ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಪೋನ್ ಮಕ್ಕಳಿಂದ ಹಿಡಿದು ಡೊಡ್ಡವರ ಕೈಯಲ್ಲೂ ರಾರಾಜಿಸುತ್ತಿದೆ. ಅಂಗೈ ಅಗಲದ ಈ ಫೋನ್ ಗಳು ಹಲವರ ಜೀವನದ ಒಡನಾಡಿಗಳಾಗಿವೆ ಎಂದರೇ ತಪ್ಪಲ್ಲ. ಸರಿಸುಮಾರು 6 ಇಂಚು ಇರುವ ಈ ಸ್ಮಾರ್ಟ್ ಫೋನ್ ಗಳನ್ನು ಕಂಡರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು.
ವಿಷಯವೇನೆಂದರೇ ಜಗತ್ತಿನ ಅತೀ ಸಣ್ಣ 4G ಆ್ಯಂಡ್ರಾಯ್ಡ್ 10 ಸ್ಮಾರ್ಟ್ ಪೋನ್ ಒಂದನ್ನು ಚೀನಾದ ಮೂಲದ ಕಂಪೆನಿಯೊಂದು ಹೊರತಂದಿದೆ. ಇದು ನಿಮ್ಮ ಕ್ರೆಡಿಟ್ ಕಾರ್ಡ್ ನಷ್ಟೆ ಗಾತ್ರವನ್ನು ಹೊಂದಿದೆ. ಇಂದಿನ ದಿನಗಳಲ್ಲಿ ಕೆಲಜನರು ಗಾತ್ರದಲ್ಲಿ ಪುಟ್ಟದಾದ ಸ್ಮಾರ್ಟ್ ಪೋನ್ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಇದನ್ನು ಬಳಸುವುದು ಕೂಡ ಸುಲಭ. ಕೆಲವೊಂದು ಐಪೋನ್ ಗಳು ಕೂಡ ಗಾತ್ರದಲ್ಲಿ ಕಿರಿದಾಗಿರುವುದನ್ನು ಗಮನಿಸಿರಬಹುದು.
ಶಾಂಘೈ ಮೂಲದ ಯೂನಿ ಹರ್ಡ್ಸ್ ಕಂಪೆನಿ ವಿಶ್ವದ ಅತೀ ಚಿಕ್ಕ 4ಜಿ ಆ್ಯಂಡ್ರಾಯ್ಡ್ 10 ಸ್ಮಾರ್ಟ್ ಪೋನ್ ‘ಜೆಲ್ಲಿ 2’ ವನ್ನು ಹೊರತಂದಿದೆ. ಈ ಫೋನ್ 2017 ರಲ್ಲಿ ಹೊರಬಂದ ಜೆಲ್ಲಿ ಸ್ಮಾರ್ಟ್ ಪೋನ್ ನ ತದ್ರೂಪಿಯಾಗಿದೆ.
ಈ ಪೋನ್ 4ಜಿ ಆಯ್ಕೆ ಹೊಂದಿದ್ದು, ಆ್ಯಂಡ್ರಾಯ್ಡ್ 10 ಅಪರೇಟಿಂಗ್ ಸಿಸ್ಟಂ ಹೊಂದಿದೆ. ಕಂಪೆನಿಯ ಪ್ರಕಾರ ಹಿಂದಿನ ಪೋನ್ ಗಿಂತ ದುಪ್ಪಟ್ಟು ಪ್ರಮಾಣದ ಬ್ಯಾಟರಿ ಸಾಮಾರ್ಥ್ಯ ಇದಕ್ಕಿದ್ದು, ಮಾತ್ರವಲ್ಲದೆ ಸುಧಾರಿತ ಕ್ಯಾಮಾರ ಮತ್ತು ಜಿಪಿಎಸ್ ತಂತ್ರಜ್ಞಾನವನ್ನು ಹೊಂದಿದೆ.