Advertisement
ನಿರ್ಮಾಣ ಸಹಿತ ವಿವಿಧ ಕ್ಷೇತ್ರಗಳ ಕಾರ್ಮಿಕರು ಬಹುತೇಕ ಹೊರ ರಾಜ್ಯಗಳಿಂದ ಬಂದವರು. ಪ್ರಸ್ತುತ ಅವರು ಊರಿಗೆ ಮರಳಿದ್ದಾರೆ. ಈಗ ಪ್ರತಿಷ್ಠೆ ಬದಿಗೊತ್ತಿ ಮುಂದೆ ಬಂದರೆ ಮತ್ತು ರಾಜ್ಯ ಸರಕಾರ ಪಣತೊಟ್ಟರೆ ಈಗಿನ ಅನಿವಾರ್ಯತೆಯನ್ನು ಅವಕಾಶ ವಾಗಿ ಪರಿವರ್ತಿಸಬಹುದು. ಅದಕ್ಕೆ ಇದು ಸಕಾಲವೂ ಹೌದು ಎಂದು ಸಣ್ಣ ಕೈಗಾರಿಕೆಗಳು ಮತ್ತು ಕಟ್ಟಡ ನಿರ್ಮಾಣ ಸಂಘಟನೆಗಳು ವಿಶ್ಲೇಷಿಸುತ್ತವೆ.ರಾಜ್ಯದ ಸಣ್ಣ ಕೈಗಾರಿಕಾ ವಲಯದಲ್ಲಿ 6.5 ಲಕ್ಷ ಸಣ್ಣ, ಅತೀ ಸಣ್ಣ ಉದ್ದಿಮೆಗಳಿವೆ. ಇಲ್ಲಿ 10ರಿಂದ 15 ಲಕ್ಷ ವಲಸೆ ಕಾರ್ಮಿಕರು. ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಲ್ಲಿ 6ರಿಂದ 7 ಲಕ್ಷ ವಲಸಿಗರು. ಪ್ರಸ್ತುತ ಅವರು ತವರಿಗೆ ಮರಳಿರುವುದರಿಂದ ರಾಜ್ಯ ದಲ್ಲಿ ಕನಿಷ್ಠ 10 ಲಕ್ಷ ಉದ್ಯೋಗ ಗಳು ತೆರವಾಗಿದ್ದು, ಈ ಜಾಗವನ್ನು ತುಂಬಲು ಸ್ಥಳೀಯರಿಗೆ ಅವಕಾಶ ಸಿಗಲಿದೆ ಎಂಬುದು ಸಣ್ಣ ಕೈಗಾರಿಕೆ ಸಂಘಟನೆಗಳ ಲೆಕ್ಕಾಚಾರ.
ಒಂದು ಕಾಲದಲ್ಲಿ ಬೆಂಗಳೂರು ಸಹಿತ ಇಡೀ ರಾಜ್ಯದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತಮಿಳರ ಪ್ರಾಬಲ್ಯ ಇತ್ತು. 90ರ ದಶಕದಲ್ಲಿ ನಡೆದ ಕಾವೇರಿ ಗಲಾಟೆಯ ಅನಂತರ ಚಿತ್ರಣ ಬದಲಾಯಿತು. ಆಗ ಉತ್ತರ ಕರ್ನಾಟಕ, ಉತ್ತರ ಭಾರತದವರಿಗೆ ಅವಕಾಶ ಸಿಕ್ಕಿತು. ಈಗ ಅವರೆಲ್ಲ ದೊಡ್ಡ ಸಂಖ್ಯೆಯಲ್ಲಿ ಹೊರಟು ಹೋಗಿದ್ದಾರೆ. ಇದು ಕನ್ನಡಿಗರಿಗೊಂದು ಸದವಕಾಶ. ವೃತ್ತಿ ಮೈಲಿಗೆ ಬಿಟ್ಟು ಈ ಅವಕಾಶಗಳನ್ನು ಕನ್ನಡಿಗರು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರವೂ ನೀಲನಕ್ಷೆಯೊಂದನ್ನು ರೂಪಿಸಬೇಕು ಎಂದು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತ ಹೋರಾಟದ ಮುಂದಾಳು ರಾ.ನಂ. ಚಂದ್ರಶೇಖರ್ ಅಭಿಪ್ರಾಯಪಡುತ್ತಾರೆ.
Related Articles
-ಆರ್. ರಾಜು, ಅಧ್ಯಕ್ಷರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)
Advertisement
ವಲಸಿಗರು ದಿನಕ್ಕೆ 13-14 ತಾಸು ಕೆಲಸ ಮಾಡುತ್ತಾರೆ. ಕೂಲಿ ಕಡಿಮೆ, ರಜೆ ಇಲ್ಲ. ವಲಸೆ ಕಾರ್ಮಿಕರು 30 ದಿನಗಳಲ್ಲಿ ಮುಗಿಸುವ ಯೋಜನೆಗೆ ಸ್ಥಳೀಯರಿಗೆ 40 ದಿನ ತಗಲುತ್ತದೆ ಎಂಬ ಭಾವನೆ ಇದೆ. ಇವನ್ನು ಮೆಟ್ಟಿ ನಿಂತರೆ ಸ್ಥಳೀಯರಿಗೆ ಅವಕಾಶ ಸಿಗುವುದರಲ್ಲಿ ಅನುಮಾನವಿಲ್ಲ.– ಎನ್.ಪಿ. ಸಾಮಿ, ಅಧ್ಯಕ್ಷರು, ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಕೇಂದ್ರ ಸಂಘ.