Advertisement

ಇದು ಸಂಭ್ರಮಿಸುವ ಸಮಯವಲ್ಲ : ಕೇರಳ ಸಿಎಂ ಪಿಣರಾಯಿ ವಿಜಯನ್

05:59 PM May 02, 2021 | Team Udayavani |

ಕೇರಳ :  ವಿಧಾನ ಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಪಡೆದಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಾಧ್ಯಮಗಳ ಎದುರು ಮಾತನಾಡಿದ್ದಾರೆ.

Advertisement

ಚುನಾವಣೆಯಲ್ಲಿ ಗೆಲುವು ಲಭಿಸಿದ ಬಳಿಕ ಮೊದಲ ಬಾರಿಗೆ ಪತ್ರಿಕೆಗಳಿಗೆ ಪ್ರತಿಕ್ರಿಯಿಸಿರುವ ವಿಜಯನ್, ಎಲ್‍ಡಿಎಫ್ ಪರವಾಗಿ ಕೇರಳದ ಜನತೆ ತೀರ್ಪು ನೀಡಿದ್ದಾರೆ. ಆದರೆ, ಈ ದೊಡ್ಡ ಗೆಲುವು ಸಂಭ್ರಮಿಸುವ ಕಾಲ ಇದಲ್ಲ. ಇದು ಕೋವಿಡ್ ವಿರುದ್ಧ ಹೋರಾಡುವಂತಹ ಸಮಯ ಎಂದಿದ್ದಾರೆ.

ಕೇರಳದಲ್ಲಿ ಈಗಿನ ಎಡಪಂಥೀಯ ಎಲ್‌ಡಿಎಫ್ ಕೂಟವು 140 ಸ್ಥಾನಗಳ ಪೈಕಿ 99 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಗೆಲುವು ಖಚಿತಪಡಿಸಿಕೊಂಡಿದೆ. ಈವರೆಗೆ ಕೇರಳದಲ್ಲಿ ಯಾವೊಂದು ಪಕ್ಷವೂ 5 ವರ್ಷಕ್ಕಿಂತ ಹೆಚ್ಚು ನಿರಂತರವಾಗಿ ಅಧಿಕಾರ ನಡೆಸಿದ ಇತಿಹಾಸ ಇಲ್ಲ. ಆದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಯ್ಯಪ್ಪ ಸ್ವಾಮಿ ಶಬರಿಮಲೆ ವಿವಾದದಿಂದ ಇತ್ತೀಚಿನ ಕೊರೋನಾ ಯೋಜನೆವರೆಗೆ ಹಲವು ವಿಚಾರಗಳನ್ನು ಯಶಸ್ವಿಯಾಗಿ ನಿಭಾಯಿಸಿ ಜನ ಮನ್ನಣೆ ಗಳಿಸಿದ್ದಾರೆ. ಇದೇ ಕಾರಣಕ್ಕೆ ಕೇರಳ ಮತದಾರ ಮತ್ತೆ ಸಿಎಂ ವಿಜಯನ್ ಅವರಿಗೆ ವಿಜಯ ಮಾಲೆ ತೊಡಿಸಿದ್ದಾನೆ.

ಇನ್ನುಳಿದಂತೆ ಯುಡಿಎಫ್ 41 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next