Advertisement

ಕೇರಳದ ಈ ಗ್ರಾಮದಲ್ಲಿ ಎಲ್ಲರೂ ಹಿಂದಿ ಗೊತ್ತಿರುವವರೇ!

06:51 PM Oct 23, 2022 | Team Udayavani |

ತಿರುವನಂತಪುರಂ:ತಮಿಳುನಾಡು, ಕೇರಳದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಆದರೆ ಕೇರಳದ ಈ ಗ್ರಾಮದಲ್ಲಿ ಮಾತ್ರ ಪ್ರತಿಯೊಬ್ಬರೂ ಮನಸ್ಸು ಪೂರ್ತಿಯಾಗಿ ಹಿಂದಿ ಕಲಿಯುತ್ತಿದ್ದಾರೆ. 80 ವರ್ಷ ದಾಟಿದವರೂ ಹಿಂದಿಯಲ್ಲಿ ಮಾತನಾಡುವ ಅಭ್ಯಾಸ ಮಾಡಿಕೊಳ್ಳಲಾರಂಭಿಸಿದ್ದಾರೆ.

Advertisement

ಕಲ್ಲಿಕೋಟೆಯ ಚೆಲ್ಲನೂರು ಗ್ರಾಮ ಈ ರೀತಿಯಲ್ಲಿ ಹಿಂದಿ ಸಾಕ್ಷರತೆಯತ್ತ ತೆರಳುತ್ತಿರುವ ಗ್ರಾಮ. ಈ ಗ್ರಾಮದಲ್ಲಿ ಹೆಚ್ಚು ಪ್ರಮಾಣದಲ್ಲಿ ಉತ್ತರ ಭಾರತದಿಂದ ವಲಸೆ ಬಂದಿರುವ ಕಾರ್ಮಿಕರಿದ್ದಾರಂತೆ. ಅವರಿಗೆ ಹಿಂದಿ ಮಾತ್ರವೇ ಬರುವ ಹಿನ್ನೆಲೆ ಗ್ರಾಮಸ್ಥರೆಲ್ಲರೂ ಹಿಂದಿ ಕಲಿತು, ಅವರೊಂದಿಗೆ ಸ್ನೇಹ ಬೆಳೆಸಿಕೊಳ್ಳಲಿ ಎಂದು ಗ್ರಾಮ ಪಂಚಾಯಿತಿಯೇ ಹಿಂದಿ ಕಲಿಕೆಯ ಅಭಿಯಾನ ಹಮ್ಮಿಕೊಂಡಿದೆ.

ಊರಿನ ಶಾಲೆಯ ಹಿಂದಿ ಶಿಕ್ಷಕರ ಸಹಾಯದಿಂದ ಹಿಂದಿ ನೋಟ್‌ ಪುಸ್ತಕ ಸಿದ್ಧಗೊಳಿಸಿ, ಅದನ್ನು ಜನರಿಗೆ ಕಲಿಸಲಾಗುತ್ತಿದೆ. ಹಿಂದಿ ಬರುವವರೆಲ್ಲರೂ ಸಮಿತಿ ಮಾಡಿಕೊಂಡು ತಾವೇ ಶಿಕ್ಷಕರಾಗಿದ್ದಾರೆ.

“20-70 ವಯಸ್ಸಿನವರಿಗೆ ಹಿಂದಿ ಹೇಳಿಕೊಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತಾದರೂ 80 ದಾಟಿದವರೂ ಸ್ವ ಇಚ್ಛೆಯಿಂದ ಹಿಂದಿ ಕಲಿಯುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆಯೇ ಇಂಥ ಕಲಿಕೆ ಆರಂಭವಾಗಿದೆ’ ಎನ್ನುತ್ತಾರೆ ಗ್ರಾಮದ ಅಧ್ಯಕ್ಷ ನೌಶೀರ್‌.

Advertisement

Udayavani is now on Telegram. Click here to join our channel and stay updated with the latest news.

Next