Advertisement

ಕರುಣಾಮಯಿ ಶೆಹನಾಜ್ : ದುಬಾರಿ ಕಾರು ಮಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ

06:24 PM Apr 22, 2021 | Team Udayavani |

ಮುಂಬೈ : ಮುಂಬೈನ ನಿವಾಸಿ ಶೆಹನಾಜ್​ ಶೇಖ್​ ಎಂಬವರು ರೋಗಿಗಳಿಗೆ ಕೃತಕ ಆಮ್ಲಜನಕ ಪೂರೈಕೆಯ ವ್ಯವಸ್ಥೆ ಮಾಡ್ತಿದ್ದಾರೆ. ಇದಕ್ಕಾಗಿ ತನ್ನ ನೆಚ್ಚಿನ ದುಬಾರಿ ಕಾರು ಮಾರಾಟ ಮಾಡಿದ್ದಾರೆ.

Advertisement

‌ʼಆಕ್ಸಿಜನ್‌ ಮ್ಯಾನ್ʼ ಎಂಬ ಬಿರುದು ಪಡೆದಿರುವ ಶೆಹನಾಜ್, ಸಂಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ ಮಾಡಬೇಕು ಅಂತಾ ತಮ್ಮ 22 ಲಕ್ಷದ ಎಸ್​ಯುವಿ ಕಾರನ್ನ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾರಾಟ ಮಾಡಿದ್ದಾರೆ. ಈ ಹಣದಿಂದ 160 ಆಮ್ಲಜನಕ ಸಿಲಿಂಡರ್​ಗಳನ್ನ ಖರೀದಿಸಿದ್ದಾರೆ.

ಪತ್ನಿ ಸಾವು :

ಶೆಹನಾಜ್​ ಅವರ ಈ ಸಾಮಾಜಿಕ ಕಳಕಳಿಯ ಹಿಂದೆ ಕಣ್ಣೀರಿನ ಕಹಾನಿ ಇದೆ. ಕಳೆದ ವರ್ಷ ಶೆಹನಾಜ್​ ಪತ್ನಿ ಆಮ್ಲಜನಕದ ಕೊರತೆಯಿಂದಾಗಿ ಆಟೋರಿಕ್ಷಾದಲ್ಲೇ ಪ್ರಾಣವನ್ನ ಬಿಟ್ಟಿದ್ದರು. ಈ ಘಟನೆ ಬಳಿಕ ಜೀವದ ಮಹತ್ವವನ್ನ ಅರಿತ ಶೆಹನಾಜ್​ ಮುಂಬೈನಲ್ಲಿ ರೋಗಿಗಳಿಗೆ ಆಮ್ಲಜನಕ ಪೂರೈಕೆ ಕಾರ್ಯವನ್ನ ಮಾಡ್ತಿದ್ದಾರೆ.

ಸಹಾಯವಾಣಿ :

Advertisement

ಸದ್ಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟವಾಗಿದೆ. ಅದರಲ್ಲೂ ವಾಣಿಜ್ಯ ನಗರಿ ಮುಂಬೈನಲ್ಲಿ ಕೋವಿಡ್ ಪ್ರಕಣಗಳ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಲ್ಲಿ ಆಕ್ಸಿಜನ್ ಅಭಾವ ಸೃಷ್ಟಿಯಾಗಿದೆ. ಅಗತ್ಯ ಇರುವವರಿಗೆ ಆಕ್ಸಿಜನ್ ಪೂರೈಸುವ ನಿಟ್ಟಿನಲ್ಲಿ ಶೆಹನಾಜ್​​ ಸಹಾಯವಾಣಿ ಸಂಖ್ಯೆ ಹಾಗೂ ಕಂಟ್ರೋಲ್​ ರೂಮ್​ನ್ನೂ ತೆರೆದಿದ್ದಾರೆ.

ಹಣಕಾಸಿನ ಸಮಸ್ಯೆ:

ಕೋವಿಡ್ ಸಮಯದಲ್ಲಿ ಪರೋಪಕಾರಿ ಕೆಲಸಕ್ಕೆ ಕೈ ಹಾಕಿದ ಶೆಹನಾಜ್ ಅವರ ಬಳಿ ಇದ್ದ ಹಣ ಖಾಲಿ ಆಗಿದೆಯಂತೆ. ಇದೇ ಕಾರಣಕ್ಕೆ ಅವರು ತಮ್ಮ ಕಾರು ಮಾರಿ, ಹಣ ಹೊಂದಿಸಿ ಆಕ್ಸಿಜನ್ ಖರೀದಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next