Advertisement
ಯಾವತ್ತೂ ಶ್ವೇತವರ್ಣದ ಉಡುಗೆಗಳಲ್ಲಿ ಕಾಣಿಸಿಕೊಳ್ಳುವ ದಮಾನಿ ಮಿತಭಾಷಿ, ಮಾಧ್ಯಮದಿಂದ ಸದಾ ದೂರ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ತೀರ ಅಪರೂಪ. ಡಿ ಮಾರ್ಟ್ ಕಂಪೆನಿಯ ಒಡೆಯರಾಗಿರುವ ದಮಾನಿ, ವಾರದ ಹಿಂದಷ್ಟೇ ತಮ್ಮ ಕಂಪೆನಿಯ ಐಪಿಓ (ಸಾರ್ವಜನಿಕ ಶೇರು ನೀಡಿಕೆ) ನಡೆಸಿದ್ದರು. ಇದು ಶೇ.104ರ ಅಭೂತಪೂರ್ವ ಮತ್ತು ಅಮೋಘ ಲಿಸ್ಟಿಂಗ್ ಲಾಭವನ್ನು ಶೇರುದಾರರಿಗೆ ಒದಗಿಸಿಕೊಟ್ಟಿರುವುದು ಶೇರು ಮಾರುಕಟ್ಟೆಯಲ್ಲಿ ಭಾರೀ ದೊಡ್ಡ ಸಂಗತಿ ಎನಿಸಿತು.
Related Articles
Advertisement
* ಡಿ-ಮಾರ್ಟ್ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ಬಿಎಸ್‌ಇಯಲ್ಲಿ 36,758 ಕೋಟಿ ರೂ.ಗೆ ಏರಿದೆ.
* ದಮಾನಿ ಅವರು ಭಾರತದ ಪ್ರಖ್ಯಾತ ಬಿಲಿಯಾಧಿಪತಿ ಹೂಡಿಕೆದಾರ ರಾಕೇಶ್ ಝಂಝನ್‌ವಾಲಾ ಅವರ ಮಾರ್ಗದರ್ಶಕರು.
* ವಿಎಸ್‌ಟಿ ಇಂಡಸ್ಟ್ರೀಸ್, ಇಂಡಿಯಾ ಸಿಮೆಂಟ್ಸ್, ಜಿಲೆಟ್, ಕ್ರೈಸಿಲ್, 3ಎಂ ಇಂಡಿಯಾ, ರ್ಯಾಡಿಸನ್ ಬ್ಲೂ ರಿಸಾರ್ಟ್, ಬ್ಲೂ ಡಾರ್ಟ್ ಎಕ್ಸ್‌ಪ್ರೆಸ್ ಮುಂತಾದ ಕಂಪೆನಿಗಳಲ್ಲಿ ದಮಾನಿ ಅವರ ದೊಡ್ಡ ಮಟ್ಟದ ಹೂಡಿಕೆ ಇದೆ.
* ದಮಾನಿ ಅವರು ಮಿಸ್ಟರ್ ವೈಟ್ ಆ್ಯಂಡ್ ವೈಟ್ ಎಂದೇ ಕರೆಯಲ್ಪಡುವುದು ಅವರು ಸದಾ ತೊಡುವ ಶ್ವೇತವರ್ಣದ ಉಡುಗೆ-ತೊಡುಗೆಗಳಿಂದಾಗಿ.
*ದಮಾನಿ ಅವರ ಕುಟುಂಬದ ಉದ್ಯಮ ಬಾಲ್ ಬ್ಯಾರಿಂಗ್ ಉತ್ಪಾದನೆ. 1980ರಲ್ಲಿ ತಂದೆಯ ನಿಧನಾನಂತರ ಇವರು ಒಲ್ಲದ ಮನಸ್ಸಿನಿಂದ ಶೇರ್ ಬ್ರೋಕರ್ ಮತ್ತು ಟ್ರೇಡರ್ ಆದರು. ಆದರೆ ಅತೀ ಶೀಘ್ರದಲ್ಲೇ ಅವರು ದೇಶದ ಶೇರು ಮಾರುಕಟ್ಟೆಗಳಲ್ಲಿ ಓರ್ವ ಅತ್ಯುತ್ತಮ ಮೌಲ್ಯದ ಹೂಡಿಕೆದಾರರು ಎನಿಸಿಕೊಂಡರು.
* ದಮಾನಿ ಅವರು ಬಿಕಾಂ ಮೊದಲನೇ ವರ್ಷದ ಶಿಕ್ಷಣದ ಬಳಿಕ ಕಾಲೇಜಿನಿಂದ ಡ್ರಾಪ್ ಔಟ್ ಆದರು.