Advertisement

ದೇಶವನ್ನೇ ಬೆಚ್ಚಿಬೀಳಿಸಿದ ಈ ಹೊಸ “ಲವ್‌ ಜಿಹಾದ್‌’ಕೊಲೆ!

06:55 AM Dec 08, 2017 | Harsha Rao |

ಜೈಪುರ: ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ವೈರಲ್‌ ಆದ ಲವ್‌ ಜಿಹಾದ್‌ ಹತ್ಯೆಯ ವಿಡಿಯೋವೊಂದು ನೋಡುಗರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ರಾಜಸ್ಥಾನದ ರಾಜ್‌ಸಮಂದ್‌ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

Advertisement

ಕೊಲೆಯಾದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್‌ ಭತ್ತಾ ಶೇಖ್‌ ಹಾಗೂ ಹಂತಕನನ್ನು ಶಂಭುನಾಥ ರಾಯYರ್‌ ಎಂದು ಗುರುತಿಸಲಾಗಿದೆ. ಶಂಭು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ವಿಡಿಯೋದ ಆರಂಭದಲ್ಲಿ, ಕೊಲೆಗಾರ ಶಂಭು ಹಾಗೂ ಮೊಹಮ್ಮದ್‌ ತೋಟದ ಕಾಲುದಾರಿಯೊಂದರಲ್ಲಿ ಒಬ್ಬರ ಹಿಂದೊ ಬ್ಬರು ಮಾತನಾಡುತ್ತಾ ನಡೆದು ಹೋಗು ತ್ತಾರೆ. ನಿರ್ಜನ ಸ್ಥಳ ತಲುಪಿದ ಮೇಲೆ ಹಿಂದಿದ್ದ ಶಂಭು, ಮಚ್ಚಿನಿಂದ ಮೊಹಮ್ಮದ್‌ ಮೇಲೆ ಭೀಕರ ಹಲ್ಲೆ ನಡೆಸಿ ಕೊಲ್ಲುತ್ತಾನೆ. ಆನಂತರ, ಲವ್‌ ಜಿಹಾದ್‌ ನಡೆಸುವವರಿಗೆ ಇದೇ ಶಿಕ್ಷೆಯಾಗಲಿದೆ ಎಂದೂ ಎಚ್ಚರಿಸು ತ್ತಾನೆ. ಆನಂತರ, ಶವಕ್ಕೆ ಪೆಟ್ರೋಲ್‌ ಸುರಿದು ಸುಟ್ಟುಹಾಕುತ್ತಾನೆ. ಆದರೆ, ಪೊಲೀಸರ ತನಿಖೆ ಬೇರೆಯೇ ಕಥೆ ಹೇಳಿದೆ. ಶಂಭು ಹಿಂದೆ ಸಂಬಂಧವಿರಿ ಸಿಕೊಂಡಿದ್ದ ಮಹಿಳೆ ಜತೆ ಪಶ್ಚಿಮ ಬಂಗಾಳ ದಿಂದ ಕೂಲಿ ಕೆಲಸಕ್ಕಾಗಿ ವಲಸೆ ಬಂದಿದ್ದ ಮೊಹಮ್ಮದ್‌ ಸಂಬಂಧವಿರಿಸಿಕೊಂಡಿದ್ದಕ್ಕೆ ಕೊಂದು ಹಾಕಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next