Advertisement

ಚಂದ್ರನಲ್ಲಿನ ಸುರಂಗ ಅನ್ವೇಷಣೆಗೆ ನಿರ್ಧಾರ: ಯೂರೋಪ್‌ ಬಾಹ್ಯಾಕಾಶ ಸಂಸ್ಥೆಯ ವಿಭಿನ್ನ ಪ್ರಯತ್ನ

08:16 PM Mar 17, 2022 | Team Udayavani |

ನವದೆಹಲಿ: ಈವರೆಗೆ ಚಂದ್ರನ ಮೇಲೆ ಸಂಶೋಧನೆ ನಡೆಸಿದ ಎಲ್ಲಾ ದೇಶಗಳೂ ಅಲ್ಲಿನ ಮಣ್ಣಿನಲ್ಲೇನಿದೆ? ಅಲ್ಲಿ ನೀರಿದೆಯೇ? ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಲು ಪ್ರಯತ್ನಿಸಿವೆ.

Advertisement

ಆದರೆ, ಯೂರೋಪ್‌ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಇದೆಲ್ಲಕ್ಕಿಂತ ಕೊಂಚ ಮುಂದೆ ಹೋಗಿ, ಚಂದ್ರನ ನೆಲದ ಅಡಿಯಲ್ಲಿ ಇವೆಯೆಂದು ಹೇಳಲಾಗಿರುವ ನೈಸರ್ಗಿಕ ಸುರಂಗ ಮಾರ್ಗಗಳನ್ನು ಪತ್ತೆ ಹಚ್ಚಲು ಮುಂದಾಗಿದೆ.

ಇವುಗಳ ಬಗ್ಗೆ ಸಿದ್ಧಾಂತವೊಂದನ್ನು ಮಂಡಿಸಿರುವ ಖಗೋಳ ಜೈವಿಕಶಾಸ್ತ್ರಜ್ಞರು, ಈ ಗುಹೆಗಳು ಒಳಗೆ ಸುರಂಗ ಮಾರ್ಗಗಳಾಗಿ ಹರಡಿಕೊಂಡಿದ್ದು ಆಂತರ್ಯದಲ್ಲಿ ಪರಸ್ಪರ ಹೊಂದಿಕೊಂಡಿವೆ. ಹಾಗಾಗಿ, ಒಂದು ಗುಹೆಯಲ್ಲಿ ಪ್ರವೇಶ ಪಡೆದರೆ ಅದೆಷ್ಟೋ ದೂರ ಕ್ರಮಿಸಿ, ಮತ್ತೂಂದು ಗುಹೆಯಿಂದ ಆಚೆ ಬರಬಹುದು. ಇವು ಇಲ್ಲಿಯವರೆಗೆ ಹಾಳಾಗದೇ ಮೂಲಸ್ವರೂಪದಲ್ಲೇ ಇರುವುದರಿಂದ ಅವು ಮನುಷ್ಯನ ಜೀವನಕ್ಕೆ ಉತ್ತಮವಾದ ತಾಣಗಳಾಗಿರಲಿವೆ ಎಂದು ಹೇಳಿದ್ದಾರೆ.

ಹಾಗಾಗಿ, ಇದರ ಅನ್ವೇಷಣೆಗೆ ತೊಡಗಲು ಇಎಸ್‌ಎ ನಿರ್ಧರಿಸಿದೆ. ಇದೇ ಉದ್ದೇಶಕ್ಕಾಗಿ ತಾನು ಈ ಹಿಂದೆ ರೂಪಿಸಿದ್ದ ರೋಬೋ ಕ್ರೇನ್‌ ಹಾಗೂ ಡೆಡಾಲಸ್‌ ಎಂಬ ಎರಡು ಯೋಜನೆಗಳನ್ನು ಸಮ್ಮಿಳಿತಗೊಳಿಸಿ ಅದನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next