟೊಮ್ಯಾಟೋವನ್ನು ನೀಡುವುದಾಗಿ ಹೇಳಿರುವುದು ವೈರಲ್‌ ಆಗಿದೆ.

ಕಳೆದ ಹಲವಾರು ವರ್ಷಗಳಿಂದ ಆಟೋ ಓಡಿಸುತ್ತಿರುವ ಅರುಣ್‌, 12 ವರ್ಷಗಳಿಂದ ಭಾರತೀಯ ಸೇನೆಯ ಸೈನಿಕರಿಗೆ ಉಚಿತ ಆಟೋ ರಿಕ್ಷಾ ಸವಾರಿಯನ್ನು ನೀಡಿದ್ದಾರೆ. ಅವರ ಆಟೋದಲ್ಲಿ ಈ ಕುರಿತು ಬೋರ್ಡ್‌ ಹಾಕಿದ್ದಾರೆ. ಇದರೊಂದಿಗೆ ಗರ್ಭಿಣಿಯರಿಗೆ ಆಸ್ಪತ್ರೆಗೆ ಸಾಗಿಸಲು ಉಚಿತವಾಗಿ ತಮ್ಮ ಆಟೋ ಪಯಣವನ್ನು ನೀಡುತ್ತಾರೆ.

ಇದೀಗ ತನ್ನ ಆಟೋದಲ್ಲಿ ಪ್ರಯಾಣಿಸುವವರಿಗೆ ಉಚಿತವಾಗಿ ಟೊಮ್ಯಾಟೋ ನೀಡುವುದಾಗಿ ಅವರು ಹೇಳಿದ್ದಾರೆ. ತನ್ನ ರಿಕ್ಷಾದಲ್ಲಿ ಐದು ಬಾರಿ ಪ್ರಯಾಣ ಮಾಡಿದರೆ ಅಂತವರಿಗೆ ನಾನು ಉಚಿತವಾಗಿ 1 ಕೆಜಿ ಟೊಮ್ಯಾಟೋ ನೀಡುತ್ತೇನೆ ಎಂದಿದ್ದಾರೆ.

Advertisement

ಇದಲ್ಲದೇ ಒಂದು ವೇಳೆ  ಅಕ್ಟೋಬರ್‌ ನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೆ ಚಂಡೀಗಢದಲ್ಲಿ ವಾರದಲ್ಲಿ 5 ದಿನ ಉಚಿತವಾಗಿ ರಿಕ್ಷಾ ಸವಾರಿಯನ್ನು ಮಾಡುತ್ತೇನೆ ಎಂದಿದ್ದಾರೆ.

ಉಚಿತ ಟೊಮ್ಯಾಟೋ ನೀಡಿರುವುದು ಇದೇ ಮೊದಲಲ್ಲ. ಇತ್ತೀಚೆಗೆ  ಪಂಜಾಬ್‌ನ ಗುರುದಾಸ್‌ಪುರದ ಶೂ-ಸ್ಟೋರ್ ಮಾಲೀಕರು ತಮ್ಮ ಅಂಗಡಿಯಿಂದ ಶೂಗಳನ್ನು ಖರೀದಿಸಿದರೆ ತಮ್ಮ ಗ್ರಾಹಕರಿಗೆ 2 ಕೆಜಿ ಟೊಮ್ಯಾಟೋಗಳನ್ನು ಉಚಿತವಾಗಿ ನೀಡುವ ಯೋಜನೆಯನ್ನು ಘೋಷಿಸಿದ್ದರು. ವಿಶೇಷ ಸೇಲ್ ಆಫರ್ ಅಡಿಯಲ್ಲಿ ಗ್ರಾಹಕರು 1,000 ರಿಂದ 1,500 ರೂ.ಗಳ ಬೆಲೆಯ ಶೂಗಳನ್ನು ಖರೀದಿಸಿದರೆ ಅವರು 2 ಕೆಜಿ ಟೊಮ್ಯಾಟೋಗಳನ್ನು ಉಚಿತವಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಘೋಷಿಸಿದ್ದರು.

ಮಧ್ಯಪ್ರದೇಶದಲ್ಲಿ ಮೊಬೈಲ್ ಅಂಗಡಿಯವನು ತನ್ನ ಅಂಗಡಿಯಿಂದ ಸ್ಮಾರ್ಟ್‌ಫೋನ್ ಖರೀದಿಸುವ ಜನರಿಗೆ ಉಚಿತ ಟೊಮ್ಯಾಟೋ ನೀಡುತ್ತಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next