Advertisement

ಮೈತ್ರಿ:ನಾಳೆ ಟಿಡಿಪಿ ನಿರ್ಧಾರ

10:25 AM Feb 03, 2018 | Team Udayavani |

ಹೊಸದಿಲ್ಲಿ: ಈಗಾಗಲೇ ಸ್ವಲ್ಪಮಟ್ಟಿಗೆ ಬಹಿರಂಗವಾಗಿದ್ದ ಟಿಡಿಪಿ-ಬಿಜೆಪಿ ವೈಮನಸ್ಸು ಶುಕ್ರವಾರ ಇನ್ನಷ್ಟು ತೀವ್ರಗೊಂಡಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತಮ್ಮ ರಾಜ್ಯದ ಬೇಡಿಕೆಗಳ ಬಗ್ಗೆ ಗಮನ ಹರಿಸಿಲ್ಲವೆಂದು ಆಪಾದಿಸಿರುವ ಟಿಡಿಪಿ ನಾಯಕ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರವಿವಾರ ತಮ್ಮ ಪಕ್ಷದ ನಾಯಕರ ತುರ್ತು ಸಭೆ ಕರೆದಿದ್ದಾರೆ. ಅಷ್ಟೇ ಅಲ್ಲ, ಯುದ್ಧ ಘೋಷಿಸುವ ಸಮಯ ಬಂದಿದೆ ಎಂದೂ ಹೇಳಿದ್ದಾರೆ.

Advertisement

ಶುಕ್ರವಾರ, ದಿಲ್ಲಿಯಲ್ಲಿ ಈ ವಿಷಯ ತಿಳಿಸಿದ ಟಿಡಿಪಿ ಸಂಸದ ಟಿ.ಜಿ. ವೆಂಕಟೇಶ್‌, “ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ ನಿರ್ಮಾಣ ಹಾಗೂ ಪೋಲಾವರಂ ನೀರಾವರಿ ಯೋಜನೆಗೆ ಹಣಕಾಸು ನೆರವು ನೀಡುವ ವಾಗ್ಧಾನ ನೀಡಿದ್ದ ಕೇಂದ್ರ ಸರಕಾರ, ಈ ಬಾರಿಯ ಬಜೆಟ್‌ನಲ್ಲಿ ಅದನ್ನು ನಿರ್ಲಕ್ಷಿಸಿದೆ. ಇದು ಆಂಧ್ರದ ಜನತೆಗೆ ಹಾಗೂ ಟಿಡಿಪಿ ನಾಯಕರಿಗೆ ಅಸಮಾಧಾನ ತಂದಿದೆ. ಇದೀಗ, ಎನ್‌ಡಿಎಯಲ್ಲಿ ಮುಂದುವರಿಯುವುದು, ಟಿಡಿಪಿಯ ಎಲ್ಲಾ ಸಂಸದರು ರಾಜಿನಾಮೆ ಸಲ್ಲಿಸಿ ಒತ್ತಡ ಹೇರುವುದು ಅಥವಾ ಎನ್‌ಡಿಎ ಜತೆಗಿನ ಮೈತ್ರಿ ಕಡಿದುಕೊಳ್ಳುವುದು – ಈ ಮೂರು ದಾರಿಗಳು ನಮ್ಮ ಮುಂದಿವೆ. ಇದನ್ನು ರವಿವಾರದ ಸಭೆಯಲ್ಲಿ ನಿರ್ಧರಿಸಲಾಗುತ್ತದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next