ಕೋಲ್ಕತಾ: ಬಣ್ಣದ ಕೊಡೆಯ ಚಾವಣಿ, ಕೆಲವು ಪ್ಲಾಸ್ಟಿಕ್ ಚೇರ್, ಹಳೇ ಕಾಲದ ಮೂರ್ನಾಲ್ಕು ಮರದ ಟೇಬಲ್ಲು… ಪಾರ್ಥ ಪ್ರತೀನ್ ಗಂಗೂಲಿ ಎಂಬಾತನ ಪುಟಾಣಿ ಟೀ ಶಾಪ್‌ನ ಆಸ್ತಿ ಇಷ್ಟೇ ಆದರೂ ಇಲ್ಲಿ ಒಂದು ಕಪ್ ಚಹಾದ ಬೆಲೆ ಬರೋಬ್ಬರಿ 1 ಸಾವಿರ ರೂ.!
10 ರೂ.ನಿಂದ 1 ಸಾವಿರ ರೂ.ವರೆಗೆ ವಿವಿಧ ಬೆಲೆಗಳ 100ಕ್ಕೂ ಅಧಿಕ ವೆರೈಟಿ ಟೀಗಳನ್ನು ಗಂಗೂಲಿ, ಮುಕುಂದಪುರದ “ನಿರ್ಜಾಶ್’ ಚಹಾ ಶಾಪ್ ನಲ್ಲಿ ಮಾರುತ್ತಾರೆ. ವೈನ್ ಟೀ, ತುಳಸಿ ಜಿಂಜರ್ ಟೀ, ರೂಬಿಯಾಸ್ ಟೀ, ದಾಸವಾಳ ಟೀ… ಹೀಗೆ ಇಲ್ಲಿ ಸಿಗದ ಚಹಾಗಳೇ ಇಲ್ಲ. ಇಲ್ಲಿ ದುಬಾರಿ ಟೀ ಇದ್ದು, ಅದರ ಹೆಸರು ಬೋ-ಲೇ ಚಹಾ. ಇದರ ಒಂದು ಕಪ್ ಗೆ ಬರೋಬ್ಬರಿ 1000 ರೂಪಾಯಿ!
ಜಪಾನ್, ಚೀನಾದಲ್ಲಿ ಭಾರೀ ಜನಪ್ರಿಯತೆ ಇರುವ ಈ ಚಹಾದ ಪುಡಿ ಕೆ.ಜಿ.ಗೆ 3 ಲಕ್ಷ ರೂ.ಗಳಂತೆ! ಚುನಾವಣಾ ಪ್ರಚಾರದ ಬಿಸಿಯ ನಡುವೆ ಗಂಗೂಲಿಯ “ನಿರ್ಜಾಶ್’ ಅಂಗಡಿಯ ಚಹಾ ಕೂಡ ತನ್ನ ಸ್ವಾದ, ತಾಪ ಹೆಚ್ಚಿಸಿಕೊಂಡಿದೆ.
ಇದನ್ನೂ ಓದಿ :ಕರ್ನಾಟಕ, ಮಹಾರಾಷ್ಟ್ರ, ಕೇರಳ, ಪಂಜಾಬ್ ನಲ್ಲಿ ಕೋವಿಡ್ ಪ್ರಕರಣಗಳ ಏರಿಕೆ..!