Advertisement

ಮುಂಬೈ to ಕಾಶ್ಮೀರ್; ಅಪ್ಪನನ್ನು ನೋಡಲು ಸೈಕಲ್ ನಲ್ಲಿ ಹೊರಟ ಆರಿಫ್ ಗೆ ಸೇನಾ ಸಹಾಯ!

04:00 PM Apr 06, 2020 | Hari Prasad |

ಶ್ರೀನಗರ: ಅಪ್ಪ ಕಾಶ್ಮೀರದಲ್ಲಿ ಹಾಸಿಗೆ ಹಿಡಿದು, ಜೀವನ್ಮರಣದೊಂದಿಗೆ ಹೋರಾಡುತ್ತಿದ್ದಾನೆ. ಆತನನ್ನು ನೋಡಲು ಮುಂಬೈನಿಂದ ಸೈಕಲ್‌ ತುಳಿದು ಹೊರಟ ಮಗ 4 ದಿನಗಳ ಬಳಿಕ ಕೊನೆಗೂ ಅಪ್ಪನ ಮುಖ ನೋಡುವಂತಾಯಿತು. ಇದು ಮುಂಬೈನ ಸೆಕ್ಯೂರಿಟಿ ಗಾರ್ಡ್‌ ಮೊಹಮ್ಮದ್‌ ಆರೀಫ್ ನ ವ್ಯಥೆಯ ಕಥೆ.

Advertisement

ಮೊನ್ನೆ ಗುರುವಾರದಂದು ಆರಿಫ್ ಗೆ ಬಂದ ಆ ಒಂದು ಕರೆ ಆತನನ್ನು ದಿಗ್ಭ್ರಾಂತಿಗೊಳಿಸಿದೆ. ರಜೌರಿಯಲ್ಲಿರುವ ತನ್ನ ಸ್ವಂತ ಮನೆಯಲ್ಲಿದ್ದ ಅಪ್ಪ ಇದ್ದಕ್ಕಿದ್ದಂತೆ ಪಾರ್ಶ್ವವಾಯುಪೀಡಿತರಾಗಿದ್ದಾರೆ. ಮುಂದಿನ ಕೆಲ ಗಂಟೆಗಳವರೆಗೆ ಆರಿಫ್ ತನ್ನ ಗೆಳೆಯರಿಗೆ, ಮನೆ ಪಕ್ಕದವರಿಗೆ ಕರೆಗಳ ಮೇಲೆ ಕರೆಗಳನ್ನು ಮಾಡಿ ತನ್ನ ತಂದೆಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಲಾಕ್ ಡೌನ್ ಪರಿಸ್ಥಿತಿಯಿಂದಾಗಿ ಯಾರಿಗೂ ರಫೀಕ್ ಮನೆಗೆ ಸಕಾಲದಲ್ಲಿ ತಲುಪಲಾಗಿರಲೇ ಇಲ್ಲ.

ಆದರೆ ಬಳಿಕ ಸಾಯಂಕಾಲದ ಸಮಯದಲ್ಲಿ ರಫೀಕ್ ನ ಸ್ನೇಹಿತರಲ್ಲಿ ಒಬ್ಬರಿಗೆ ಆತನ ಮನೆಗೆ ತಲುಪಿ ತಂದೆಯನ್ನು ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗಿದೆ. ಇತ್ತ ಅನಾರೋಗ್ಯಪೀಡಿತ ತನ್ನ ತಂದೆಯನ್ನು ಕಾಣಲೇಬೇಕೆಂದು ಹಂಬಲಿಸಿ ರಫೀಕ್ ಸುಮಾರು 2 ಸಾವಿರ ಕಿಲೋಮೀಟರ್ ದೂರದ ಅಸಾಧ್ಯ ಸೈಕಲ್ ಪ್ರಯಾಣವನ್ನು ಕೈಗೊಂಡಿದ್ದ.

ಆರೀಫ್ ಸೈಕಲ್‌ ಹೊಡೆಯುತ್ತಾ ಗುಜರಾತ್‌ ತಲುಪುತ್ತಿದ್ದಂತೆಯೇ, ಅಲ್ಲಿನ ಪೊಲೀಸರು ಈತನ ಸ್ಥಿತಿ ತಿಳಿದು, ನೆರವಾಗಿದ್ದಾರೆ. ಕಾಶ್ಮೀರದೆಡೆಗೆ ಹೋಗುವ ಸೇನಾ ಟ್ರಕ್‌ನಲ್ಲಿ ಆತನಿಗೆ ತೆರಳಲು ವ್ಯವಸ್ಥೆ ಮಾಡಿ, ಅಗತ್ಯ ಆಹಾರದ ಪೊಟ್ಟಣಗಳನ್ನು ನೀಡಿ, ಮಾನವೀಯತೆ ಮೆರೆದಿದ್ದಾರೆ. ಆರೀಫ್ ನ ಮನೆ ಇರುವುದು, ಶ್ರೀನಗರದಿಂದ 155 ಕಿ.ಮೀ. ದೂರದ ರಾಜೌಲಿಯಲ್ಲಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next