Advertisement

ನಿಮ್ಮ ವಾಸ್ತುದೋಷ ನಿವಾರಣೆ ಇವರಿಂದ ಮಾತ್ರ ಸಾಧ್ಯ

05:50 PM Jun 19, 2017 | Harsha Rao |

ಭೂ ವರಾಹ ಸ್ವಾಮಿಯು ಮನೆಯ ವಾಸ್ತು ದೋಷವನ್ನು ನಿವಾರಿಸುವಲ್ಲಿ ಒಳ್ಳೆಯ ಫ‌ಲ ಕೊಡುತ್ತಾನೆ. ವರಾಹ ಸ್ವಾಮಿ
ಎಂದರೆ ಬೇರೆ ಯಾರೂ ಅಲ್ಲ. ಶ್ರೀಮನ್ನಾರಾಯಣನೇ ಭೂ ವರಾಹ ಸ್ವಾಮಿ. ಅವನೇ ಮಹಾ ವಿಷ್ಣು. ವಿಶ್ವದ ಸಂಬಂಧವಾಗಿ ಭೂಮಿಯ ಸಂಬಂಧವಾಗಿ ವಿಷ್ಣುವಿನ ಪಾತ್ರರಕ್ಷಣೆಯ ವಿಚಾರವಾಗಿ ಬಹಳ ಪ್ರಧಾನವಾದದ್ದು. ಭೂಮಿ ಎಂದರೆ ಸಾûಾತ್‌ ಲಕ್ಷಿà. 

Advertisement

ಧಾರಿಣೀಯೇ ಇವಳು. ನಮ್ಮೆಲ್ಲರ ಭಾರವನ್ನು ಹೊರುತಿರುವ, ಹೊತ್ತರೂ ಸಹನೆ ಕಳೆದುಕೊಳ್ಳದ ಇವಳು ಆಹಾರವನ್ನೂ ವಜ್ರವೈಢೂರ್ಯದಂಥ ಅಪಾರ ಕಾಂತಿ ರತ್ನರಾಶಿಗಳನ್ನೂ ಅನೇಕ ರೀತಿಯ ನಮಗೆ ಅವಶ್ಯವಿರುವ
ಲೋಹಗಳನ್ನು ಬಂಗಾರ ಬೆಳ್ಳಿಯಂಥ ಬೆಲೆಬಾಳುವ ವಸ್ತುಗಳನ್ನು ಒದಗಿಸುತ್ತಾಳೆ. ನಾವು ನಡೆಸುವ ಎಲ್ಲಾ ರೀತಿಯ ಪ್ರಕೃತಿಯ ಮೇಲೆ ಅಂತಜಾìಲಕ್ಕಾಗಲೀ, ಗಣಿಗಾರಿಕೆಯ ಸಂಬಂಧವಾಗಿರಲಿ, ಕಟ್ಟಡಗಳ ರಚನೆಗಾಗಿರಲಿ, ಸಸ್ಯ ಸಂಪತ್ತಿನ ಲೂಟಿಯನ್ನೇ ನಡೆಸುತ್ತಿರುವುದಾಗಲೀ, ನಿರಂತರವಾಗಿ ನಡೆಸುವ ದೌರ್ಜನ್ಯಗಳನ್ನು ಸಹನೆಯಿಂದ ಸಹಿಸಿಕೊಳ್ಳುತ್ತಿದ್ದಾಳೆ. ಒಂದು ಮಿತಿಯ ನಂತರ ನಾಶಕ್ಕೆ ಆಕೆ ಸಹಜವಾಗಿಯೇ ಏನನ್ನೂ ಮಾಡಲಾಗದ ಅಸಹಾಯಕತೆಗೆ ತುತ್ತಾಗಬಲ್ಲಳು. ಈಗಾಗಲೇ ಇದನ್ನು ನಾವು ಮನಗಾಣುತ್ತಿದ್ದೇವೆ.

ಭೂವರಾಹ ಸ್ವಾಮಿಯಿಂದ ಭೂಮಿಯ ರಕ್ಷಣೆ ಹಿರಣ್ಯ ಕಶಪುವಿನ ತಮ್ಮ ಹಿರಣ್ಯಾಕ್ಷ ಹರಿಯ ದ್ವೇಷಿ. ಒಮ್ಮೆ ವಿಷ್ಣು
ಪತ್ನಿಯಾದ ಭೂ ದೇವಿಯನ್ನು ಚಾಪೆಯಂತೆ ಸುತ್ತಿ, ಲಪಟಾಯಿಸುವ ಸಲುವಾಗಿ ದೌರ್ಜನ್ಯ ನಡೆಸಲು ಮುಂದಾದಾಗ ಮಹಾವಿಷ್ಣುವು ವರಾಹ ರೂಪದಲ್ಲಿ ಅಂದರೆ ಹಂದಿಯ ರೂಪದಲ್ಲಿ ಬಂದು ಭೂದೇವಿಯನ್ನು ಸಂರಕ್ಷಿಸುತ್ತಾನೆ. ಇಷ್ಟೇ ಅಲ್ಲ, ಹಿರಣ್ಯಾಕ್ಷನನ್ನು ತನ್ನ ಹರಿತವಾದ ಕೋರೆ ುಂದ ಸಿಗಿದು ಕೊಲ್ಲುತ್ತಾನೆ. ತನ್ನ ಪ್ರೀತಿಯ ಪತ್ನಿ ಲಕ್ಷಿ$¾ ಸ್ವರೂಪಳಾದ ಭೂಮಿಗೆ ಬಂದ ಕುತ್ತನ್ನು ತಪ್ಪಿಸುತ್ತಾನೆ. ಇದು ವಿಷ್ಣು ಪುರಾಣದ ಕತೆ.

ಒಟ್ಟಿನಲ್ಲಿ ಭೂದೇವಿಗೆ ಆತಂಕ ಬಂದಾಗಲೆಲ್ಲಾ ವಿಷ್ಣುವಿನ ರಕ್ಷೆ ಇದೆ. ನಾವು ಭೂದೇವಿಯ ಮಕ್ಕಳು. ನಾವೇ ಈಗ ಮಕ್ಕಳಂತೆ ವರ್ತಿಸುವುದು ಬಿಟ್ಟು ಹಿರಣ್ಯಾಕ್ಷ ಎಂಬ ಅಸುರನಂತೆ ಭೂಮಿಯನ್ನು ಹಿಂಸಿಸುತ್ತಿದ್ದೇವೆ. ನಮ್ಮ ನಾಶಕ್ಕೆ ನಾವೇ ಗೋರಿಗಳನ್ನು ತೋಡುತ್ತಿದ್ದೇವೆ. ಭೂಮಿಯ ಧಾರಣ ಶಕ್ತಿ ಸವಕಳಿಯಾಗಿ ಭೂಕಂಪನಗಳು ಒಂದು ಮಿತಿಯನ್ನು ದಾಟಿ ಅಪಾಯದ ಗಂಟೆ ಭಾರಿಸುತ್ತಿದೆ. ಸುರಕ್ಷಿತ ವಲಯದಲ್ಲಿದ್ದ ಬೆಂಗಳೂರು ಕೂಡಾ ಕ್ಷಿಪ್ರವಾಗಿ ಪರಿವರ್ತನ ಗೊಳ್ಳುತ್ತಾ ಸಹಜವಲ್ಲದ ಭೂಕಂಪನವನ್ನು ಅನುಭಸುತ್ತಿದೆ. ಈಗೊಂದು ತಿಂಗಳ ಹಿಂದೆ ಕಾರಣವೇ ಇರದೆ ಬೆಂಗಳೂರು, ಮಂಡ್ಯ, ಚನ್ನಪಟ್ಟಣಗಳು ಕೊಂಚ ಕಂಪಿಸಿತ್ತು. ಕಾಡು ಕಡಿದಿದ್ದೇವೆ. ಭೂಮಿಯನ್ನು ಮಿತಿಮೀರಿ ತೋಡುತ್ತಿದ್ದೇವೆ. ಅಂತರ್ಜಲ ಬಾಚುತ್ತಿದ್ದೇವೆ. ನಾಶಕ್ಕೆ ಇನ್ನೇನು ಬೇಕಾಗಿದೆ. ಬೆಂಗಳೂರನ್ನೇ ಗಮನಿಸಿ.
ಎಲ್ಲಿ ಬೇಕಾದಲ್ಲಿ ಮನೆ ಅಪಾರ್‌rಮೆಂಟ್‌ ವಾಸ್ತು ವಿಚಾರಗಳು ಮನಸ್ಸಿಗೆ ಬಂದ ಹಾಗೆ ಕಲಸುಮೇಲೋಗರ. ಹಣವಿದ್ದರೂ ಸುಖವಿಲ್ಲ. ಹಣ ಇರದಿದ್ದರೂ ಸುಖವಿಲ್ಲ.

ವಾಸ್ತು ದೋಷ ಛೇದನಕ್ಕೆ ಭೂವರಾಹ ಸ್ವಾಮಿ ಸಾಧಕರು, ಆರಾಧಕರು ಕೆಲವು ವಿಶೇಷ ಶಕ್ತಿಯನ್ನು ಪಡೆದಿರುತ್ತಾರೆ. ಶಕ್ತಿ ದೇವತೆಗಳಾದ ರಾಜ ರಾಜೇಶ್ವರಿ, ಗಣಪತಿ, ಮಾರುತಿ, ದತ್ತಾತ್ರೇಯ ಆರಾಧನೆ ಇವೆಲ್ಲಾ ರಾಮರûಾ ಸ್ತೋತ್ರ ಸಿದ್ದಿ – ಇತ್ಯಾದಿಗಳಿಂದ ವಿಶೇಷವಾದ ಪಾಸಿಟಿವ್‌ ಪವರ್‌ ಸಂಪಾದಿಸಿಕೊಂಡ ಅವಧೂತರುಗಳು ನಮ್ಮ ನಡುವೆ ಇದ್ದಾರೆ. ಅವಧೂತ ಶಕ್ತಿ ಹಾಗೆ ಯಾರು ಯಾರಿಗೋ ಸಿದಿಟಛಿಸುವುದಿಲ್ಲ. ಅವಧೂತರು ತಾವು ಎಂದು ಹೇಳಿಕೊಳ್ಳುವ ಜನ ಢೋಂಗಿತನ ತೋರಿಸುವ ಕಣ್ಣಿಗೆ ಮಣ್ಣೆರಚುವ ತಂತ್ರ ಮಾಡುತ್ತಾರೆ. ಆದರೆ ಸೂಕ್ತವಾದ ಶಕ್ತಿ ಇರುವವರು ಒಂದು ವಿಶೇಷವಾದ ಶಕ್ತಿ ತುಂಬಿ ಪರಾಶಕ್ತಿಯನ್ನು ಅನಾವರಣಗೊಳಿಸುತ್ತಾರೆ. ಎಷ್ಟೇ ಹೆಣಗಾಡಿದರೂ ವಾಸ್ತುವಿನ ವಿಚಾರ ಯಾವುದೇ ಮನೆ, ವಸತಿ, ಸಮುತ್ಛಯ, ಸಂಕೀರ್ಣ ವಾಸ್ತು ದೋಷಗಳಿಂದ ಮುಕ್ತವಾಗಿರುವುದಿಲ್ಲ. ಇಂಥ
ಸಂದರ್ಭದಲ್ಲಿ ಭೂವರಾಹಸ್ವಾಮಿಯು ಅನುಗ್ರಹಪೂರ್ವಕ ಉಪಸ್ಥಿತಿ ವಾಸ್ತುದೋಷಗಳನ್ನು ಕರಗಿಸುತ್ತದೆ. ಸಂಗಡ ಸ್ವಾಮಿಯ ಬಗೆಗಿನ ಸೂಕ್ತ ಧ್ಯಾನ, ಅನುಷ್ಠಾನಗಳು ಆಗಬೇಕು. ದೇವಿಯು ಇಡೀ ಜಗತ್ತನ್ನು ಹೊತ್ತು ಜಗತ್ತೇ ಅವಳಾಗಿರುವಾಗ, ಅವಳನ್ನು ಯುಗಂಧರಾ ಎಂದು ಕರೆಯಲ್ಪಡುತ್ತಾಳೆ. ಅವಳನ್ನು ಸಂರಕ್ಷಿಸುವ ವಿಷ್ಣುವೇ ವಾಸ್ತುದೋಷವನ್ನು ನಿವಾರಣೆ ಮಾಡುತ್ತಾನೆ.

Advertisement

– ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next