ಬೀಜಿಂಗ್: ಇದು ಜಗತ್ತಿನಲ್ಲಿಯೇ ಅತೀ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬರೋಬ್ಬರಿ 55 ಕಿಲೋ ಮೀಟರ್ ಉದ್ದದ ಸೇತುವೆಯಾಗಿದ್ದು, ಎಲ್ಲರ ಹುಬ್ಬೇರಿಸುವಂತೆ ನಿರ್ಮಾಣವಾಗಿರುವ ಈ ಸೇತುವೆ ಇರುವುದು ಚೀನಾ-ಹಾಂಗ್ ಕಾಂಗ್ ನಡುವೆ. ಅಕ್ಟೋಬರ್ 24ರಂದು ಸೇತುವೆ ಉದ್ಘಾಟನೆಗೆ ಸಜ್ಜುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಂಗ್ ಕಾಂಗ್ ಮತ್ತು ಝುಹೈ ಮಕಾವೋ ಸಂಪರ್ಕಿಸುವ 55 ಕಿಲೋ ಮೀಟರ್ ಉದ್ದದ ಸೇತುವೆ ಅಕ್ಟೋಬರ್ 24ರಂದು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. 2009ರಲ್ಲಿ ಸಮುದ್ರ ಸೇತುವೆ ನಿರ್ಮಾಣ ಆರಂಭಿಸಲಾಗಿತ್ತು.
ಈ ಸೇತುವೆಯ ವಿಶೇಷ ಏನು?
ಹಾಂಗ್ ಕಾಂಗ್ ನಿಂದ ಝುಹೈ ನಗರ ತಲುಪಲು 3ಗಂಟೆ ಪ್ರಯಾಣಿಸಬೇಕಿತ್ತು. ಇದೀಗ 55 ಕಿಲೋ ಮೀಟರ್ ಸಮುದ್ರ ಸೇತುವೆಯಿಂದಾಗಿ ಕೇವಲ 30 ನಿಮಿಷಗಳಲ್ಲಿ ತಲುಪಬಹುದಾಗಿದೆ. ಈ ಸೇತುವೆ ನಿರ್ಮಾಣಕ್ಕೆ 9.83ಲಕ್ಷ ಕೋಟಿ ರೂಪಾಯಿಯಷ್ಟು ಹಣವನ್ನು ಚೀನಾ ವ್ಯಯಿಸಿದೆ.
ಸೇತುವೆ ಉದ್ಘಾಟನೆಗೆ 5 ದಿನಗಳ ಮುನ್ನವೇ ಹಾಂಗ್ ಕಾಂಗ್ ನಲ್ಲಿ ಈ ಸೇತುವೆಯಲ್ಲಿ ಪ್ರಯಾಣಿಸಲು ಟಿಕೆಟ್ ಅನ್ನು ಯಾವ ರೀತಿ ಪಡೆಯಬೇಕೆಂಬ ಬಗ್ಗೆ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದ್ದಾರೆ.