Advertisement
ಕುರು ದ್ವೀಪ ಪ್ರದೇಶವಾಗಿದ್ದು, ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದೆ. ಈ ಪ್ರದೇಶವು 40 ಎಕರೆ ಭೂ ಭಾಗ ಹೊಂದಿದೆ. 10 ಮನೆಗಳಿವೆ. ಮೊದಲು 100ಕ್ಕೂ ಅಧಿಕ ಜನರು ಇದ್ದು, ಈಗ 60 ಜನರು ವಾಸವಾಗಿದ್ದಾರೆ. ನಡು ರಾತ್ರಿಯಲ್ಲಿ ತುರ್ತು ಆರೋಗ್ಯ ದೃಷ್ಟಿಯಿಂದ ಆಸ್ಪತ್ರಗೆ ದಾಖಲಾಗಬೇಕಾದರೆ ದೋಣಿಗೇ ಅಂಟಿಕೊಳ್ಳಬೇಕು.ದೋಣಿ ಇದ್ದರೆ ಬದುಕು
ಮಳೆಗಾಲದ ದಿನಗಳನ್ನು ಆತಂಕದಿಂದ ಕಳೆಯುತ್ತಿದ್ದು, ಸೌರ್ಪಣಿಕಾ ನದಿ ಮುನಿಸಿಕೊಂಡಾಗ ಮನೆಯೊಳಗೆ ನೀರು ತುಂಬಿರುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯನ್ನು ಭೇದಿಸಿಕೊಂಡು ತಾವೇ ಮುಂದಾಗಿ ದೋಣಿ ಬಳಸಿಕೊಂಡು ತಮ್ಮ ಕಾಯಕಗಳಿಗೆ ತೆರಳಬೇಕು.
ಕುರುವಿನಿಂದ 20 ಮಕ್ಕಳು ನಾಡ ಕೋಟೆಗುಡ್ಡೆ ಹಾಗೂ ಇತರೆ ಶಾಲೆಗಳಿಗೆ ಹೋಗಿ ಬರಲು ದೋಣಿಯೇ ಆಸರೆಯಾಗಿದೆ. ನೀರಿನ ಅಬ್ಬರದ ನಡುವೆ ನದಿ ದಾಟುವಾಗ ಎದೆ ಝಲ್ಲೆನ್ನುತ್ತದೆ.
Related Articles
Advertisement
ಕೃಷಿ ಚಟುವಟಿಕೆಗೆ ತೊಂದರೆನದಿ ತುಂಬಿ ಹರಿಯುತ್ತಿರುವುದರಿಂದ ಜನತೆ ಕೃಷಿ ಉಪಕರಣಗಳನ್ನು ತರಲು ಹಾಗೂ ಬೆಳೆದ ಬೆಳೆಗಳನ್ನು ನಗರಕ್ಕೆ ಮಾರುಕಟ್ಟೆಗೆ ಸಾಗಿಸುವ ಸಂದರ್ಭ ಇವರ ಸ್ಥಿತಿ ತೀರಾ ಕಷ್ಟದ್ದು. ಮಳೆಗಾಲದಲ್ಲಿ ನೀರಿನ ಸೆಳೆತ ಅಧಿಕವಿದ್ದು. ಇಲ್ಲಿಂದ ವರಹಾ ದೇವಸ್ಥಾನದ ತೀರದ ವರೆಗೆ ಹೋಗಲು ಅಸಾಧ್ಯ. ಮರವಂತೆ ಕೇಶವ ಬಬ್ಬೊàರ್ಯ ದೇವಸ್ಥಾನದ ಮೂಲಕ ಸುತ್ತು ಬಳಸಿ ಕಾಲು ದಾರಿಯಲ್ಲಿ ಕ್ರಮಿಸಿದಲ್ಲಿ ಮಾತ್ರ ಬೇಕಾದ ವಸ್ತುಗಳನ್ನು ತರಲು ಹೋಗಬಹುದಾಗಿದೆ. ಕರುವಿನ ಜನರ ನೆಮ್ಮದಿಯ ಓಡಾಟಕ್ಕೆ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಇನ್ನಾದರೂ ಸೇತುವೆ ಭಾಗ್ಯ ದೊರಕಿಸುತ್ತಾರೆಯೇ ಕಾದು ನೊಡಬೇಕಿದೆ.. ಬೇಡಿಕೆಗೆ ಸ್ಪಂದಿಸಿ
ಮಳೆಗಾಲದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ನದಿ ದಾಟುವುದು ದುಸ್ಸಾಹಸ ಮಾಡಿದಂತೆ, ಮಳೆಗಾಲದಲ್ಲಿ ಆತಂಕದಿಂದಲ್ಲೇ ದಿನಗಳನ್ನು ದೂಡುವಂತಾಗಿದೆ. ಜನಪ್ರತಿನಿಧಿಗಳು ಸಮಸ್ಯೆಗಳನ್ನು ಅರಿತು ನಮ್ಮ ಬೇಡಿಕೆಗೆ ಸ್ಪಂದಿಸಲಿ.
–ರಾಮಚಂದ್ರ ಹೆಬ್ಟಾರ್,
ಕುರು ನಿವಾಸಿ ಬೇಡಿಕೆ ಪರಿಗಣಿಸಲಾಗಿದೆ
ಕುರು ಪ್ರದೇಶದ ಜನರ ಸಮಸ್ಯೆಗಳ ಕುರಿತು ತಿಳಿದಿದ್ದೇನೆ. ಸೇತುವೆ ನಿರ್ಮಾಣವನ್ನು ಆದ್ಯತೆಯ ಮೇರೆಗೆ ಪರಿಗಣಿಸುತ್ತೇನೆ.
-ಬಿ.ಎಂ. ಸುಕುಮಾರ್ ಶೆಟ್ಟಿ,
ಬೈಂದೂರು ಶಾಸಕರು -ಕೃಷ್ಣ ಬಿಜೂರು