Advertisement

13 ಐಪಿಎಲ್‌ಗ‌ಳಲ್ಲಿ ಇದೇ ಅತ್ಯುತ್ತಮ ಸಾಧನೆ: ಮುಂಬೈ ಇಂಡಿಯನ್ಸ್ ನ ಆಕಾಶ್ ಅಂಬಾನಿ

02:42 PM Nov 16, 2020 | keerthan |

ಮುಂಬಯಿ: ಹದಿಮೂರು ವರ್ಷಗಳ ಐಪಿಎಲ್‌ ಇತಿಹಾಸದಲ್ಲಿ ನಮ್ಮವರ ಈ ಸಲದ ಸಾಧನೆಯೇ ಅತ್ಯುತ್ತಮವಾದುದು ಎಂದು ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡದ ಮಾಲಕ ಆಕಾಶ್‌ ಅಂಬಾನಿ ಹೇಳಿದ್ದಾರೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ನಮ್ಮ ಗೆಲುವು-ಸೋಲಿನ ದಾಖಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ ಆಟದ ಗುಣಮಟ್ಟಕ್ಕೆ ಹೋಲಿಸಿದರೆ ಈ ವರ್ಷದ ಸಾಧನೆ ಅತ್ಯುತ್ತಮ ಎಂದಿದ್ದಾರೆ.

ನಾವು ಯಾವ ಕಾರ್ಯತಂತ್ರಗಳನ್ನು ರೂಪಿಸಿದ್ದೆವೋ ಅವೆಲ್ಲವೂ ಶೇ. 95ರಿಂದ ಶೇ. 98ರಷ್ಟು ಯಶಸ್ಸು ಕಂಡಿತು. ಹೀಗಾಗಿ ಈ 13 ವರ್ಷಗಳಲ್ಲೇ ನಮ್ಮವರು ನೀಡಿದ ಅತ್ಯುತ್ತಮ ಪ್ರದರ್ಶನ ಇದಾಗಿದೆ ಎಂದು ಆಕಾಶ್ ಅಂಬಾನಿ ಹೇಳಿದರು.

ಇದನ್ನೂ ಓದಿ:ಯುವ ದೇವದತ್ತ ಪಡಿಕ್ಕಲ್‌ಗೆ ಸ್ಫೂರ್ತಿ ತುಂಬಿದ ಎ.ಬಿ.ಡಿವಿಲಿಯರ್ಸ್

ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸಿ ಮತ್ತೊಂದು ಬಾರಿ ಚಾಂಪಿಯನ್ ಆಗಿದೆ. ಮುಂಬೈ ಇಂಡಿಯನ್ಸ್ ಇದುವರೆಗೆ ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next