Advertisement
ಉದಾಹರಣೆಗೆ, ಇಂಗ್ಲೆಂಡ್‌ನ ಮುಖ್ಯ ವೈದ್ಯಾಧಿಕಾರಿ ಕ್ರಿಸ್ ವಿಟ್ಟಿ ಅವರು ಮುಖವಾಡ ಧರಿಸುವುದು ಅನಗತ್ಯ ಎಂಬ ಹೇಳಿಕೆ ನೀಡಿದ್ದು, ಅಲ್ಲಿನ ಜನರು ಈ ಕುರಿತು ನಿರ್ಲಕ್ಷ್ಯ ತಾಳಲು ಕಾರಣವಾದರು. ಬಳಿಕ ಬ್ರಿಟನ್ ಜನರೂ ಎಚ್ಚೆತ್ತುಕೊಂಡಿತು. ಈಗ ಎಲ್ಲೆಡೆ ಮುಖವಾಡಗಳು ರಾರಾಜಿಸುತ್ತಿವೆ.
Related Articles
Advertisement
ಅಭಿಯಾನಸ್ಯಾನ್ ಫ್ರಾನ್ಸಿಸ್ಕೊ ಸಾರ್ವಜನಿಕವಾಗಿ ಮುಖ ವಾಡಗಳನ್ನು ಕಡ್ಡಾಯಗೊಳಿಸಿದ ಅನಂತರ, ಜಾಗೃತಿ ಅಭಿಯಾನ ಪ್ರಾರಂಭವಾಯಿತು. ನಗರದ ಮೇಯರ್, ಆರೋಗ್ಯ ಮಂಡಳಿಯ ಸದಸ್ಯ ರೊಂದಿಗೆ, ರೆಡ್ ಕ್ರಾಸ್ ಪ್ರಚಾರ ಮಾಡಿತು. “ಮುಖ ವಾಡ ಧರಿಸಿ ಮತ್ತು ನಿಮ್ಮ ಜೀವನವನ್ನು ಉಳಿಸಿಕೊಳ್ಳಿ! ಮುಖವಾಡವು ಇನ್‌ಪ್ಲ್ಯೂಯೆಂಜಾ ವಿರುದ್ಧ ಶೇ. 99ರಷ್ಟು ಕೆಲಸ ಮಾಡುತ್ತದೆ. (Wear a Mask and Save Your Life! A Mask is 99% Proof Against Influenza.) ಎಂಬ ಅಭಿಯಾನ ಯಶಸ್ವಿಯಾಯಿತು. ಮುಖವಾಡವಿಲ್ಲದೆ ಹೊರಗೆ ತಿರುಗುವುದು ಯಾರಿಗಾದರೂ ಕಂಡು ಬಂದರೆ ಜೈಲು ಶಿಕ್ಷೆ ವಿಧಿಸಬಹುದು ಎಂಬ ಕಾನೂನು ಜಾರಿಯಲ್ಲಿತ್ತು. ಕ್ಯಾಲಿಫೋರ್ನಿಯಾ, ಸಾಂತಾ ಕ್ರೂಜ್ ಮತ್ತು ಲಾಸ್ ಏಂಜಲೀಸ್ ಸೇರಿದಂತೆ ಹಲವು ನಗರಗಳು ಇದನ್ನು ಬೆಂಬಲಿಸಿದವು. ಕೇವಲ ಅಮೆರಿಕವಲ್ಲ
ಇನ್ನೊಂದು ಬದಿಯಲ್ಲಿ ಅಟ್ಲಾಂಟಿಕ್‌ನಲ್ಲಿಯೂ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಪ್ಯಾರಸ್ ನ ಅಕಾಡೆಮಿ ಡಿ ಮೆಡಿಸಿನ್ ಸಮಿತಿಯು 1918 ರ ನವೆಂಬರ್‌ಆರಂಭದಲ್ಲಿ ಫ್ರೆಂಚ್ ಕ್ಯಾಪಿಟಲ್‌ನಲ್ಲಿ ಫೇಸ್ ಮಾಸ್ಕ್ ಧರಿಸಲು ಶಿಫಾರಸು ಮಾಡಿತು. ಇತಿಹಾಸವು ಪುನರಾವರ್ತನೆ
ಲಾಸ್ ಏಂಜಲೀಸ್‌ನ ಮೇಯರ್ ಸಾರ್ವಜನಿಕ ಶಾಪಿಂಗ್ ಗೆ ಹೋಗುವಾಗ ಮುಖವಾಡಗಳನ್ನು ಧರಿಸಿ ಎಂದು ಜನರಲ್ಲಿ ಮನವಿ ಮಾಡಿತು. ಯುರೋಪ್ ಮತ್ತು ಉತ್ತರ ಅಮೆರಿಕದ ಜನರು ಇದನ್ನು ಶ್ರದ್ಧೆಯಿಂದ ತಮ್ಮಲ್ಲೂ ಪಾಲಿಸಿದರು. ಚಿಕಾಗೋದ ಪ್ರೊಫಿಲ್ಯಾಕ್ಟೊ ಮ್ಯಾನ್ಯೂಫ್ಯಾಕ್ಚರಿಂಗ್ ಕಂಪನಿ ಮಾತ್ರ ಆಗ ಮಾಸ್ಕ್ ತಯಾರಿಸುತ್ತಿತ್ತು. ಅದೂ ಅಲ್ಪ ಸಂಖ್ಯೆಯಲ್ಲಿ ಮಾತ್ರ. ಬೇಡಿಕೆ ಹೆಚ್ಚುತ್ತಾ ಹೋದಂತೆ ಅದಕ್ಕೆ ತಕ್ಕಂತೆ ಪೂರೈಸಲು ಸಾಧ್ಯವಾಗಲಿಲ್ಲ. ಬಳಿಕ ಮನೆಗಳಲ್ಲಿ ಜನರು ಉತ್ಪಾದಿಸ ತೊಡಗಿದರು. ಅಮೆರಿಕದ ಕೆಲವು ಭಾಗಗಳಲ್ಲಿ, ಚರ್ಚುಗಳು, ಸಮುದಾಯ ಗುಂಪುಗಳು ಮತ್ತು ರೆಡ್‌ಕ್ರಾಸ್ ಸಂಸ್ಥೆ ಗಳು ಒಗ್ಗೂಡಿ, ಬೇಡಿಕೆಯನ್ನು ತಕ್ಕಮಟ್ಟಿಗೆ ನೀಗಿ ಸು ವಷ್ಟು ಮಾಸ್ಕ್ ಗಳು ಉತ್ಪಾದನೆಯಾದವು. ಪತ್ರಿಕೆ ಗಳಲ್ಲಿ ಅಂದು ಅದೇ ಸುದ್ದಿಯಾಗಿತ್ತು. ಸೆಪ್ಟಂಬರ್26, ವಾಷಿಂಗ್ಟನ್ ಟೈಮ್ಸ… ಪತ್ರಿಕೆ “ಸ್ಪ್ಯಾನಿಷ್ ಜ್ವರ” ತಡೆಯಲು ಯುಎಸ್ ಸೈನಿಕರಿಗೆ 45,000 ಮುಖ ವಾಡ ಒದಗಿಸಲಾಗಿದೆ ಎಂದು ವರದಿ ಮಾಡಿತ್ತು. ಪೊಲೀಸ್ ಮಾಸ್ಕ್
ಮಾಸ್ಕ್ ಧರಿಸುವ ಕಾನೂನುಗಳಿಗಿಂತ ಜಾಗೃತಿ ಹಾಗೂ ಸ್ವ ಅರಿವು ಹೆಚ್ಚಾಗಿ ಕೆಲಸ ಮಾಡಿತು. ಅಂದಿನ ಕಾಲದಲ್ಲಿ ಜನರು ಈ ಕುರಿತು ಸಾಕ್ಷರರಾಗಿದ್ದರು. ಸಾರ್ವಜನಿಕರೇ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಿ ಬೆಂಬಲಿಸಿದ್ದರು.